ಬೆಂಗಳೂರು: ರಾಜಧಾನಿ (Capital City) ಸಿಲಿಕಾನ್ ಸಿಟಿಯಲ್ಲಿ (Silicon City) ವರುಣನ ಆರ್ಭಟ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ನಗರದಲ್ಲಿ ಮತ್ತೆ ಹಳೇ ಸಮಸ್ಯೆ ಶುರುವಾಗಿದೆ. ಸ್ವಲ್ಪ ದಿನ ನಿರಾಳದಿಂದ ಇದ್ದ ಜನರಿಗೆ ಮತ್ತೆ ಕಿರಿಕಿರಿ ಉಂಟಾಗುತ್ತಿದೆ. ಕಳೆದ ಮೂರು ದಿನದಿಂದ ಮಳೆ (Rain) ಬಂದು ನಗರದಲ್ಲಿ ಅನೇಕ ಅನಾಹುತಗಳ ಸಂಭವಿಸಿವೆ. ಇದರ ಬೆನ್ನಲ್ಲೇ ಜನರಿಗೆ ಮತ್ತೆ ಈ ರಸ್ತೆಗುಂಡಿಗಳ (Pothole) ಸಮಸ್ಯೆ ಶುರುವಾಗಿದೆ. ಸದ್ಯಕ್ಕೆ ಪಾಥ್ ಹೋಲ್‌ಗಳ ಸಮಸ್ಯೆಗೆ ಮುಕ್ತಿ ಇಲ್ವಾ ಎನ್ನುವಂತಾಗಿದೆ.
ಕಳೆದ ನಾಲ್ಕೈದು ತಿಂಗಳ ಹಿಂದೆಯಷ್ಟೇ ಹಾಕಿದ್ದ ಡಾಂಬಾರು ಮಳೆಗೆ ಕಿತ್ತು ಬರ್ತಿದೆ. ಈ ಮೂಲಕ ಕಳಪೆ ಕಾಮಗಾರಿ ಬಣ್ಣ ಬಯಲಾಗ್ತಿದೆ. ಈ ಬಗ್ಗೆ ನ್ಯೂಸ್18 ರಿಯಾಲಿಟಿ ಚೆಕ್ ಮಾಡಿದ್ದು ನಮ್ಮ ನಗರದ ರಸ್ತೆಗಳ ಅಸಲಿ ಬಣ್ಣ ಬಯಲಾಗಿದೆ.
ಇದು ರಾಮಕೃಷ್ಣ ಆಶ್ರಮದ ಸರ್ಕಲ್. ನಿನ್ನೆ ಮಳೆ ಬಂದ ಕಾರಣ, ರಸ್ತೆ ಕಿತ್ತು ಬಂದಿದೆ. ಇಲ್ಲಿ ಹಾಕಿದ್ದ ಟಾರ್ ಕಿತ್ತು ಬಂದು ಜಲ್ಲಿಕಲ್ಲುಗಳು ಮಾತ್ರ ರಸ್ತೆಯಲ್ಲಿವೆ. ಇದು ಕಳಪೆ ಕಾಮಗಾರಿಯೆಂದು ಎಂಥವರಿಗಾದರೂ ತಿಳಿಯುತ್ತದೆ.
ಇನ್ನು, ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸುಮಾರು ದಿನಗಳಿಂದ ರಸ್ತೆ ಗುಂಡಿ ಇತ್ತು, ಈ ಬಗ್ಗೆ ನ್ಯೂಸ್ 18 ವಿಸೃತ ವರದಿ ಪ್ರಸಾರ ಮಾಡಿತ್ತು. ಆ ಬಳಿಕ ಬಿಎಂಟಿಸಿಯಿಂದಲೇ ಟಾರ್ ಹಾಕಿಸಿ ಪರಿಹಾರ ನೀಡಿದ್ರು. ಆದ್ರೆ ಪ್ರೀ ಮಾನ್ಸೂನ್‌ನ ಅಬ್ಬರಕ್ಕೆ ಮತ್ತೆ ರಸ್ತೆ ಗುಂಡಿ ನಿರ್ಮಾಣವಾಗಿದೆ.
ಇದು ಸ್ಯಾಂಪಲ್ ಅಷ್ಟೇ. ಬೆಂಗಳೂರಿನಲ್ಲಿ ಮತ್ತೆ ರಸ್ತೆ ಗುಂಡಿಗಳ ಸಮಸ್ಯೆ ಶುರುವಾಗುತ್ತಿದೆ, ಪಾಲಿಕೆ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಮುಕ್ತಿ ಕೊಡಬೇಕಿದೆ. ನೂತನ ಸರ್ಕಾರ ರಸ್ತೆ ಗುಂಡಿ ಮುಚ್ಚಲು ಮುಂದಾಗದಿದ್ರೆ ಜನ ಛೀ ಥೂ ಅನ್ನೋದು ಗ್ಯಾರಂಟಿ. (ವರದಿ: ಹಂಸ ಶ್ಯಾಮಲ, ನ್ಯೂಸ್ 18, ಬೆಂಗಳೂರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ