• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪ್ರವಾಹ ಕಳೆದು ವರ್ಷವಾದರು ಸಿಗದ ಪರಿಹಾರ; ಮುರಿದು ಬಿದ್ದ ಮನೆಯಲ್ಲೇ ವಾಸ ಮಾಡುತ್ತಿದ್ದಾಳೆ ಒಂಟಿ ಮಹಿಳೆ

ಪ್ರವಾಹ ಕಳೆದು ವರ್ಷವಾದರು ಸಿಗದ ಪರಿಹಾರ; ಮುರಿದು ಬಿದ್ದ ಮನೆಯಲ್ಲೇ ವಾಸ ಮಾಡುತ್ತಿದ್ದಾಳೆ ಒಂಟಿ ಮಹಿಳೆ

ಮರಿದು ಬಿದ್ದ ಮನೆ

ಮರಿದು ಬಿದ್ದ ಮನೆ

ಸಂತ್ರಸ್ತೆ ಮಹಿಳೆ ಲಕ್ಷ್ಮಿಬಾಯಿ ಗುಂಡಪೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಒಬ್ಬ ಮಗ ಅಕಾಲಿಕ ನಿಧನರಾಗಿದ್ದು, ಇನ್ನೊಬ್ಬ ಮಗ ತಾಯಿಯಿಂದ ದೂರವಾಗಿದ್ದಾನೆ. ಈಗ ಹಲವು ವರ್ಷದಿಂದ ಮಹಿಳೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ. ಕಳೆದ ಬಾರಿ ಪ್ರವಾಹಕ್ಕೆ ಇದ್ದ ಸೂರು ಕೂಡ ಕೊಚ್ಚಿ ಹೋಗಿ ಲಕ್ಷ್ಮಿಬಾಯಿ ಅಕ್ಷರಶಃ ಬೀದಿಗೆ ಬಿದ್ದಿದ್ದಾಳೆ.

ಮುಂದೆ ಓದಿ ...
  • Share this:

ಚಿಕ್ಕೋಡಿ (ಆ.1): ಕಳೆದ ಬಾರಿ ಪ್ರವಾಹದಿಂದ  ಇಡಿ ಉತ್ತರ ಕರ್ನಾಟಕದ ಜನರ ಜೀವನವೇ  ಅಸ್ತವ್ಯಸ್ತವಾಗಿತ್ತು. ಆ ಪ್ರವಾಹದ ಭೀಕರತೆ ಇನ್ನು ಕಣ್ಣು ಮುಂದೆ ಇರುವಾಗಲೆ ಮತ್ತೆ ಪ್ರವಾಹದ ಭೀತಿ ಉತ್ತರ ಕರ್ನಾಟಕ ಜನರನ್ನ ಕಾಡುತ್ತಿದೆ. ಕಳೆದ ಬಾರಿ ಪ್ರವಾಹದ ಹೊಡೆತಕ್ಕೆ ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳಿಗೆ  ಸರಕಾರದಿಂದ  ಇನ್ನೂ ಪರಿಹಾರವೆ ಸಿಕ್ಕಿಲ್ಲ. ರಾಜ್ಯ ಸರ್ಕಾರ  ಮಾತ್ರ ಪರಿಹಾರ ನೀಡುವ ಮಾತುಗಳನ್ನ ಹೇಳುವುದನ್ನು ಬಿಟ್ಟಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನ  ಕಳೆದ ವರ್ಷದ ನೆರೆ ಹಾವಳಿಗೆ  ಮನೆ ಕಳೆದುಕೊಂಡ ವೃದ್ಧ ಮಹಿಳೆಗೆ ಇನ್ನು ಪರಿಹಾರ ಸಿಕ್ಕಿಲ್ಲ. ಕಳೆದು ಒಂದು ವರ್ಷದಿಂದ ಈ ಮಹಿಳೆ ಬಿದ್ದು ಹೋದ ಮನೆಯಲ್ಲಿ ಜೀವನ ಸಾಗಿಸುತ್ತಿರುವು ಮಾತ್ರ ಮನಕಲಕುವಂತಿದೆ.


ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕಳೆದ ಬಾರಿ ಪ್ರವಾಹ ಬಂದಿತ್ತು. ಹಿರಣ್ಯಕೇಶಿ ನದಿಯ ಅಬ್ಬರಕ್ಕೆ ಇಲ್ಲಿಯ ಲಕ್ಷ್ಮಿಬಾಯಿ ಗುಂಡಪೆ ಎಂಬ ಮಹಿಳೆಯ ಮನೆ ಕುಸಿದು ಬಿದಿದ್ದೆ. ಅಂದಿನಿಂದ ಇಂದಿನವರೆಗೆ ಈ ಮಹಿಳೆ ಅದೆ ಮುರುಕಲು ಮನೆಯಲ್ಲಿ ವಾಸಿರುವುದು ಮಾತ್ರ ನಾಗರಿಕರ ಸಮಾಜ ತಲೆ ತಗ್ಗಿಸುವಂತಾಗಿದೆ.


ಸರಕಾರ ಎ'ಬಿ'ಸಿ ಕೆಟಗೆರಿಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿತ್ತು.  ಕಂದಾಯ ಇಲಾಖೆ ಸರ್ವೆ ಕೂಡ ಮಾಡಿತ್ತು ಅದೆ ಪ್ರಕಾರ ಮನೆ ಕಳೆದುಕೊಂಡು ಮಹಿಳೆ ಪಟ್ಟಣದ ಪುರಸಭೆಗೆ ಎರಡು ಬಾರಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು ಇನ್ನು ಯಾವುದೇ ಅಧಿಕಾರಿಗಳು ಮಾತ್ರ ಭೇಟಿ ನೀಡಿ ಸಂತ್ರಸ್ತೆಯ ಅರ್ಜಿ ಬಗ್ಗೆ ವಿಚಾರಿಸಿಲ್ಲ. ಒಬ್ಬಂಟಿಯಾಗಿರುವ ಈ ಮಹಿಳೆ ಅದೇ ಮುರುಕುಲ ಮನೆಯಲ್ಲಿ ವಾಸಿಸುತ್ತಿದ್ದು ಪುರಸಭೆಗೆ ಅರ್ಜಿ ಸಲ್ಲಿಸಿದರು ಯಾರು ಇದರ ಬಗ್ಗೆ ಗಮನಹರಿಸಿಲ್ಲ.


ಈ ಸಂತ್ರಸ್ತೆ ಮಹಿಳೆ ಲಕ್ಷ್ಮಿಬಾಯಿ ಗುಂಡಪೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಒಬ್ಬ ಮಗ ಅಕಾಲಿಕ ನಿಧನರಾಗಿದ್ದು, ಇನ್ನೊಬ್ಬ ಮಗ ತಾಯಿಯಿಂದ ದೂರವಾಗಿದ್ದಾನೆ. ಈಗ ಹಲವು ವರ್ಷದಿಂದ ಮಹಿಳೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ. ಕಳೆದ ಬಾರಿ ಪ್ರವಾಹಕ್ಕೆ ಇದ್ದ ಸೂರು ಕೂಡ ಕೊಚ್ಚಿ ಹೋಗಿ ಲಕ್ಷ್ಮಿಬಾಯಿ ಅಕ್ಷರಶಃ ಬೀದಿಗೆ ಬಿದ್ದಿದ್ದಾಳೆ.


ಇನ್ನು ಸಂತ್ರಸ್ತೆಯ ಬಗ್ಗೆ ತಾಲೂಕು ಆಡಳಿತ ಮಾತ್ರ ಮೌನವಹಿಸಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಅವರನ್ನ ವಿಚಾರಿಸಿದರೆ ಲಕ್ಷ್ಮಿಬಾಯಿ ಗುಂಡಪೆ ಅವರು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ. ತಡವಾಗಿ ಅರ್ಜಿ ಸಲ್ಲಿಸಿದ್ದರಿಂದ ಪರಿಹಾರ ಮಂಜೂರರಾಗಿಲ್ಲ. ನಮ್ಮ ಕಡೆಯಿಂದ ಅರ್ಜಿಯನ್ನ ತಹಶಿಲ್ದಾರ ಅವರಿಗೆ ಕಳುಹಿಸಿದ್ದೆವೆ ಎಂದು ಜಾರಿಕೊಂಡಿದ್ದಾರೆ.


ಒಟ್ಟಿನಲ್ಲಿ ರಾಜ್ಯ ಸರಕಾರ ಪ್ರವಾಹ ಸಂತ್ರಸ್ತರಿಗೆ ಒಂದು ವರ್ಷ ಕಳೆದರು ಪರಿಹಾರ ನೀಡದೆ ಇರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಇದು ಒಬ್ಬ ಮಹಿಳೆಯ ಸಮಸ್ಯೆ ಮಾತ್ರವಲ್ಲ ಇಂತಹ ನೂರಾರು ಕುಟುಂಬಗಳು ಇದುವರೆಗೂ ಪರಿಹಾರ ಸಿಗದೆ ನೊಂದಿದ್ದಾರೆ ಇನ್ನಾದ್ರು ಸರ್ಕಾರ ಮತ್ತೊಮ್ಮೆ ಇಂತಹ ಉಳಿದ ಜನರ ಕಡೆ ಗಮನ ಹರಿಸಿ ಪರಿಹಾರ ನೀಡಲಿ ಎನ್ನುವುದು ಜನರ ಆಶಯ.

Published by:Rajesh Duggumane
First published: