• Home
  • »
  • News
  • »
  • state
  • »
  • Karnataka Election: ಬಿಜೆಪಿಗೆ ಗುಜರಾತ್, ಕಾಂಗ್ರೆಸ್​ಗೆ ಹಿಮಾಚಲ ಮಾಡೆಲ್; ಕರ್ನಾಟಕ ಕದನ ಕಣದಲ್ಲಿ ಹತ್ತಾರು ಲೆಕ್ಕಾಚಾರ!

Karnataka Election: ಬಿಜೆಪಿಗೆ ಗುಜರಾತ್, ಕಾಂಗ್ರೆಸ್​ಗೆ ಹಿಮಾಚಲ ಮಾಡೆಲ್; ಕರ್ನಾಟಕ ಕದನ ಕಣದಲ್ಲಿ ಹತ್ತಾರು ಲೆಕ್ಕಾಚಾರ!

BJP, ಕಾಂಗ್ರೆಸ್​

BJP, ಕಾಂಗ್ರೆಸ್​

ರಾಹುಲ್ ಗಾಂಧಿ​, ಸೋನಿಯಾ ಗಾಂಧಿ ,ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ಕೊಟ್ಟು ಸಮಾವೇಶ ನಡೆಸಿ ಮತದಾರರ ಮನ ಗೆಲ್ಲೋದಕ್ಕೂ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.

  • Share this:

Karnataka Assembly Election 2023: ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳಷ್ಟೇ ಬಾಕಿಯಿದೆ. ಮಾರ್ಚ್​ ಕಳೆದ ಮೇಲೆ ಯಾವಾಗ ಬೇಕಿದ್ರೂ ಎಲೆಕ್ಷನ್ (Election)​ ಘೋಷಣೆ ಆಗಬಹುದು. ಹಾಗಾಗಿ ರಾಜ್ಯದಲ್ಲಿ ಎಲೆಕ್ಷನ್​ ಕಾವು ಜೋರಾಗ್ತಿದೆ. ಅದರಲ್ಲೂ ಗುಜರಾತ್​ ಫಲಿತಾಂಶ (Gujarat Election Results) ಕರ್ನಾಟಕ ಬಿಜೆಪಿಯವರಿಗೆ (Karnataka BJP) ಬೂಸ್ಟರ್​ ಡೋಸ್​​ ಸಿಕ್ಕಂತಾಗಿದ್ರೆ, ಹಿಮಾಚಲ ಪ್ರದೇಶ (Himachala Pradesh Election Results) ಫಲಿತಾಂಶ ಕಾಂಗ್ರೆಸ್ (Karnataka Congress)​ ಪಾಲಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಈ ಹಿನ್ನೆಲೆ ಎರಡೂ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ 2023ರ ಚುನಾವಣೆಗೆ ರೆಡಿಯಾಗುತ್ತಿವೆ.


ಗುಜರಾತ್​ ರಿಸಲ್ಟ್​, ಬಿಜೆಪಿ ಸ್ಟ್ರಾಟಜಿ


ಪಕ್ಷನಿಷ್ಠೆ ಇದ್ದರಷ್ಟೇ ಟಿಕೆಟ್​ ಭಿನ್ನಮತ ತೋರಿಸಿದರೆ ಔಟ್​ ಅನ್ನೋ ಸಂದೇಶ ಬಿಜೆಪಿ ಅಂಗಳದಲ್ಲಿ ಸಿದ್ಧವಾಗುತ್ತಿದೆ. ಹಳೇ ತಲೆಗಳಿಗೆ ಪಕ್ಷದ ಹೊಣೆ ಮತ್ತು ಯುವಕರಿಗೆ ಟಿಕೆಟ್​ ಘೋಷಣೆಗೂ ಮುಹೂರ್ತ ನಿಗದಿ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಜನಪರ ಸರ್ಕಾರ - ನೂರೆಂಟು ಯೋಜನೆಗಳ ಪ್ರಖರ ಪ್ರಚಾರ ಮಾಡೋಕು ನೀಲನಕ್ಷೆ ಸಿದ್ಧವಾಗ್ತಿದೆ. ಗೆಲ್ಲದ ಕ್ಷೇತ್ರಗಳಲ್ಲೇ ನೆಕ್ಸ್ಟ್​ ಫೈಟ್ ಗೆಲುವೇ ಟಾರ್ಗೆಟ್​ ಅನ್ನೋ ಸೂತ್ರನೂ ಸಿದ್ಧಪಡಿಸ್ತಿದ್ದು ಸಮುದಾಯಗಳ ಓಲೈಕೆ ಮಾಡುತ್ತಾ ಮತಗಳಿಕೆಯ ಮನವರಿಕೆಗೂ ಬಿಜೆಪಿ ಸರ್ವಸನ್ನದ್ಧವಾಗಿರೋದು ಕಂಡು ಬರುತ್ತಿದೆ.


ಇಷ್ಟು ಸ್ಟ್ರಾಟಜಿಗಳನ್ನ ರೆಡಿ ಮಾಡಿದ್ದು, ಶೀಘ್ರದಲ್ಲೇ ಕಾರ್ಯಗತಗೊಳಿಸಲು ರಾಜ್ಯ ಬಿಜೆಪಿ ನಾಯಕರು ವೇದಿಕೆ ರೆಡಿ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್​​ ಪಕ್ಷ ಬಿಜೆಪಿ ಸ್ಟ್ರಾಟಜಿಗಳನ್ನೆಲ್ಲಾ ಈಗ ಉಲ್ಟಾಸೀದಾ ಮಾಡಬೇಕು ಅಂತ ದೊಡ್ಡ ನೀಲನಕ್ಷೆಯನ್ನೇ ರೆಡಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.


ಹಿಮಾಚಲ ರಿಸಲ್ಟ್​, ಕೈ ಸ್ಟ್ರಾಟಜಿ


ಹಿಮಾಚಲದಲ್ಲಿ  ‘ಕಾಂಗ್ರೆಸ್​​’ಗೆ ಅಧಿಕಾರ ಸಿಕ್ಕಿರೋದನ್ನೇ ದೊಡ್ಡ ಪ್ರಚಾರ ಮಾಡೋದಕ್ಕೆ ನೀಲನಕ್ಷೆಯನ್ನ ಕೆಪಿಸಿಸಿ​ ಸಿದ್ಧಪಡಿಸುತ್ತಿದೆ. ಬಿಜೆಪಿ ವಿರುದ್ಧ ದಿನಕ್ಕೊಂದು ಹಗರಣದ ಅಸ್ತ್ರ ಬಿಡೋದು, ಆಮೇಲೆ ಅದನ್ನೇ  ಬ್ರಹ್ಮಾಸ್ತ್ರ ಮಾಡಿಕೊಳ್ಳೋದಕ್ಕೂ ಪ್ರಚಾರ ಸಮಿತಿ ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ.
ಶೀಘ್ರದಲ್ಲೇ ಅಭ್ಯರ್ಥಿಗಳನ್ನ ಘೋಷಿಸಿ ಅಖಾಡ ರೆಡಿ ಮಾಡೋದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮೆಗಾ ಪ್ಲಾನ್ ಎನ್ನಲಾಗಿದೆ.


ಇದನ್ನೂ ಓದಿ:  Siddaramaiah: ಬಿಜೆಪಿ ಕೇಳ್ತಿರೋ ‘ಆ’ ಒಂದು ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡೋದು ಯಾವಾಗ?


ಇದರ ಜೊತೆಗೆ ರಾಹುಲ್ ಗಾಂಧಿ​, ಸೋನಿಯಾ ಗಾಂಧಿ ,ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ಕೊಟ್ಟು ಸಮಾವೇಶ ನಡೆಸಿ ಮತದಾರರ ಮನ ಗೆಲ್ಲೋದಕ್ಕೂ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.


60:40 ಲೆಕ್ಕಾಚಾರ


60 ವರ್ಷ ಮೇಲ್ಪಟ್ಟವರನ್ನ ಮೇಲ್ಮನೆಗೆ ಕಳಿಸಿ ಹೆಚ್ಚು ಟಿಕೆಟ್​ ಯುವಪಡೆಗೆ ನೀಡೋದು ಎಂಬುದನ್ನು ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


ಹಲವು ಬಾರಿ ಗೆದ್ದಿದ್ದಾರೆ ಎನ್ನುವ ಕಾರಣಕ್ಕೆ ಅವಕಾಶ ಬೇಡ ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ಹಿರಿಯರನ್ನು ಪರಿಷತ್‌ಗೆ ಕಳುಹಿಸಿಕೊಡಿ. ಹೊಸಬರಿಗೆ ವಿಧಾನಸಭೆ ಚುನಾವಣೆಗೆ ಅವಕಾಶ ನೀಡಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಹೇಳಿದ್ದೇನೆ ಎಂದು ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.


ಇದನ್ನೂ ಓದಿ: DK Shivakumar-H Vishwanth: ಕೆಪಿಸಿಸಿಯಲ್ಲಿ 'ಬಾಂಬೆ ದೋಸ್ತಿ'ಗಳ ಮೀಟಿಂಗ್! ಮರಳಿ ಕಾಂಗ್ರೆಸ್ ಗೂಡು ಸೇರುತ್ತಾ 'ಹಳ್ಳಿ ಹಕ್ಕಿ'?


ಜೆಡಿಎಸ್ ಪಂಚರತ್ನ ರಥಯಾತ್ರೆ


ಗುಜರಾತ್​​ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ​ ಕಾಂಗ್ರೆಸ್ ಹಾಗೂ​​ ಬಿಜೆಪಿಗೆ ಶಕ್ತಿ ಸಿಕ್ಕಿರಬಹುದು. ಜೆಡಿಎಸ್​ ಪಕ್ಷವನ್ನ ಲೆಕ್ಕಕ್ಕಿಲ್ಲ ಅನ್ನೋ ಶತಪ್ರಯತ್ನನೂ ನಡೆಯುತ್ತಿದೆ. ಆದ್ರೆ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ (Former CM HD Kumaraswamy) ನಡೆಸ್ತಿರೋ ಪಂಚರತ್ನರಥಯಾತ್ರೆಗೆ (JDS Pancharatna yatre) ಸಿಗ್ತಿರೋ ಜನಬೆಂಬಲ, ಹೆಚ್​ಡಿಕೆ ಘೋಷಿಸಿರೋ ಪಂಚರತ್ನ ಘೋಷಣೆಗಳು 2 ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು