news18-kannada Updated:January 21, 2021, 9:10 PM IST
ನಟಿ ರಾಗಿಣಿ
ಆನೇಕಲ್ (ಜ. 21) : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟಿ ರಾಗಿಣಿ ಬರೋಬ್ಬರಿ 140 ದಿನಗಳ ಸೆರವಾಸ ಅನುಭವಿಸಿದ್ದಾರೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಾಮೀನು ಸಿಕ್ಕರೂ ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಇಲ್ಲದಂತೆ ಆಗಿದೆ. ಜೈಲಿನಲ್ಲಿರುವ ನಟಿ ರಾಗಿಣಿಗೆ ಬೇಲ್ ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಸಂತಸ ಪಟ್ಟಿದ್ದು, ಸದ್ಯ ಸೆರೆವಾಸದಿಂದ ಮುಕ್ತಿ ಸಿಕ್ಕಿತು ಎಂಬು ಖುಷಿ ಪಡುವ ಸಂದರ್ಭದಲ್ಲಿ ಅವರ ಬಿಡುಗಡೆ ಇಂದು ನಡೆಯುವುದಿಲ್ಲ ಎಂಬ ಸುದ್ದಿ ಸಿಕ್ಕಿದೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಪಡೆದ ರಾಗಿಣಿ ಅವರು ಜಾಮೀನು ಪ್ರತಿಯನ್ನು ಮೊದಲು ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಮೊದಲು ಸಲ್ಲಿಸಬೇಕು. ನ್ಯಾಯಾಲಯ ಸುಪ್ರೀಂ ಕೋರ್ಟ್ ಷರತ್ತುಗಳನ್ನು ಪೂರೈಸಿದ ಬಳಿಕ ಸಹಿ ಮಾಡಿ ನ್ಯಾಯಾಧೀಶರು ಧೃಢೀಕರಣ ಮಾಡಬೇಕು. ಆದರೆ ಸಂಜೆಯಾದರೂ ಜಾಮೀನು ಕಾಪಿ ಎನ್ ಡಿ ಪಿ ಎಸ್ ಕೋರ್ಟ್ ಗೆ ಬರಲಿಲ್ಲ. ಈ ಹಿನ್ನಲೆ ಅವರಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿಲ್ಲ
ಜಾಮೀನು ಪ್ರತಿ ಸಲ್ಲಿಕೆಗೆ ವಿಳಂಬವಾಗಿರುವ ಹಿನ್ನಲೆ ನಾಳೆ ರಾಗಿಣಿ ಪರ ವಕೀಲರು ಸುಪ್ರೀಂ ಕೋರ್ಟ್ ಜಾಮೀನು ಪ್ರತಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಹಾಜರು ಪಡಿಸಿ ಷರತ್ತುಗಳನ್ನು ಪೂರೈಸಿ, ನಂತರ ಅಮೀನ್ ಮೂಲಕ ಜಾಮೀನು ಕಾಪಿ ಪರಪ್ಪನ ಅಗ್ರಹಾರದ ಜೈಲಿಗೆ ತಲುಪಿಸಲಾಗುತ್ತದೆ.
ಸದ್ಯ ರಾತ್ರಿ 8 ಆದರೂ ಜಾಮೀನು ಪ್ರತಿ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿಲ್ಲ. ಹಾಗಾಗಿ ಜೈಲು ಬಂಧಿಯಾಗಿರುವ ನಟಿ ರಾಗಿಣಿ ಇಂದು ರಾತ್ರಿ ಕೂಡ ಪರಪ್ಪನ ಆಗ್ರಹಾರದಲ್ಲಿಯೇ ರಾತ್ರಿ ಕಳೆಯಬೇಕಿದೆ.
( ವರದಿ : ಆದೂರು ಚಂದ್ರು)
Published by:
Seema R
First published:
January 21, 2021, 9:10 PM IST