Operation Elephant: ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್! ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ ಸೆರೆ

ಕೊನೆಗೂ ಭಾನುಮತಿ ಎಂಬ ಹೆಣ್ಣಾನೆಯನ್ನ ಕಟ್ಟಿಹಾಕಿ ಮಲೆನಾಡಿಗರ ನಿದ್ದೆಗೆಡಿಸಿದ ಹಾವೇರಿ ಟಸ್ಕರ್ ಅನ್ನು ಅರಣ್ಯಾಧಿಕಾರಿಗಳು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಭಾನುಮತಿಯ ಪ್ರೇಮಪಾಶಕ್ಕೆ ಸಿಲುಕಿ ಏಕಾಂತದಲ್ಲಿದ್ದ ಹಾವೇರಿ ಟಸ್ಕರ್ ಕೊನೆಗೂ ಸೆರೆಯಾಗಿದೆ.

ಬಲೆಗೆ ಬಿದ್ದ ಆನೆ

ಬಲೆಗೆ ಬಿದ್ದ ಆನೆ

  • Share this:
ಚಿಕ್ಕಮಗಳೂರು: ಕಳೆದ ನಾಲ್ಕೈದು ತಿಂಗಳಿಂದ ಮಲೆನಾಡಿಗರ (Malenadu) ನಿದ್ದೆಗೆಡಿಸಿದ್ದ ಒಂಟಿ ಸಲಗ (Single Elephant) ಹಾವೇರಿ ಟಸ್ಕರ್ (Haveri Tusker) ಕೊನೆಗೂ ಬಲೆಗೆ ಬಿದ್ದಾಗಿದೆ. ಪುಂಡ ಆನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ (Koppa) ತಾಲೂಕಿನ ಎಲೆಮಡಲು ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಒಂಟಿ ಸಲಗವೊಂದು ದಾಂದಲೆ ನಡೆಸುತ್ತಿತ್ತು. ಹಾವೇರಿಯಲ್ಲಿ (Haveri) ಸೆರೆ ಹಿಡಿದಿದ್ದ ಒಂಟಿ ಸಲಗಕ್ಕೆ ಹಾವೇರಿ ಟಸ್ಕರ್ ಎಂದು ಹೆಸರಿಟ್ಟು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಬಿಟ್ಟಿದ್ದರು. ಆದರೆ, ಭದ್ರಾ ಅಭಯಾರಣ್ಯದಿಂದ ತಪ್ಪಿಸಿಕೊಂಡು ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಬೀಡು ಬಿಟ್ಟಿದ್ದ ಒಂಟಿ ಸಲಗ ನಾಲ್ಕೈದು ತಿಂಗಳಿಂದ ಭಾರೀ ಸಮಸ್ಯೆ ತಂದೊಡ್ಡಿತ್ತು. ಆ ಆನೆಯು ನಿನ್ನೆ ಖೆಡ್ಡಾಕ್ಕೆ ಬಿದ್ದಿದೆ.

ಗ್ರಾಮದಲ್ಲಿ ತೊಂದರೆ ಕೊಡುತ್ತಿದ್ದ ಆನೆ

ಈ ಒಂಟಿ ಸಲಗ ಹೊಲ-ಗದ್ದೆ-ತೋಟಗಳಲ್ಲಿ ದಾಂದಲೆ ಮಾಡುತ್ತಿತ್ತು. ಸ್ಥಳಿಯರು ಆನೆ ಕಾಟದಿಂದ ಹೈರಾಣಾಗಿದ್ದರು. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಎಲೆಮಡಿಲು ಗ್ರಾಮದ ಗುಡ್ಡದ ತುದಿಗೆ ಹೋಗಿ ನಿಲ್ಲುತ್ತಿತ್ತು. ಅಧಿಕಾರಿಗಳು ಬೆದರಿಸಿದರೆ ಕೆಳಗೆ ಬೀಳಬಹುದು ಎಂದು ಸುಮ್ಮನಾಗಿದ್ದರು. ಮರು ದಿನ ಮತ್ತೆ ಅಬ್ಬರ ಮಾಡುತ್ತಿತ್ತು. ಹಾಗಾಗಿ, ಸ್ಥಳೀಯರು ಆನೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು.

ಆನೆ ಸೆರೆಹಿಡಿಯುವ ಕಾರ್ಯಾಚರಣೆ


ಆನೆ ಸೆರೆ ಹಿಡಿಯಲು ಸತತ ಪ್ರಯತ್ನ

ಒಂಟಿ ಸಲಗನ ನಿರಂತರ ಆರ್ಭಟದಿಂದ ಮಲೆನಾಡಿಗರು ಸುಸ್ತಾಗಿ ಹೋಗಿದ್ದರು, ಕಾಫಿ, ಅಡಿಕೆ, ಮೆಣಸು ಸೇರಿದಂತೆ ಭತ್ತ ಗದ್ದೆಗಳು ಕೂಡ ನಾಶವಾಗಿದ್ದವು. ಕೊನೆಗೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು, ಒಂಟಿ ಸಲಗನ ಸೆರೆಗೆ ಒಂದು ವಾರ ನಿರಂತರ ಪ್ರಯತ್ನ ಮಾಡಿದ್ದು. ಈ ಹಿನ್ನೆಲೆ ಆನೆ ಹಿಡಿಯಲು ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಿಂದ ಐದು ಸಾಕಾನೆಗಳನ್ನ ತಂದು ಒಂಟಿ ಸಲಗದ ಸೆರೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದರು.

ಇದನ್ನೂ ಓದಿ: Elephant: ಹೆಣ್ಣಾನೆ ಬಳಸಿ ಕಾಡಾನೆಗೆ ಖೆಡ್ಡಾ! ಭಾನುಮತಿ ನಿನ್ನ ನಂಬಿದ್ರೆ ಫಜೀತಿ ಅಂತ ಒಂಟಿ ಸಲಗ ಎಸ್ಕೇಪ್!

ಭಾನುಮತಿಯ ಖೆಡ್ಡಾಕ್ಕೆ ಬಿದ್ದ ಟಸ್ಕರ್

ಕೊನೆಗೂ ಭಾನುಮತಿ ಎಂಬ ಹೆಣ್ಣಾನೆಯನ್ನ ಕಟ್ಟಿಹಾಕಿ ಮಲೆನಾಡಿಗರ ನಿದ್ದೆಗೆಡಿಸಿದ ಹಾವೇರಿ ಟಸ್ಕರ್ ಅನ್ನು ಅರಣ್ಯಾಧಿಕಾರಿಗಳು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಮೋಹಿನಿ, ಭಾನುಮತಿಯ ಪ್ರೇಮಪಾಶಕ್ಕೆ ಸಿಲುಕಿ ಏಕಾಂತದಲ್ಲಿದ್ದ ಹಾವೇರಿ ಟಸ್ಕರ್ ಕೊನೆಗೂ ಸೆರೆಯಾಗಿದೆ. ಐದು ಸಾಕಾನೆಗಳು ಕೂಡ ಒಂದು ಒಂಟಿ ಸಲಗವನ್ನ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ನಂತರ ಹೆಣ್ಣಾನೆ ಭಾನುಮತಿಯಿಂದ ಒಂಟಿ ಸಲಗನ ಸೆರೆ ಹಿಡಿಯಲು ಮುಂದಾದ ಅರಣ್ಯ ಅಧಿಕಾರಿಗಳ ಪ್ಲಾನ್ ಕೂಡ ಉಲ್ಟಾ ಹೊಡೆದಿತ್ತು.

ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್


ಕೊನೆಗೂ ಆನೆ ಸೆರೆ ಹಿಡಿದ ಅಧಿಕಾರಿಗಳು

ಭಾನುಮತಿ ಭೇಟಿಯಾಗಿದ್ದ ಹಾವೇರಿ ಟಸ್ಕರ್ ಸುಮಾರು ಒಂದು ಗಂಟೆಗಳ ಕಾಲ ಇದ್ದು  ವಾಪಸ್ ಹೋಗಿತ್ತು. 11 ಮಾವುತರು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಅಧಿಕಾರಿಗಳು ಒಂದು ವಾರದಿಂದ ಒಂಟಿ ಸಲಗದ ಹಿಂದೆ ಬಿದ್ದಿದ್ದರು. ಆದರೆ, ನಿನ್ನೆ ಅದೇ ಎಲೆಮಡಿಲು ಗ್ರಾಮದ ಕಾಫಿ ತೋಟವೊಂದರಲ್ಲಿ ಅದೇ ಭಾನುಮತಿ ಜೊತೆ ಏಕಾಂತದಲ್ಲಿದ್ದಾಗ ಈ ಹಾವೇರಿ ಟಸ್ಕರ್ ಅನ್ನು ಅಧಿಕಾರಿಗಳು ಕ್ಯಾಚ್ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Elephant: ಆನೆಗೆ ಚಡ್ಡಿ ಅಲ್ಲ ಕಣ್ರೀ, ಚಪ್ಪಲಿ ಹಾಕಿಸಿದ್ದಾರೆ! 12 ಸಾವಿರ ರೂಪಾಯಿ ಪಾದರಕ್ಷೆ ಧರಿಸಿ ಗಜ ನಡಿಗೆ

ನಿಟ್ಟುಸಿರು ಬಿಟ್ಟ ಮಲೆನಾಡಿಗರು

ಒಂದು ವಾರದ ಸತತ ಪರಿಶ್ರಮದಿಂದ ಅಧಿಕಾರಿಗಳು ಮಲೆನಾಡಿಗರ ತಲೆನೋವಾಗಿದ್ದ ಹಾವೇರಿ ಟಸ್ಕರ್‍ನ ಸೆರೆ ಹಿಡಿದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಅರಣ್ಯಕ್ಕೆ ಬಿಡಲು ಕೊಂಡೊಯ್ದಿದ್ದಾರೆ. ಒಂಟಿ ಸಲಗನ ದಾಳಿಯಿಂದ ಸುಸ್ತಾಗಿ ಹೋಗಿದ್ದ ಮಲೆನಾಡಿಗರು ಒಂಟಿ ಸಲಗ ಸೆರೆಯಿಂದ ನಿಟ್ಟಿಸಿರು ಬಿಟ್ಟಿದ್ದಾರೆ‌. ಒಂದು ವಾರಗಳ ಸತತ ಪ್ರಯತ್ನದಿಂದ ಒಂಟಿ ಸಲಗ ಸೆರೆಯಾಗಿದ್ದು, ಆನೆ ಸೆರೆ ಹಿಡಿದ ಅಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.
Published by:Annappa Achari
First published: