ಮಂಗಳೂರು (ಅ. 10): ಕರಾವಳಿಯ ಪ್ರಮುಖ ಆದಾಯದ ಮೂಲಗಳಲ್ಲಿ ಮೀನುಗಾರಿಕೆ ಕೂಡ ಒಂದು. ಆದರೆ, ಕೊರೋನಾ ಕಾರಣದಿಂದ ಕರಾವಳಿಯ ಮತ್ಸ್ಯ ಉದ್ಯಮ ಇದೀಗ ಸಂಕಷ್ಟದಲ್ಲಿದೆ. ಕೊರೋನಾ ಲಾಕ್‌ಡೌನ್ ಬಳಿಕ ವಿದೇಶಗಳಿಂದ ಬೇಡಿಕೆ ಕುಸಿತವಾಗಿದ್ದು, ಕಟ್ಟುನಿಟ್ಟಿನ ನಿಯಮಗಳಿಂದ ಮೀನು ರಫ್ತಿಗೆ ಹೊಡೆತ ಬಿದ್ದಿದೆ. ಮೀನುಗಾರಿಕೆ ಕರಾವಳಿಗೆ ಅತಿ ಹೆಚ್ಚು ಆದಾಯವನ್ನು ತಂದುಕೊಡುವ ಉದ್ಯಮ. ಆದರೆ, ಈ ಉದ್ಯಮವೀಗ ಸಂಕಷ್ಟದಲ್ಲಿದೆ. ಕಠಿಣ ನಿಯಮಾವಳಿಯಿಂದ ರಫ್ತು ಕುಸಿತವಾಗಿದೆ. ಕೊರೋನಾ ಕಾರಣದಿಂದ ತಡವಾಗಿ ಮೀನುಗಾರಿಕೆ ಆರಂಭವಾದರೂ ಪೂರ್ಣ ಪ್ರಮಾಣದ ರಫ್ತು ಇನ್ನೂ ಶುರುವಾಗಿಲ್ಲ. ಚೀನಾ ಸಹಿತ ವಿದೇಶಗಳಿಗೆ ಕರ್ನಾಟಕದಿಂದ ಕಳೆದ ವರ್ಷ ಒಟ್ಟು 1,600 ಕೋಟಿ ರೂ. ಮೌಲ್ಯದ ಮೀನು ರಫ್ತಾಗಿತ್ತು. ಆದರೆ ಮಾರ್ಚ್ ಬಳಿಕ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗಿದ್ದರೂ ರಫ್ತು ಇನ್ನೂ ಆರಂಭವಾಗಿಲ್ಲ.
ರಾಜ್ಯದಿಂದ ಐರೋಪ್ಯ ದೇಶಗಳು, ಬ್ಯಾಂಕಾಕ್, ಥೈಲ್ಯಾಂಡ್, ಮಲೇಷ್ಯಾ, ಕೊರಿಯಾ ಮತ್ತಿತರ ದೇಶಗಳಿಗೆ ಮೀನು ರಫ್ತಾಗುತ್ತಿತ್ತು. ಪ್ರತಿವರ್ಷ ಸುಮಾರು 1 ಸಾವಿರ ಕಂಟೈನರ್‌ಗಳ ಮೂಲಕ ಚೀನಾಗೆ ಮೀನು ರಫ್ತು ಆಗುತ್ತದೆ. ಒಂದು ಕಂಟೈನರ್‌ನಲ್ಲಿ 25 ಟನ್ ಮೀನು ಇರುತ್ತದೆ. ಕಪ್ಪೆ ಬೊಂಡಾಸ್ ಮತ್ತು ಪಾಂಬೋಲು ಮೀನು ಯಥೇಚ್ಛವಾಗಿ ಚೀನಾಗೆ ರಫ್ತಾಗುತ್ತದೆ. ಆದರೆ, ಇದೀಗ ಕೊರೋನಾ ಕಾರಣದಿಂದ ವಿದೇಶಗಳಿಂದ ಬೇಡಿಕೆ ಕುಸಿತವಾಗಿದೆ. ಸದ್ಯ ಮೀನಿನ ಸಾಗಾಟಕ್ಕೂ ತೊಂದರೆಯುಂಟಾಗಿದೆ. ಏರ್‌ಕಾರ್ಗೋ ಮಾತ್ರ ನಿರ್ವಹಣೆಯಾಗುತ್ತಿದ್ದು ಸಾಗಾಟದ ದರವೂ ಏರಿಕೆಯಾಗಿದೆ.
ಇದನ್ನೂ ಓದಿ: Karnataka Weather: ಕರಾವಳಿ ಸೇರಿ ಕರ್ನಾಟಕದ ಹಲವೆಡೆ 4 ದಿನ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ