ಪರೀಕ್ಷೆಯಲ್ಲಿ ಪ್ರತಿಬಾರಿ ಫೇಲ್​: ಹತಾಶೆಯಿಂದ ವಿವಿ ಮೌಲ್ಯಮಾಪನ ವಿಭಾಗಕ್ಕೆ ಕನ್ನ ಹಾಕಿದ ವಿದ್ಯಾರ್ಥಿ

ಪ್ರತಿ ಬಾರಿ ಎಷ್ಟೆ ಉತ್ತಮವಾಗಿ ಪರೀಕ್ಷೆ ಬರೆದರೂ ಫೇಲಾಗುತ್ತಿದ್ದೇನೆ. ತನ್ನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಿಸಬೇಕು ಎಂದು ಈ ವೇಳೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿವಿ ಸಿಬ್ಬಂದಿಯೊಂದಿಗೆ ವಾಗ್ವಾದ ಕೂಡ ನಡೆಸಿದ್ದಾನೆ

news18-kannada
Updated:January 13, 2020, 4:06 PM IST
ಪರೀಕ್ಷೆಯಲ್ಲಿ ಪ್ರತಿಬಾರಿ ಫೇಲ್​: ಹತಾಶೆಯಿಂದ ವಿವಿ ಮೌಲ್ಯಮಾಪನ ವಿಭಾಗಕ್ಕೆ ಕನ್ನ ಹಾಕಿದ ವಿದ್ಯಾರ್ಥಿ
ಮೌಲ್ಯಮಾಪನ ವಿಭಾಗದಲ್ಲಿ ಉತ್ತರ ಪತ್ರಿಕೆ ಕದಿಯುತ್ತಿದ್ದ ವಿದ್ಯಾರ್ಥಿ ಸಿಸಿಟಿವಿ ಚಿತ್ರ
  • Share this:
ಬೆಳಗಾವಿ (ಜ.13): ಎಷ್ಟೇ ಚೆನ್ನಾಗಿ ಓದಿ ಪರೀಕ್ಷೆ ಬರೆದರೂ ಫೇಲ್​ ಆಗುತ್ತಿದ್ದ ಹಿನ್ನೆಲೆ ಬೆಸತ್ತ ವಿದ್ಯಾರ್ಥಿಯೊಬ್ಬ, ವಿಶ್ವವಿದ್ಯಾಲಯದ ಮೌಲ್ಯ ಮಾಪನ ವಿಭಾಗದಲ್ಲಿ ಇತರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಕದಿಯಲು ಹೋಗಿ ಸಿಕ್ಕಬಿದ್ದಿರುವ ಘಟನೆ ನಡೆದಿದೆ. 

ಬಸಪ್ಪ ಹೊನವಾಡ (23) ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಓದುತ್ತಿದ್ದ ಈತ ನಾಲ್ಕನೇ ಸೆಮಿಸ್ಟರ್​ ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ.

ಇದರಿಂದ ಹತಾಶೆಗೊಂಡಿದ್ದ ಈತ ಇದನ್ನು ಪ್ರಶ್ನಿಸಲು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಮೌಲ್ಯ ವಿಭಾಗಕ್ಕೆ ಭೇಟಿ ನೀಡಿದ್ದ. ಪ್ರತಿ ಬಾರಿ ಎಷ್ಟೆ ಉತ್ತಮವಾಗಿ ಪರೀಕ್ಷೆ ಬರೆದರೂ ಫೇಲಾಗುತ್ತಿದ್ದೇನೆ. ತನ್ನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಿಸಬೇಕು ಎಂದು ಈ ವೇಳೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ ವಿವಿ ಸಿಬ್ಬಂದಿಯೊಂದಿಗೆ ವಾಗ್ವಾದ ಕೂಡ ನಡೆಸಿದ್ದಾನೆ.

ಅಂದು ರಾತ್ರಿ ವಿವಿಯ ವಿದ್ಯಾರ್ಥಿ ನಿಲಯದಲ್ಲಿಯೇ ಉಳಿದುಕೊಂಡಿದ್ದ ಈತ, ಮೌಲ್ಯ ಮಾಪನ ವಿಭಾಗಕ್ಕೆ ನುಗ್ಗಿ ಇತರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಕದಿಯುವ ಸಂಚು ರೂಪಿಸಿದ್ದಾರೆ. ಕಿಡಕಿ ಗಾಜು ಒಡೆದು ಒಳ ನುಗ್ಗಿದ್ದ ಈತ 300 ವಿದ್ಯಾರ್ಥೀಗಳ ಅಂಕಪಟ್ಟಿ, ಸ್ಕ್ಯಾನರ್ ಕಳ್ಳತನಕ್ಕೆ ಯತ್ನಿಸಿದ್ದಾನೆ.

ಇದನ್ನು ಓದಿ: ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಲಗ್ಗೆ ಹಾಕಲು ಯತ್ನ; ಜಮೀರ್ ಸೇರಿ 30ಕ್ಕೂ ಹೆಚ್ಚು ಮಂದಿ ಬಂಧನ

ಈ ವೇಳೆಯಲ್ಲಿ ಅಲ್ಲಿನ ಸಿಬ್ಬಂದಿ ಇದನ್ನು ಗಮನಿಸಿದ್ದು. ಈ ಕುರಿತು ಕಾಕತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ