ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿ ಹಂಚಿಕೆ ಸಂಕಟದಲ್ಲಿ ಸಿಎಂ ಬಿಎಸ್​ವೈ

ಈ ನಡುವೆ ಒಂದೇ ಜಿಲ್ಲೆಗೆ ಹಲವು ಸಚಿವರು, ಅನರ್ಹ ಶಾಸಕರು ಪಟ್ಟು ಹಿಡಿದಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಹಂಚಿಕೆ ಕೂಡ ಕಗ್ಗಂಟ್ಟಾಗಿ ಪರಿಣಮಿಸಿದೆ.

Seema.R | news18-kannada
Updated:August 29, 2019, 12:09 PM IST
ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿ ಹಂಚಿಕೆ ಸಂಕಟದಲ್ಲಿ ಸಿಎಂ ಬಿಎಸ್​ವೈ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು (ಆ.29): ಖಾತೆ ಹಂಚಿಕೆ ಭಿನ್ನಮತ ಶಮನಕ್ಕೂ ಮುನ್ನವೆ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಿಕೆ ವಿಷಯದಲ್ಲಿ ಸಚಿವರ ಭಿನ್ನರಾಗ ಮುಂದುವರೆದಿದೆ. ತಮ್ಮ ಕ್ಷೇತ್ರಗಳ ಜಿಲ್ಲೆಗಳೇ ತಮಗೆ ಸಿಗದಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಹೈ ಕಮಾಂಡ್​ ಮುಂದೆ ಏನು ಹೇಳದ ಸ್ಥಿತಿಯಲ್ಲಿದ್ದಾರೆ.

ಸಚಿವ ಸ್ಥಾನ, ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಹಂಚಿಕೆವರೆಗೆ ಪ್ರತಿಯೊಂದು ಹೈ ಕಮಾಂಡ್​ ಕೈಯಲ್ಲಿ ಅಧಿಕಾರಿವಿದ್ದು, ಇದರಿಂದ ಮೂಲ ಬಿಜೆಪಿಗರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅನರ್ಹ ಶಾಸಕರಿಗಾಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಖಾಲಿಬಿಟ್ಟಿರುವ ಪಕ್ಷದ ನಿರ್ಧಾರದಿಂದ ಸಚಿವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸದ್ಯ ಸಂಪುಟ ಸೇರಿರುವ 17 ಸಚಿವರಲ್ಲಿ ಸದ್ಯ 9 ಸಚಿವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಸಚಿವರಿಗೂ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗುವುದು ಎಂದು ಹೈ ಕಮಾಂಡ್​ ತಿಳಿಸಿದೆ. ಈ ನಡುವೆ ಒಂದೇ ಜಿಲ್ಲೆಗೆ ಹಲವು ಸಚಿವರು, ಅನರ್ಹ ಶಾಸಕರು ಪಟ್ಟು ಹಿಡಿದಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಹಂಚಿಕೆ ಕೂಡ ಕಗ್ಗಂಟ್ಟಾಗಿ ಪರಿಣಮಿಸಿದೆ.

ಡಿಸಿಎಂ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಈಗ ತಮ್ಮ ಕ್ಷೇತ್ರ ಬಳ್ಳಾರಿ ಉಸ್ತುವಾರಿ ಕೂಡ ಕೈ ತಪ್ಪಿದ್ದು, ಈ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರಿಗಾಗಿ ತಮ್ಮ ಕ್ಷೇತ್ರದ ಉಸ್ತುವಾರಿ ಕೈ ತಪ್ಪಿದ್ದು ಇದು ಬಿಜೆಪಿ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಜೊತೆಗೆ ಸಂಘಪರಿವಾರ ಹಾಗೂ ಮೂಲ ಬಿಜೆಪಿ ನಾಯಕರ ನಡುವೆ ಆಂತರಿಕವಾಗಿ ಹಗ್ಗಜಗ್ಗಾಟ ಆರಂಭವಾಗಿದೆ.

ಬೆಂಗಳೂರು ಉಸ್ತುವಾರಿಗಾಗಿ ಸಚಿವ ಆರ್​ ಅಶೋಕ್​ ಕಣ್ಣಿಟ್ಟಿದ್ದರೆ, ಈ ನಡುವೆ ಡಿಸಿಎಂ ಅಶ್ವತ್ಥ್​ ನಾರಾಯಣ್​ ಕೂಡ ತಮಗೂ ಸಿಲಿಕಾನ್​ ಸಿಟಿಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಡಿಸಿಎಂ ಸ್ಥಾನಗಳಲ್ಲಿ ಈ ನಾಯಕರ ನಡುವೆ ಜಟಾಪಟಿ ಏರ್ಪಟ್ಟಿದ್ದು ಅಶ್ವತ್ಥ್​ ಮೇಲುಗೈ ಸಾಧಿಸಿದ್ದಾರೆ. ಕ್ಷೇತ್ರ ಉಸ್ತುವಾರಿಯಲ್ಲಿಯೂ ಅವರೇ ಜಯಸಾಧಿಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಒಕ್ಕಲಿಗ ನಾಯಕರಾಗಿರುವ ಅವರಿಗೆ ಮೈಸೂರು, ಮಂಡ್ಯ ಕ್ಷೇತ್ರ ನೀಡುವ ಬಗ್ಗೆ ನಾಯಕರು ತೀರ್ಮಾನಿಸಿದ್ದಾರೆ.

ಇನ್ನು ಜಾರಕಿಹೊಳಿ ಕುಟುಂಬದ ಎದುರು ಪ್ರಭಾವಿ ನಾಯಕನಾಗಿ ಬೆಳೆಸಬೇಕೆಂಬ ಉದ್ದೇಶದಿಂದಲೇ ಚುನಾವಣೆಯಲ್ಲಿ ಸೋತರು ಲಕ್ಷಣ ಸವದಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ಹಾಗಾಗಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.  ತಮ್ಮ ಕ್ಷೇತ್ರದಲ್ಲಿ ಡಿಕೆಶಿ ಹಸ್ತಕ್ಷೇಪ ನಡೆಸಿದ್ದರಿಂದಲೇ ಮೈತ್ರಿ ಪಕ್ಷ ಬೀಳಿಸಲು ಸಹಕರಿಸಿದ ರಮೇಶ್​ ಜಾರಕಿಹೊಳಿ ತಮ್ಮ ಕ್ಷೇತ್ರ ಬಿಟ್ಟು ಕೊಡಲು ಸಿದ್ದರಾಗುತ್ತಾರಾ ಎಂಬ ಅನುಮಾನ ಕೂಡ ಮೂಡಿದೆ.

ಇದನ್ನು ಓದಿ: ಡಿಸಿಎಂ ಆಯ್ತು, ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯೂ ಡೌಟು...!ಈ ನಡುವೆಯೇ  ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿಯನ್ನು ಸದ್ಯ ಬಿಜೆಪಿ ತಯಾರು ನಡೆಸಿದ್ದು, ಅನರ್ಹ ಶಾಸಕರ ಪ್ರಕರಣ ಇತ್ಯರ್ಥವಾದ ಬಳಿಕ ಈ ಬಗ್ಗೆ ಚಿಂತಿಸಿದರೆ ಆಯಿತು ಎಂದು ನಾಯಕರು ನಿರ್ಧರಿಸಿದ್ದಾರೆ.

ಸಂಭಾವ್ಯ ಪಟ್ಟಿ
ಬೆಂಗಳೂರು- ಅಶ್ವಥ್ ನಾರಾಯಣ
ಬೆಳಗಾವಿ- ಲಕ್ಷ್ಮಣಸವದಿ
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ- ಅಶೋಕ್
ಚಾಮರಾಜನಗರ ಮತ್ತು ಮೈಸೂರು- ಸೋಮಣ್ಣ
ಬಸವರಾಜ ಬೊಮ್ಮಾಯಿ- ಹಾವೇರಿ ಮತ್ತು ದಾವಣಗೆರೆ
ಹುಬ್ಬಳ್ಳಿ ಧಾರವಾಡ- ಜಗದೀಶ್ ಶೆಟ್ಟರ್
ತುಮಕೂರು ಮತ್ತು ಚಿಕ್ಕಬಳ್ಳಾಪುರ-ಮಾಧುಸ್ವಾಮಿ
ಬಳ್ಳಾರಿ ಮತ್ತು ಚಿತ್ರದುರ್ಗ- ಶ್ರೀರಾಮುಲು
ಬಾಗಲಕೋಟೆ- ಗೋವಿಂದಕಾರ್ಜೋಳ
ಗದಗ ಮತ್ತು ಗುಲ್ಬರ್ಗಾ- ಸಿಸಿಪಾಟೀಲ್
ಬೀದರ್ - ಪ್ರಭುಚೌಹಾಣ್
ಉಡುಪಿ ಮತ್ತು ದಕ್ಷಿಣಕನ್ನಡ- ಕೋಟಾಶ್ರೀನಿವಾಸ್ ಪೂಜಾರಿ
ಚಿಕ್ಕಮಗಳೂರು ಮತ್ತು ಹಾಸನ- ಸಿಟಿರವಿ
ಉತ್ತರ ಕನ್ನಡ- ಶಶಿಕಲಾಜೊಲ್ಲೆ
ಶಿವಮೊಗ್ಗ- ಈಶ್ವರಪ್ಪ
ಕೊಡಗು- ಸುರೇಶ್ ಕುಮಾರ್
ಕೋಲಾರ- ನಾಗೇಶ್

(ವರದಿ: ಚಿದಾನಂದ ಪಟೇಲ್​)

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading