ಬೆಂಗಳೂರು: ಎಂಟು ವರ್ಷಗಳ ಹಿಂದೆ ಜಿಗಣಿ (Jigani, Bengaluru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಗೆ ಪ್ರಕರಣದ (Murder Case) ರಹಸ್ಯ ಬಯಲು ಆಗಿದೆ. ಕಳೆದ ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು (Accused Arrest) ಬಂಧಿಸಿ ಕತ್ತಲ ಕೋಣೆಗೆ ತಳ್ಳಿದ್ದಾರೆ. ಭಾಗ್ಯಶ್ರೀ ಮತ್ತು ಸುಪುತ್ರ ಶಂಕರಪ್ಪ ತಳವಾರ ಬಂಧಿತ ಆರೋಪಿಗಳು. ಇಬ್ಬರು ಮೂಲತಃ ವಿಜಯಪುರ (Vijayapura) ಜಿಲ್ಲೆಯವರಾಗಿದ್ದರು. ಭಾಗ್ಯಶ್ರೀ ಮತ್ತು ಸುಪುತ್ರ ಬೆಂಗಳೂರು ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ (Jigani Industrial Area) ಕೆಲಸ ಮಾಡಿಕೊಂಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದ (Love) ಭಾಗ್ಯಶ್ರೀ ಮತ್ತು ಸುಪುತ್ರ ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು.
ಮೊದಲ ಪತಿಯಿಂದ ದೂರವಾಗಿದ್ದ ಭಾಗ್ಯಶ್ರೀ ಬೆಂಗಳೂರಿಗೆ ಬಂದು ಮಾಜಿ ಲವರ್ ಆಗಿದ್ದ ಸುಪುತ್ರನ ಜೊತೆ ವಾಸವಾಗಿದ್ದಳು. ಈ ವಿಷಯ ಭಾಗ್ಯಶ್ರೀ ಕಿರಿಯ ಸೋದರ ಲಿಂಗರಾಜ್ ಪೂಜಾರಿಗೆ ಗೊತ್ತಾಗಿತ್ತು. ಅಕ್ಕನ ಅನೈತಿಕ ಸಂಬಂಧವನ್ನು ಲಿಂಗರಾಜ್ ವಿರೋಧಿಸಿ, ಭಾಗ್ಯಶ್ರೀ ಜೊತೆ ಜಗಳ ಮಾಡಿದ್ದನು.
2015ರಲ್ಲಿ ಕೊಲೆ
ತನ್ನ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಕೊಲೆ ಮಾಡಲು ಭಾಗ್ಯಶ್ರೀ ಗೆಳೆಯನ ಜೊತೆ ಸೇರಿ ಪ್ಲಾನ್ ಮಾಡಿದ್ದಳು. 2015 ಆಗಸ್ಟ್ 11ರಂದು ಇಬ್ಬರು ಸೇರಿ ಲಿಂಗರಾಜ್ನನ್ನು ಕೊಲೆ ಮಾಡಿದ್ದರು. ಕೊಲೆಯ ನಂತರ ಶವವನ್ನು ಪೀಸ್ ಪೀಸ್ ಆಗಿ ಮಾಡಿದ್ದರು.
ಮೃತದೇಹ ಪೀಸ್ ಪೀಸ್ ಮಾಡಿದ್ದ ಜೋಡಿ
ಮೃತದೇಹದ ಅಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೇರೆ ಬೇರೆ ಸ್ಥಳದಲ್ಲಿ ಎಸೆದು ಭಾಗ್ಯಶ್ರೀ ಮತ್ತು ಸುಪುತ್ರ ಬೆಂಗಳೂರು ತೊರೆದು ಮಹಾರಾಷ್ಟ್ರದ ನಾಸಿಕ್ ಸೇರಿಕೊಂಡಿದ್ದರು. ನಾಸಿಕ್ನಲ್ಲಿ ಇಬ್ಬರು ತಮ್ಮ ಹೆಸರು ಬದಲಿಸಿಕೊಂಡಿದ್ದರು. ಜಿಗಣಿ ಟೌನ್ ಸಮೀಪದ ವಿ ಇನ್ ಹೋಟೆಲ್ ಬಳಿ ಏರ್ಬ್ಯಾಗ್ ನಲ್ಲಿ ಲಿಂಗರಾಜು ಕೈ ಕಾಲು ಪತ್ತೆಯಾಗಿತ್ತು.
ಇದೀಗ ಎಂಟು ವರ್ಷದ ಬಳಿಕ ಇಬ್ಬರು ಪೊಲೀಸರ ಬಲಗೆ ಬಿದ್ದಿದ್ದಾರೆ. ಜಿಗಣಿ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ ಮತ್ತು ತಂಡ ಆರೋಪಿಗಳ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ
ಜಮಖಂಡಿಯಲ್ಲಿ 144 ಸೆಕ್ಷನ್!
ಬಾಗಲಕೋಟೆಯ ಜಮಖಂಡಿ ನಗರದಲ್ಲಿ ಅನಧಿಕೃತ ಸರ್ಕಲ್‌ಗಳ ನಿರ್ಮಾಣ ಹಿನ್ನೆಲೆ ತಾಲೂಕು ಆಡಳಿತದಿಂದ ನಗರದಲ್ಲಿ ಒಂದು ದಿನ ನಿಷೇಧಾಜ್ಞೆ ಜಾರಿಗೊಳಿಸಿದೆ.
ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಈ ಕುರಿತು ಜಮಖಂಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಿದೆ. 2 ದಿನದ ಹಿಂದೆ ಮೌಲಾನಾ ಅಬ್ದುಲ್ ಕಲಾಂ ಸರ್ಕಲ್ ನಿರ್ಮಾಣ ವೇಳೆ ಶಾಸಕ ಆನಂದ ನ್ಯಾಮಗೌಡ ಹಾಗೂ PSI ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನಂತರ ಜಮಖಂಡಿಯಲ್ಲಿ ದಿಢೀರನೆ 20 ಕ್ಕೂ ಹೆಚ್ಚು ಸರ್ಕಲ್ ಗಳನ್ನು ನಿರ್ಮಾಣ ಮಾಡಲಾಗಿತ್ತು.
ಲಂಚಬಾಕ ವೈದ್ಯೆ ಅಮಾನತು
ಹೆರಿಗೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲಂಚಬಾಕ ವೈದ್ಯೆ ಡಾ.ಪಲ್ಲವಿ ಪೂಜಾರಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: Crime News: ಇತ್ತ ಹೆಂಡತಿ, ಮೂವರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ; ಅತ್ತ ಕಲ್ಲು ಎತ್ತಿಹಾಕಿ ಅಕ್ಕ-ತಂಗಿ ಬರ್ಬರ ಹತ್ಯೆ
ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ, ಪ್ರಸೂತಿ ತಜ್ಞ ಡಾ.ಪಲ್ಲವಿ, ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಲು ₹10 ಸಾವಿರ ಲಂಚ ಕೇಳಿದ ಮತ್ತು ಕರ್ತವ್ಯಲೋಪ ಆರೋಪದ ಮೇಲೆ ಅವರನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಮಾನತು ಮಾಡಿದ್ದಾರೆ.
ಗರ್ಭಿಣಿ ಸಂಗೀತಾ ಎಂಬುವವರಿಗೆ ವೈದ್ಯೆ ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡದ ಕಾರಣದಿಂದ ಗರ್ಭದಲ್ಲಿಯೇ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ