• Home
  • »
  • News
  • »
  • state
  • »
  • Deepavali Effect: ದೀಪಾವಳಿ ಪಟಾಕಿ ಸ್ಫೋಟಕ್ಕೆ ಬೆಂಗಳೂರು ತತ್ತರ, ಮಾಲಿನ್ಯ ಪ್ರಮಾಣ ಹೆಚ್ಚಳ

Deepavali Effect: ದೀಪಾವಳಿ ಪಟಾಕಿ ಸ್ಫೋಟಕ್ಕೆ ಬೆಂಗಳೂರು ತತ್ತರ, ಮಾಲಿನ್ಯ ಪ್ರಮಾಣ ಹೆಚ್ಚಳ

ದೀಪಾವಳಿ ಆಚರಣೆ

ದೀಪಾವಳಿ ಆಚರಣೆ

ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಅವಕಾಶ ನೀಡಿದ್ರೂ ಅವಧಿ ಮೀರಿ ಪಟಾಕಿ ಹೊಡೆದಿದ್ದಾರೆ. ಇದೇ ಕಾರಣಕ್ಕೆ ಎರಡು ದಿನಗಳಲ್ಲಿ ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.

  • Share this:

ಕಳೆದು ಮೂರು ದಿನಗಳಿಂದ ದೇಶದಲ್ಲಿ ಸಂಭ್ರಮದಿಂದ ದೀಪಾವಳಿಯನ್ನು ಆಚರಣೆ (Deepavali Celebration) ಮಾಡಲಾಗುತ್ತಿದೆ. ಸರ್ಕಾರ (Government) ಪಟಾಕಿ ನಿಯಂತ್ರಣಕ್ಕೆ ತಂದಿರುವ ಕಠಿಣ ಕ್ರಮಗಳು ಸುತ್ತೋಲೆಗಳಲ್ಲಿಯೇ (Circular) ಉಳಿದುಕೊಂಡಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಪಟಾಕಿ ಸಿಡಿಸುವ ಕುರಿತು ಮಾರ್ಗಸೂಚಿಗಳನ್ನೇ ಬಿಡುಗಡೆ ಮಾಡಲಾಗಿತ್ತು. ಜನರು ಮಾತ್ರ ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಪಟಾಕಿ ಸಿಡಿಸಿದ್ದಾರೆ. ಪರಿಣಾಮ ಬೆಂಗಳೂರಿನಲ್ಲಿ ವಾಯು ಮಾಲಿನ್ಯ (Air Pollution) ಪ್ರಮಾಣ ಹೆಚ್ಚಳವಾಗಿದೆ. ದೀಪಾವಳಿ 2ನೇ ದಿನದಂದು ವಾಯು ಮಾಲಿನ್ಯ ಹೆಚ್ಚಳವಾದ್ರೆ ಬೆಂಗಳೂರಿನಲ್ಲಿ ಪಟಾಕಿಯಿಂದ ಹೊಗೆ ಪ್ರಮಾಣ ಏರಿಕೆ ಕಂಡಿದೆ. ಹಸಿರು ಪಟಾಕಿಗೆ (Green Crackers) ಮಾತ್ರ ಅವಕಾಶ ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ.


ಕೇವಲ  ಹಸಿರು ಪಟಾಕಿಗಷ್ಟೇ ಅವಕಾಶವಿದೆ. ಆದರೂ ಬೇಕಾಬಿಟ್ಟಿಯಾಗಿ ಜನ ಎಲ್ಲಾ ಬಗೆಯ ಪಟಾಕಿ ಹೊಡೆದಿದ್ದಾರೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಅವಕಾಶ ನೀಡಿದ್ರೂ ಅವಧಿ ಮೀರಿ ಪಟಾಕಿ ಹೊಡೆದಿದ್ದಾರೆ. ಇದೇ ಕಾರಣಕ್ಕೆ ಎರಡು ದಿನಗಳಲ್ಲಿ ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.


ಮಾಲಿನ್ಯ ಗುಣಮಟ್ಟ ಸೂಚ್ಯಂಕ 

ಪ್ರದೇಶಹಬ್ಬಕ್ಕೂ ಮುನ್ನಹಬ್ಬದ ದಿನ
ಮೆಜೆಸ್ಟಿಕ್AQI 90AQI 90
ಹೊಂಬೇಗೌಡ ನಗರAQI 96AQI 120
ಜಯನಗರ 5th ಬ್ಲಾಕ್AQI 93AQI 210
BTM ಲೇಔಟ್AQI 72AQI 102
ಸಿಲ್ಕ್ ಬೋರ್ಡ್ ಜಂಕ್ಷನ್AQI 180AQI 246
ಹೆಬ್ಬಾಳAQI 100AQI 180
ಪೀಣ್ಯ ಕೈಗಾರಿಕಾ ಪ್ರದೇಶAQI 108AQI 210

ಪಟಾಕಿ ಅವಾಂತರ


ಪ್ರತಿ ದೀಪಾವಳಿ ವೇಳೆಯೂ ಪಟಾಕಿ ಸಿಡಿಸಿ ಗಾಯ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚು. ಈ ಬಾರಿ ಕೂಡ ಪಟಾಕಿ ಸಿಡಿದು ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ.. ಪಟಾಕಿ ಅವಘಡದಿಂದ ಈವರೆಗೂ ಬೆಂಗಳೂರಲ್ಲಿ 25ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಂಭೀರ ಗಾಯಗಳಾಗಿವೆ.


ಮಿಂಟೋ ಆಸ್ಪತ್ರೆಯೊಂದರಲ್ಲೇ ಈವರೆಗೂ 19 ಕೇಸ್ ದಾಖಲಾಗಿದೆ. ಮತ್ಯಾರೋ ಹಚ್ಚಿದ್ದ ರಾಕೆಟ್ ಬಂದು ಸಿಡಿದು ಆದಿತ್ಯ ಎಂಬ ಬಾಲಕ ಮುಖ ಸುಟ್ಟುಕೊಂಡಿದ್ದಾನೆ.


ಇನ್ನೊಂದ್ಕಡೆ ಮೈಸೂರು ರಸ್ತೆಯ ನಿವಾಸಿ 19 ವರ್ಷದ ಜಯಸೂರ್ಯ ಎಂಬ ಯುವಕ ಎರಡು ನೇತ್ರವನ್ನೇ ಕಳೆದುಕೊಂಡಿದ್ದಾನೆ. ನಿನ್ನೆ ರಾತ್ರಿ ಪಟಾಕಿ ಸಿಡಿದು ಎರಡೂ ಕಣ್ಣು ಡ್ಯಾಮೇಜ್ ಆಗಿ ದೃಷ್ಟಿಯೇ ಹೋಗಿದೆ.


ಇದನ್ನೂ ಓದಿ:  Crime News: ಪತ್ನಿಯನ್ನ ಕೊಂದು, ಬೆಡ್​ಶೀಟ್​​ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ


ಲಕ್ಷ್ಮಿ ಭಾವಚಿತ್ರವುಳ್ಳ ಪಟಾಕಿ ಜಪ್ತಿ


ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಹಿನ್ನೆಲೆ ಕಲಬುರಗಿಯಲ್ಲಿ ಲಕ್ಷ್ಮಿದೇವಿ ಭಾವಚಿತ್ರವುಳ್ಳ ಪಟಾಕಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದೂಪರ ಸಂಘಟನೆಗಳು ನೀಡಿದ ದೂರಿನ ಅನ್ವಯ ಬ್ರಹ್ಮಪುರ ಠಾಣೆ ಪೊಲೀಸರ ದಾಳಿ ನಡೆಸಿ ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.


ದೀಪಾವಳಿ ಹಿನ್ನೆಲೆ ಕಲಬುರಗಿ ನಗರದ ಅಪ್ಪಾ ಜಾತ್ರೆ ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಲಾಗಿತ್ತು. ಈ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಲಕ್ಷ್ಮಿ ಪಟಾಕಿ/ಅಟಾಂ ಬಾಂಬ್ ಸೇರಿದಂತೆ ಅನೇಕ ಪಟಾಕಿಗಳ ವಶಕ್ಕೆ ಪಡೆಯಲಾಗಿದ್ದು, ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ:  Karnataka Politics: ಜೆಡಿಎಸ್ ಹಾದಿ ಹಿಡಿಯುತ್ತಾ ಕಾಂಗ್ರೆಸ್? ಗೊಂದಲ ಹೆಚ್ಚುತ್ತಾ, ಕಡಿಮೆಯಾಗುತ್ತಾ?


ಹಿಂದೂ ಸಂಘಟನೆಗಳು ವಾದ ಏನು ?


ಲಕ್ಷ್ಮಿದೇವಿ ಭಾವಚಿತ್ರವುಳ್ಳ ಪಟಾಕಿ ಸಿಡಿಸಿದ ನಂತರ ಪೇಪರ್‌ಗಳು ರಸ್ತೆ ಮೇಲೆ ಬೀಳುತ್ತವೆ. ಈ ಪೇಪರ್ ತುಳಿಯುವದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದೀಗ ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ

Published by:Mahmadrafik K
First published: