‘ಡಿಸೆಂಬರ್​​ 9ನೇ ತಾರೀಕು ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ‘; ಕಾಂಗ್ರೆಸ್​ ಟ್ರಬಲ್​​ ಶೂಟರ್​​ ಡಿಕೆ ಶಿವಕುಮಾರ್​​

ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಮುಂಬರುವ ಡಿ.​5ರಂದು ನಡೆಯಲಿರುವ ಈ ಉಪಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್​​-ಜೆಡಿಎಸ್ ಕೂಡ ಭಾರೀ ಸರ್ಕಸ್​​ ನಡೆಸುತ್ತಿವೆ.

news18-kannada
Updated:November 28, 2019, 5:38 PM IST
‘ಡಿಸೆಂಬರ್​​ 9ನೇ ತಾರೀಕು ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ‘; ಕಾಂಗ್ರೆಸ್​ ಟ್ರಬಲ್​​ ಶೂಟರ್​​ ಡಿಕೆ ಶಿವಕುಮಾರ್​​
ಡಿಕೆ ಶಿವಕುಮಾರ್​
  • Share this:
ಬೆಂಗಳೂರು(ನ.28): ಡಿಸೆಂಬರ್​​ 9ನೇ ತಾರೀಕಿನ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಕಾಂಗ್ರೆಸ್​​ ಹಿರಿಯ ನಾಯಕ ಡಿ.ಕೆ ಶಿವಕುಮಾರ್​​​​​ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ ಬಿಜೆಪಿ ಸರ್ಕಾರ ಪತನವಾಗಲಿದೆ. ಇದರಿಂದ ರಾಜಕೀಯ ಶುದ್ದೀರಣವಾಗಲಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆಂಜಿನಪ್ಪ ಪರವಾಗಿ ಇಂದು ಕಾಂಗ್ರೆಸ್​​ ಟ್ರಬಲ್​​ ಶೂಟರ್​​​ ಡಿ.ಕೆ ಶಿವಕುಮಾರ್​​ ಪ್ರಚಾರ ಮಾಡಿದರು. ಕ್ಷೇತ್ರದ ನಂದಿ ಗ್ರಾಮ ಸೇರಿದಂತೆ ಹಲವೆಡೆ ತೆರೆದ ವಾಹನದಲ್ಲಿ ಡಿ.ಕೆ ಶಿವಕುಮಾರ್​​​ ರೋಡ್​ ಶೋ ಕೂಡ ನಡೆಸಿದರು. ಈ ವೇಳೆ ಜನರನ್ನುದ್ದೇಶಿಸಿ ಮಾತಾಡಿದ ಡಿಕೆಶಿ, ಮೈತ್ರಿ ಸರ್ಕಾರಕ್ಕೆ ದ್ರೋಹ ಬಗೆದ ಅನರ್ಹ ಶಾಸಕರನ್ನು ಸೋಲಿಸಿ ಎಂದು ಕರೆ ನೀಡಿದರು.

ಇನ್ನು ಅನರ್ಹ ಶಾಸಕರ ರಾಜಕೀಯ ಭವಿಷ್ಯ ಈ ಉಪಚುನಾವಣೆಗೆ ಅಂತ್ಯವಾಗಲಿದೆ. ಡಿಸೆಂಬರ್​​​ 9ನೇ ತಾರೀಕಿನ ನಂತರದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಸಿಎಂ ಬಿ.ಎಸ್​​ ಯಡಿಯೂರಪ್ಪ ಹಣದ ಆಮೀಷವೊಡ್ಡಿ ಅನರ್ಹ ಶಾಸಕರನ್ನು ಖರೀದಿಸಿದ್ಧಾರೆ. ಅದೇ ರೀತಿಯಲ್ಲೀಗ ಮತದಾರರಿಗೆ ಹಣ ನೀಡುವ ಮೂಲಕ ಗೆಲ್ಲಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಜಯ: 2021ರ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದ ದೀದಿ

ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ಕೇಂದ್ರ ಚುನಾವಣೆ ಆಯೋಗವು ದಿನಾಂಕ ನಿಗದಿ ಮಾಡಿದೆ. ಮುಂಬರುವ ಡಿ.​5ರಂದು ನಡೆಯಲಿರುವ ಈ ಉಪಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್​​-ಜೆಡಿಎಸ್ ಕೂಡ ಭಾರೀ ಸರ್ಕಸ್​​ ನಡೆಸುತ್ತಿವೆ. ಇತ್ತ ಕಾಂಗ್ರೆಸ್​​ ಜೆಡಿಎಸ್​​ ಜೊತೆಗಿನ ಮೈತ್ರಿ ತೊರೆದು ಏಕಾಂಗಿ ಹೋರಾಟಕ್ಕೆ ಸಜ್ಜಾಗಿದೆ. ಅತ್ತ ಜೆಡಿಎಸ್​​ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. ಈ ಮಧ್ಯೆ ಹೇಗಾದರೂ ಸರಿ ಉಪಚುನಾವಣೆ ಗೆದ್ದು ರಾಜ್ಯಾಧಿಕಾರ ಉಳಿಸಿಕೊಳ್ಳಬೇಕೆಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಜಿದ್ದಿಗೆ ಬಿದ್ದಿದೆ.

ಇನ್ನು ಮೂರು ಪಕ್ಷಗಳು ಸಿನಿಮಾ ನಟ-ನಟಿಯರನ್ನು ಪ್ರಚಾರಕ್ಕೆ ತರುತ್ತಿದ್ಧಾರೆ. ಚುನಾವಣಾ ಅಖಾಡಕ್ಕಿಳಿದು ನಟ ಜಗ್ಗೇಶ್​​, ತಾರಾ ಅನುರಾಧ, ಶೃತಿ, ಮಾಳವಿಕಾ ಅವಿನಾಶ್​ ಸೇರಿದಂತೆ ನಿಖಿಲ್​​ ಕುಮಾರಸ್ವಾಮಿ ಮತ್ತಲವರು ಪ್ರಚಾರ ಮಾಡಿದ್ದಾರೆ. ಹಾಗೆಯೇ ನಟಿ ಹರಿಪ್ರಿಯಾ ಕೂಡ ತನ್ನ ಹುಟ್ಟೂರಿನಲ್ಲಿ ಪ್ರಚಾರಕ್ಕೆ ಹೋಗಿದ್ದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಡಾ. ಸುಧಾಕರ್​​​​ ಪರವಾಗಿ ಹರಿಪ್ರಿಯಾ ಮತಯಾಚಿಸಿದ್ಧಾರೆ.
First published: November 28, 2019, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading