ಹುಬ್ಬಳ್ಳಿಯಿಂದ ರಾಜಹಂಸ, ಸ್ಲೀಪರ್, ವೋಲ್ವೋ ಬಸ್‌ಗಳ ಪುನರಾರಂಭ; ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳ

KSRTC Ticket Booking: ಕೊರೋನಾ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು  ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. 

ಐರಾವತ ಬಸ್

ಐರಾವತ ಬಸ್

  • Share this:
ಹುಬ್ಬಳ್ಳಿ (ಡಿ. 17):  ಕೊರೋನಾ ಲಾಕ್ ಡೌನ್ ನಂತರ ದಿನ ಕಳೆದಂತೆ ದೂರ ಮಾರ್ಗದ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು  ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಈ ಬಸ್​ಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ವಿವಿಧ ಸ್ಥಳಗಳಿಗೆ ಹೊರಡುವ ಬಸ್ಸುಗಳ  ಸಾರಿಗೆ ವರ್ಗ, ಹೊರಡುವ ಸಮಯ, ಮಾರ್ಗ ಹಾಗೂ ಪ್ರಯಾಣ ದರದ ವಿವರಗಳು ಕೆಳಕಂಡಂತಿದೆ.

ಮುಂಗಡ ಬುಕಿಂಗ್, ರಿಯಾಯಿತಿ:

ಈ ಬಸ್ಸುಗಳಿಗೆ ಆನ್ ಲೈನ್, ಮತ್ತು ಮುಂಗಡ ಬುಕಿಂಗ್ ಕೌಂಟರ್​ಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. 4 ಅಥವಾ 4ಕ್ಕಿಂತ ಹೆಚ್ಚು ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡರೆ ಮೂಲ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೇ ಟಿಕೆಟ್ ಪಡೆದರೆ ಬರುವಾಗಿನ ಪ್ರಯಾಣಕ್ಕೆ ಮೂಲ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ಸಿಗುತ್ತದೆ.

ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳಿಗೆ ವೋಲ್ವೊ, ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಬಸ್ಸುಗಳು ಸೇರಿದಂತೆ ಒಟ್ಟು 65 ಬಸ್ಸುಗಳು ಸಂಚರಿಸುತ್ತಿದ್ದವು. ಲಾಕ್ ಡೌನ್ ನಂತರದಲ್ಲಿ ಹಂತ ಹಂತವಾಗಿ 53 ಬಸ್ಸುಗಳ ಸಂಚಾರವನ್ನು  ಮರು ಪ್ರಾರಂಭಿಸಲಾಗಿತ್ತು. ಈಗ ಮತ್ತೆ ಹತ್ತು ಬಸ್ಸುಗಳನ್ನು ಪುನರಾರಂಭಿಸಲಾಗಿದೆ.

ಇದನ್ನೂ ಓದಿ: ಸಿಐಡಿ ಡಿವೈಎಸ್​ಪಿ ಲಕ್ಷ್ಮಿ ನೇಣಿಗೆ ಶರಣು; ವೈವಾಹಿಕ ಮನಸ್ತಾಪವೇ ಆತ್ಮಹತ್ಯೆಗೆ ಕಾರಣವಾಯ್ತಾ?

ನಾಲ್ಕು ದಿನಗಳ ಕಾಲ ಸಾರಿಗೆ ನೌಕರರು ನಡೆಸಿದ ಮುಷ್ಕರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿತ್ತು. ಈಶಾನ್ಯ ರಸ್ತೆ ಸಾರಿಗೆಯಿಂದ ಪ್ರತಿದಿನ 3775 ಬಸ್ಸುಗಳು ಸಂಚಾರ ಮಾಡುತ್ತಿವೆ. ಮುಷ್ಕರವಿದ್ದುದರಿಂದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಬಹುತೇಕ ಬಸ್ ಸಂಚಾರ ಮಾಡಿರಲಿಲ್ಲ. ಹೀಗಾಗಿ, ಈಶಾನ್ಯ ರಸ್ತೆ ಸಾರಿಗೆಯ ನೌಕರರ ಮುಷ್ಕರದಿಂದ ಅಂದಾಜು 15 ಕೋಟಿ ರೂ. ನಷ್ಟವಾಗಿದೆ. ವಾಯುವ್ಯ ರಸ್ತೆ ಸಾರಿಗೆಯಲ್ಲಿ ಪ್ರತಿದಿನ 3,402 ಬಸ್​ಗಳು ಸಂಚಾರ ಮಾಡುತ್ತವೆ. ಸಾರಿಗೆ ನೌಕರರ ಮುಷ್ಕರದಿಂದ ವಾಯುವ್ಯ ಸಾರಿಗೆಯಲ್ಲಿ 14 ಕೋಟಿ ರೂ. ನಷ್ಟವಾಗಿದೆ.

ಕೆಎಸ್​ಆರ್​ಟಿಸಿಯಿಂದ ಪ್ರತಿದಿನ 6,000 ಬಸ್​ಗಳು ಸಂಚಾರ ಮಾಡುತ್ತಿವೆ. ನಾಲ್ಕು ದಿನಗಳ ಮುಷ್ಕರದಿಂದ ಕೆಎಸ್​ಆರ್​ಟಿಯಲ್ಲಿ ಅಂದಾಜು 16 ಕೋಟಿ ರೂ. ನಷ್ಟ ಉಂಟಾಗಿದೆ. ಬಿಎಂಟಿಸಿಯಿಂದ ಪ್ರತಿದಿನ 4,900ರಿಂದ 5,000 ಬಸ್​ಗಳು ಸಂಚಾರ ಮಾಡುತ್ತವೆ. ಮುಷ್ಕರದಿಂದ ಬಿಎಂಟಿಸಿಯಲ್ಲಿ 8.4 ಕೋಟಿ ರೂ. ಅಂದಾಜು ನಷ್ಟವಾಗಿದೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆಯಲ್ಲಿ ಒಟ್ಟು 1.40 ಲಕ್ಷ ಸಾರಿಗೆ ಸಿಬ್ಬಂದಿಗಳಿದ್ದಾರೆ. ನಾಲ್ಕು ನಿಗಮದಿಂದ 36 ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್​ಗಳಿವೆ.
Published by:Sushma Chakre
First published: