ನಿರೀಕ್ಷೆಗೂ ಮೀರಿ ಪ್ರವಾಸೋದ್ಯಮ ಚೇತರಿಕೆ; ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ  ಹೊಸ ಚೈತನ್ಯ

ಕೋವಿಡ್ ನಂತರ ಚೇತರಿಕೆ ಕಾಣುವುದೇ  ಇಲ್ಲ ಎಂದ ಪ್ರವಾಸೋದ್ಯಮ ಈಗ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ

ಕಡಲ ತೀರದಲ್ಲಿ ಪ್ರವಾಸಿಗರ ದಂಡು

ಕಡಲ ತೀರದಲ್ಲಿ ಪ್ರವಾಸಿಗರ ದಂಡು

  • Share this:
ಕಾರವಾರ (ಫೆ. 6): ಕಳೆದ ವರ್ಷ ಮಾರ್ಚ್ ತಿಂಗಳ ಪ್ರವಾಸಿ ಹಂಗಾಮಿನಲ್ಲಿ ಕಾಣಿಸಿಕೊಂಡ ಕೋವಿಡ್ ಮಹಾಮಾರಿಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡಿತ್ತು.  ಬಳಿಕ ದೇಶವೇ ಲಾಕ್​ಡೌನ್​ ಗೊಂಡ ನಂತರದ ದಿನದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುವುದೇ ಇಲ್ಲ ಎಂದು ರೇಸಾರ್ಟ್, ಹೊಟೇಲ್ ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ ಪ್ರವಾಸೋದ್ಯಮ ನಿರೀಕ್ಷೆಗೂ ಮೀರಿ ಚೇತರಿಕೆ ಕಾಣುತ್ತಿದೆ.ಜಿಲ್ಲೆಯ ದಾಂಡೇಲಿ, ಗೋಕರ್ಣ, ಮುರ್ಡೆಶ್ವರ, ಗಳಲ್ಲಿ ಈಗ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಕೇಂಡ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬರಬೇಕು ಎಂದರೆ ಹದಿನೈದು ದಿನ ಮುಂಚಿತವಾಗಲೆ ರೂಮ್ ಬುಕ್ ಕಾಯ್ದಿರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೇಳಬೇಕೆಂದರೆ ಕಳೆದ 10 ದಿನಗಳಿಂದ ಆದ ನಷ್ಟಗಳು ತುಂಬುವಂತೆ ಈಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣುತ್ತಿರುವುದು ಇಲ್ಲಿನ ಹೊಟೇಲ್​ ಮತ್ತು ರೆಸಾರ್ಟ್​ ಮಾಲೀಕರಿಗೆ ಖುಷಿ ತಂದಿದೆ. 

ಕಳೆದ ಒಂದು ವರ್ಷದಿಂದ ಮನೆಯಲ್ಲಿದ್ದ ಮಂದಿ ಈಗ ನಿಧಾನವಾಗಿ ಪ್ರವಾಸಿತಾಣದತ್ತ ಧಾವಿಸುತ್ತಿದ್ದಾರೆ. ವಿಕೇಂಡ್ ಮತ್ತು ವೀಕ್ ಡೇಸ್ ನಲ್ಲೂ ಕೂಡಾ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಗೋಕರ್ಣ ಬೀಚ್ ರೆಸಾರ್ಟ್ ಗಳು ಪ್ರವಾಸಿಗರಿಂದ ತುಂಬುತ್ತಿದೆ.  ಕಾಟೇಜ್ ಗಳು ಕೂಡಾ ಪ್ರವಾಸಿಗರ ಗರ್ದಿಯಿಂದ ಕೂಡಿದೆ. ಇನ್ನು ದಾಂಡೇಲಿಯಲ್ಲಿ ಸಾಕಷ್ಟು ಪ್ರವಾಸಿಗರು ಬೀಡುಬಿಟ್ಟಿದ್ದಾರೆ. ಈ ಮೂಲಕ ಕೋವಿಡ್ ನಂತರ ಚೇತರಿಕೆ ಕಾಣುವುದೇ  ಇಲ್ಲ ಎಂದ ಪ್ರವಾಸೋದ್ಯಮ ಈಗ ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ

ಹೇಗಿತ್ತು ಹೇಗಾಯ್ತು

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಈಗ ಭಾರೀ ಚೇತರಿಕೆ ಕಂಡಿದೆ. ಕೋವಿಡ್ ನಂತರದ ದಿನ ಅಂದರೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಪ್ರವಾಸಿಗರಿಲ್ಲದೆ ಹೊಟೇಲ್, ರೆಸಾರ್ಟ್ ಪುನಃ ತೆರೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದರು. ರೀ ಓಪನ್ ಮಾಡಿ ಮತ್ತೆ ಪ್ರವಾಸಿಗರ ಕೊರತೆ ಆದರೆ ಏನು ಮಾಡೋದು ಎಂಬ ಸಂಶಯ ಎಲ್ಲಾ ಉದ್ಯಮಿಗಳಲ್ಲೂ ಕಾಡಿತ್ತು. ಆದರೆ ನವೆಂಬರ್ ತಿಂಗಳ ನಂತರ ಸುನಾಮಿಯಂತೆ ಆರಂಭವಾದ ಪ್ರವಾಸೋದ್ಯಮ ಚಟುವಟಿಕೆಗಳು ಈಗ ನಿರೀಕ್ಷೆಗೂ ಮೀರಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಇನ್ನೇನು ಹೊಟೇಲ್, ರೆಸಾರ್ಟ್ ಮುಚ್ಚುವುದು  ಅಂದುಕೊಂಡಿದ್ದ ಮಾಲಿಕರು ಖುಷಿ ಖುಷಿಯಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಾಜ್ಯ ಅಷ್ಟೆ ಅಲ್ಲದೆ ಹೊರ ರಾಜ್ಯದ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, , ದಾಂಡೇಲಿ ಕಡೆ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ವೀಕೆಂಡ್ ನಲ್ಲಿ ಜಿಲ್ಲೆಯ ಎಲ್ಲಾ ಕಡಲತೀರಗಳು ಪ್ರವಾಸಿಗರಿಂದ ಕೂಡಿರುತ್ತಿದೆ. ಮತ್ತೆ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಬಂದಿದೆ.

ಆರಂಭದಲ್ಲಿ ಕಾಡಿದ್ದ ಹೊಟೇಲ್ ಕಾರ್ಮಿಕರ ಕೊರತೆ ಸಮಸ್ಯೆ

ಕೋವಿಡ್ ನಂತರ ಆರಂಭವಾದ ಪ್ರವಾಸೋದ್ಯಮ ಚಟುವಟಿಕೆಗೆ ಮೊದಲ ಹೆಜ್ಜೆಯಲ್ಲೆ ಎದುರಾಗಿದ್ದ ಸಮಸ್ಯೆ ಕಾರ್ಮಿಕರದ್ದು. ಕೋವಿಡ್ ಲಾಕ್ ಡೌನ್ ಸಂದರ್ಭಲ್ಲಿ ಜಿಲ್ಲೆಯನ್ನ ಬಿಟ್ಟು ತಮ್ಮ ತಮ್ಮ ಊರು ಸೇರಿದ್ದ ವಲಸೆ ಕಾರ್ಮಿಕರು ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲು ಸಾಕಷ್ಟು ಸಮಸ್ಯೆ  ಎದುರಿಸುವಂತಾಯಿತು. ಅವರನ್ನೆ ನೆಚ್ಚಿಕೊಂಡಿದ್ದ ಜಿಲ್ಲೆಯ ಹೊಟೇಲ್ ರೆಸಾರ್ಟ್ ಮಾಲೀಕರಿಗೆ ಇದು ನುಂಗಲಾರದ ತುತ್ತಾಯಿತು. ಹೇಗೋ ಮಾಡಿ ಕುಂಟುತ್ತಾ ಕುಂಟುತ್ತಾ ಸಾಗಿದ ಪ್ರವಾಸೋದ್ಯಮದಲ್ಲಿ ಮತ್ತೆ ಕಾರ್ಮಿಕರು ಜತೆಯಾದರು.  ಈಗ ಪ್ರವಾಸೋದ್ಯಮ ಈ ಹಿಂದಿನಂತೆ ಮುಂದುವರೆದಿದೆ. ಈಗ ಜಿಲ್ಲೆಗೆ ವಿಕೇಂಡ್ ನಲ್ಲಿ 25ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಕ್ ಡೇಸ್ ನಲ್ಲೂ ಕೂಡಾ ಪ್ರವಾಸಿಗರ ಸಂಖ್ಯೆ ಜೋರಾಗಿದೆ. ಇದ್ರಿಂದ ಉದ್ಯೋಗ ಕಳೆದುಕೊಂಡವರಿಗೆ ಮತ್ತೆ ಉದ್ಯೋಗದ ನೆಲೆ ಸಿಕ್ಕಿದ್ದು ಉತ್ತಮ ಬೆಳವಣಿಗೆಯಾಗಿದೆ
Published by:Seema R
First published: