2020ರಲ್ಲಿ ಕೊರೊನಾ (Corona Virus) ಅಪ್ಪಳಿಸಿದ ಬಳಿಕ ಶಿಕ್ಷಣ ಪದ್ಧತಿಯಲ್ಲಿ (Education Method) ಹಲವು ಬದಲಾವಣೆಗಳು ಆಗಿವೆ. ಕೊರೊನಾ ಹಿನ್ನೆಲೆ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಗಳು (Online Class) ಆರಂಭಗೊಂಡಿದ್ದವು. ಸದ್ಯ ಕೊರೊನಾ ಪಸರಿಸುವಿಕೆ ಪ್ರಮಾಣ ಕ್ಷೀಣಿಸಿದ್ದು, ಶಾಲೆಗಳು (Schools Reopen) ಮೊದಲಿನಂತೆ ಆರಂಭಗೊಂಡಿವೆ. ಆನ್ಲೈನ್ ಕ್ಲಾಸ್ ಹಿನ್ನೆಲೆ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಹೊಸ ಸ್ಮಾರ್ಟ್ಫೋನ್ (Smartphone) ಕೊಡಿಸಿದ್ದರು. ಒಂದಿಷ್ಟು ತಮ್ಮ ಮೊಬೈಲ್ಗಳನ್ನು ಮಕ್ಕಳಿಗೆ (Children) ನೀಡಿದ್ದರು. ಸದ್ಯ ಆನ್ಲೈನ್ ತರಗತಿಗಳು ಸ್ಥಗಿತಗೊಂಡಿವೆ. ಆದ್ರೆ ಬೆರಳಣಿಕೆಯ ಶಾಲೆಗಳು ರಜಾ ದಿನಗಳಲ್ಲಿ ಆನ್ಲೈನ್ನಲ್ಲಿ ಹೆಚ್ಚುವರಿ ಪಾಠ ಮಾಡುತ್ತಿದ್ದಾರೆ. ಇನ್ನು ಒಂದಿಷ್ಟು ಪೋಷಕರು (Parents) ಆನ್ಲೈನ್ ಆಪ್ಗಳ ಮೂಲಕ ಮಕ್ಕಳಿಗೆ ಹೆಚ್ಚುವರಿ ಪಾಠ ಮಾಡಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮಕ್ಕಳ ಕೈಗೆ ಮೊಬೈಲ್ (Mobile) ಸುಲಭವಾಗಿ ಸಿಗುತ್ತಿದೆ.
ಕೊರೊನಾ ಕಾಲಘಟ್ಟದ ನಂತರ ಮಕ್ಕಳಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗಿದೆ ಎಂಬ ಆತಂಕಕಾರಿ ಅಂಶವನ್ನು ಚೈಲ್ಡ್ ರೈಟ್ಸ್ ಸಂಸ್ಥೆ ಹಾಗೂ ಮನೋವೈದ್ಯರು ಹೊರ ಹಾಕಿದ್ದಾರೆ. ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳು ಮೊಬೈಲ್ನಲ್ಲಿ ಏನ್ ಮಾಡ್ತಾರೆ? ಯಾವ ರೀತಿಯ ವಿಡಿಯೋಗಳನ್ನ ನೋಡ್ತಾರೆ ಎಂಬುದರ ಬಗ್ಗೆ ಕಣ್ಣಿರಿಸುವಂತೆ ಸಲಹೆ ನೀಡಿದ್ದಾರೆ.
ಪೋಷಕರ ಕಣ್ತಪ್ಪಿಸಿ ವಿಡಿಯೋ ವೀಕ್ಷಣೆ
ಕೊರೊನಾ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚಾದ ಹಿನ್ನೆಲೆ ಮಕ್ಕಳು ಕೆಟ್ಟ ಚಟಕ್ಕೆ ತುತ್ತಾಗಿದ್ದಾರೆ. ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್ ಸಿಗುತ್ತಿರುವ ಹಿನ್ನೆಲೆ ಪೋಷಕರ ಕಣ್ತಪ್ಪಿಸಿ ಪೋರ್ನೋಗ್ರಫಿ ವೆಬ್ಸೈಟ್ ಸರ್ಚ್ ಮಾಡುತ್ತಿದ್ದಾರೆ. ಗೆಳೆಯರ ವಾಟ್ಸಾಪ್, ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಮತ್ತು ಅದಕ್ಕೆ ಸಂಬಂಧಿಸಿದ ಲಿಂಕ್ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಫ್ರೆಂಡ್ಸ್ ಗ್ರೂಪ್ಗಳಿಂದಲೂ ಸುಲಭವಾಗಿ ಪೋರ್ನೋಗ್ರಫಿ ನೋಡಲು ಸಿಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಶ್ಲೀಲ ವಿಡಿಯೋ ನೋಡುವದರಿಂದ ಮೆದುಳಿನಲ್ಲಿರುವ ಡೋಪಮೈನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮ ಮಕ್ಕಳ ದೈಹಿಕ ಮತ್ತು ಮಾನಸಿಕವಾಗಿ ಬದಲಾವಣೆಗಳು ಆಗುತ್ತಿವೆ ಎಂದು ತಜ್ಞರು ಹೇಳುತ್ತಾರೆ.
14-15ನೇ ವಯಸ್ಸಿಗೆ ಮಕ್ಕಳು ಅಶ್ಲೀಲ ಚಿತ್ರಗಳನ್ನ ವೀಕ್ಷಣೆ ಮಾಡುವ ಗೀಳು ಶುರು ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರ ಬಂದಿದೆ. ಹಾಗಾದ್ರೆ ಮಕ್ಕಳ ಈ ರೀತಿ ಚಟಕ್ಕೆ ಮುಕ್ತಿ ಹೇಗೆ? ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು?
*ಮಕ್ಕಳಿಗೆ ಯೋಗ - ಧ್ಯಾನ ಮಾಡಿಸಬೇಕು
*ಮಕ್ಕಳಿಗೆ ಸೆಕ್ಸುಯಲ್ ಎಜುಕೇಶನ್ ನೀಡಬೇಕು
*ನಮ್ಮ ದೇಸಿ ಊಟದ ಪದ್ಧತಿ ರೂಢಿಸಬೇಕು
*ಮಕ್ಕಳ ಬಳಿ ಮುಕ್ತವಾದ ಸಂವಾದ ಇರಬೇಕು.
ಇದನ್ನೂ ಓದಿ: School Bags: ಭಾರವಾದ ಶಾಲಾ ಬ್ಯಾಗ್ಗಳು ಮಕ್ಕಳಿಗೆ ಕಂಟಕವಾಗಬಹುದು! ಪೋಷಕರೇ ಈ ಬಗ್ಗೆ ಇರಲಿ ಗಮನ
ಮಕ್ಕಳ ಬ್ಯಾಗ್ನಲ್ಲಿ ಗರ್ಭನಿರೋಧಕ, ಕಾಂಡೋಮ್ ಪತ್ತೆ
ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆಯಂತೆ. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ.
ಇದನ್ನೂ ಓದಿ: Positive Story: ಶಾಲೆ ಆಡಳಿತ ಮಕ್ಕಳ ಕೈಗೆ, ಪಾಠ ಮಾಡೋದೂ ವಿದ್ಯಾರ್ಥಿಗಳೇ!
ಮಕ್ಕಳಿಗೆ ಕೌನ್ಸಿಲಿಂಗ್ ನೀಡಲು ಸಲಹೆ
ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಮಕ್ಕಳು ಮನೆಗೆ ಬರುವ ಮತ್ತು ಹೊರಡು ವೇಳೆ ಹಾಗೂ ನಡವಳಿಕೆ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದೆ. ನಗರದ ಕೆಲವು ಶಾಲೆಗಳಲ್ಲಿ 10 ದಿನಗಳ ಕಾಲ ರಜೆ ಘೋಷಿಸಿ ಕೌನ್ಸಿಲಿಂಗ್ ನೀಡುವಂತೆ ಸಲಹೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ