• Home
  • »
  • News
  • »
  • state
  • »
  • ಮಳವಳ್ಳಿ ಲಿಂಗಪಟ್ಟಣದ ಮಾರಮ್ಮ ದೇವರ ಪ್ರಸಾದ ಸೇವಿಸಿ 75 ಮಂದಿ ಅಸ್ವಸ್ಥ

ಮಳವಳ್ಳಿ ಲಿಂಗಪಟ್ಟಣದ ಮಾರಮ್ಮ ದೇವರ ಪ್ರಸಾದ ಸೇವಿಸಿ 75 ಮಂದಿ ಅಸ್ವಸ್ಥ

ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವುದು

ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವುದು

ಚಾಮರಾಜನಗರದ ಸುಳ್ವಾಡಿ ಕಿಚ್ಗುತ್ತಿ ಮಾರಮ್ಮನ ವಿಷ ಪ್ರಸಾದ ಪ್ರಕರಣ ಮಾಸುವ  ಮುನ್ನವೇ ಸಕ್ಕರೆನಾಡಲ್ಲಿ ಅಂತಹದ್ದೇ ಪ್ರಕರಣ ನಡೆದಿದೆ

  • Share this:

ಮಂಡ್ಯ (ಅ.28):  ಚಾಮರಾಜನಗರದ ಸುಳ್ವಾಡಿ ಕಿಚ್ಗುತ್ತಿ ಮಾರಮ್ಮನ ವಿಷ ಪ್ರಸಾದ ಪ್ರಕರಣ ಮಾಸುವ  ಮುನ್ನವೇ ಸಕ್ಕರೆನಾಡಲ್ಲಿ ಅಂತಹದ್ದೇ ಪ್ರಕರಣ ನಡೆದಿದೆ.  ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದ ಗ್ರಾಮದ ಮಾರಮ್ಮ ದೇವರ ಪ್ರಸಾದ ಸೇವಿಸಿ 75ಕ್ಕೂ ಭಕ್ತರು ಅಸ್ವಸ್ಥರಾಗಿದ್ದಾರೆ. ಪ್ರಸಾದ ತಿಂದವರಲ್ಲಿ ವಾಂತಿ, ಬೇಧಿ ಶುರುವಾಗಿದ್ದು, ನಿತ್ರಾಣಗೊಂಡಿದ್ದಾರೆ.  ಅಸ್ವಸ್ಥಗೊಂಡವರನ್ನು ತಕ್ಷಣಕ್ಕೆ ಗ್ರಾಮದ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿಗಳು, ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಪ್ರಸಾದ ಸೇವಿಸಿದವರ ಪರೀಕ್ಷೆ  ನಡೆಸಿದ್ದು, ಚಿಕಿತ್ಸೆಗೆ ಮುಂದಾಗಿದ್ದಾರೆ. 


ಊರಿನ ಪ್ರಮುಖ ಮುಖಂಡರೊಬ್ಬರ ಮನೆಯಲ್ಲಿ  ಮದುವೆ ಪ್ರಯುಕ್ತ ರಾತ್ರಿ ಊರಿನ‌ ಮಾರಮ್ಮನ  ದೇವಾಲಯದಲ್ಲಿ ಪೂಜೆ ಮಾಡಿಸಿ ಜನರಿ ಗಾಗಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಮಾಡಿ ವಿತರಿಸಲಾಗಿತ್ತು. ಗ್ರಾಮದ 100 ಕ್ಕೂ ಹೆಚ್ಚು ಮಂದಿ ಆ  ಪ್ರಸಾದವನ್ನು‌ ಸೇವಿಸಿದ್ದರು. ಈ ಪ್ರಸಾದ ಸೇವಿಸಿದ ಕೆಲವರಿಗೆ ರಾತ್ರಿ ವಾಂತಿ ಬೇಧಿ ಕಾಣಿಸಿಕೊಂಡು ಹಲಗೂರಿನ ಆಸ್ಪ ತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು .ಬೆಳಿಗ್ಗೆ ಮತ್ತಷ್ಟು ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಅವರೆಲ್ಲರೀ ಹಲಗೂರಿನ ಆಸ್ಪತ್ರೆ ಬಂದಿದ್ದಾರೆ. ಒಂದೇ ಊರಿನ‌ ಹೆಚ್ಚಿನ‌ ಜನರು  ಆಸ್ಪತ್ರೆಗೆ ಬರುತ್ತಿದ್ದಂತೆ ವಿಚಾರಿಸಿದ ವೈದ್ಯರು ಗ್ರಾಮದ ಆಗಿರುವ ಸಮಸ್ಯೆ ಅರಿತು‌ ಕೂಡಲೇ ಲಿಂಗಪಟ್ಟಣಕ್ಕೆ  ತಮ್ಮ ಸಿಬ್ಬಂದಿಗಳೊಂದಿಗೆ ಬಂದಿದ್ದಾರೆ‌. ಊರಿನಲ್ಲಿ ಪ್ರಸಾದ ತಿಂದ ಬಹುತೇಕರಿಗೆ ವಾಂತಿ, ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡವರಿಗೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದು ಬಹುತೇಕರು ಚೇತರಿಸಿಕೊಂಡಿದ್ದಾರೆ‌.


ಗ್ರಾಮದಲ್ಲಿನ ಪರಿಸ್ಥಿತಿಯ ಬಗ್ಗೆ  ಸ್ಥಳೀಯ ವೈದ್ಯರು ತಮ್ಮ ಮೇಲಧಿಕಾರಿಗಳಿಗೆ ಗ್ರಾಮದಲ್ಲಿ ಫುಡ್ ಪಾಯಿಸನ್ ಆಗಿರೋ ಬಗ್ಗೆ  ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಚೇಗೌಡ, ಮಳವಳ್ಳಿ  ಡಿವೈಎಸ್​ಪಿ ಪೃಥ್ವಿ ಹಾಗೂ ಸಿಪಿಊ  ಭೇಟಿ ನೀಡಿ ಪರಿಸ್ಥಿತಿಯ ಅವ ಲೋಕನ ನಡೆಸಿದರು. ಗ್ರಾಮದಲ್ಲಿ ದೇವರ ಪ್ರಸಾದ ತಯಾರಿಕೆ ಮಾಡುವಾಗ ಫುಡ್ ಪಾಯಿಸನ್ ಆಗಿರು ಶಂಕೆಯ ಮೇರೆಗೆ  ತಯಾರಿಸಿದ್ದ ಪ್ರಸಾದ ಹಾಗೂ ನೀರಿನ ಸ್ಯಾಂಪಲ್ ನ್ನು ಪರೀಕ್ಷೆಗಾಗಿ ಪಡೆದುಕೊಂಡರು. ಸದ್ಯ ಗ್ರಾಮದಲ್ಲಿ ಬಹುತೇಕರು ಚೇತರಿಸಿಕೊಂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು,ಯಾವುದೇ ಆತಂಕ ವಿಲ್ಲವೆಂದು ಡಿಎಚ್​ಒ ತಿಳಿಸಿದ್ದಾರೆ. ಒಂದಿಬ್ಬರು ಹೆಚ್ಚು‌ಅಸ್ವಸ್ಥ ಗೊಂಡಿರೋದರಿಂದ ಮಳವಳ್ಳಿ ಆಸ್ಪತ್ರೆಗೆ ಕಳಿಸಿದ್ದು ಪ್ರಯೋಗಾಲಯದ ವರದಿ ಬಂದ ಬಳಿಕ ಇದಕ್ಕೆ  ಕಾರಣವೇನೆಂದು ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.


ಗ್ರಾಮದಲ್ಲಿ ನಡೆದ ಈ ಘಟನೆ ಯಿಂದಾಗಿ  ಇಡೀ ಗ್ರಾಮದ ಜನರು‌ ಆತಂಕಗೊಂಡಿ ದ್ದಾರೆ. . ಸದ್ಯ ಯಾವುದೇ ಅನಾಹುತ ಆಗಿಲ್ಲವಾದರೂ ಆರೋಗ್ಯ ಇಲಾಖೆ ಈ ಬಗ್ಗೆ ಕಟ್ಟೆಚ್ಚರ ವಹಿಸಿ ಗ್ರಾಮದಲ್ಲೇ ಬೀಡು ಬಿಟ್ಟು ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.

Published by:Seema R
First published: