ಕಲಾಪ ಸಲಹಾ ಸಮಿತಿ ಸಭೆಗೆ ಕಾಂಗ್ರೆಸ್ ಬಹಿಷ್ಕಾರ; ಇಂದಿನ ಸಭೆ ಮುಂದೂಡಿಕೆ

ಕಾಂಗ್ರೆಸ್​ ನಾಯಕರು ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ) ಬಹಿಷ್ಕಾರ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಸಭೆಯನ್ನು ಮುಂದೂಡಿಕೆ ಮಾಡಿದೆ. ಇಂದು ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

ಸಿದ್ದರಾಮಯ್ಯ-ಯಡಿಯೂರಪ್ಪ.

ಸಿದ್ದರಾಮಯ್ಯ-ಯಡಿಯೂರಪ್ಪ.

  • Share this:
ಬೆಂಗಳೂರು (ಜ. 29): ಕಲಾಪ ಸಲಹಾ ಸಮಿತಿ ಸಭೆಗೆ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರು ಗೈರಾದ ಹಿನ್ನೆಲೆಯಲ್ಲಿ ಸಭೆಯನ್ನೇ ಮುಂದೂಡಲಾಗಿದೆ.
ಕಾಂಗ್ರೆಸ್​ನಿಂದ ಕಲಾಪ ಸಲಹಾ ಸಮಿತಿ ಸಭೆ (ಬಿಎಸಿ) ಬಹಿಷ್ಕಾರ ಹಿನ್ನೆಲೆಯಲ್ಲಿ ಸರ್ಕಾರ ಸಭೆಯನ್ನು ಮುಂದೂಡಿಕೆ ಮಾಡಿದೆ. ಇಂದು ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ಈ ಸಭೆಯನ್ನು ಕಾಂಗ್ರೆಸ್ ಬಹಿಷ್ಕಾರ ಮಾಡಿದ್ದರಿಂದ ಸರ್ಕಾರ ಸಭೆಯನ್ನೇ ಮುಂದೂಡಿದೆ ಎಂದು ಸಭೆ ಮುಂದೂಡಿಕೆ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಕಲಾಪ ಸಲಹಾ ಸಮಿತಿ ಸಭೆಗೆ ಪ್ರಮುಖ ವಿಪಕ್ಷ ಕಾಂಗ್ರೆಸ್ ಗೈರಾಗಿದ್ದಾರೆ. ಬಿಎಸಿ ಸಭೆಯಲ್ಲಿ ತೀರ್ಮಾನವಾದಂತೆ ಸರ್ಕಾರ ನಡೆದುಕೊಳ್ಳುವುದಿಲ್ಲ. ಸಭೆಯಲ್ಲಿ ಒಂದು ತೀರ್ಮಾನ ಮಾಡಿ, ಸದನದ ಒಳಗೆ ಅದರ ವಿರುದ್ಧದ ತೀರ್ಮಾನ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು, ತಾವು ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು.

ಇನ್ನು, ಕಲಾಪ ಸಲಹಾ ಸಮಿತಿ ಸಭೆ ಮುಂದೂಡಿಕೆ ಬಗ್ಗೆ ಮಾಹಿತಿ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಜಾಪ್ರಭುತ್ವದ ಅಡಿಯಲ್ಲಿ ಸದನ ನಡೆಸುತ್ತಿದ್ದೇನೆ. ಪ್ರತಿಪಕ್ಷಗಳು ಸಭೆಗೆ ಬರಲಿಲ್ಲ ಎಂಬ ಕಾರಣಕ್ಕೆ ಬಿಎಎಸಿ ಸಭೆಯನ್ನು ಇಂದು ಮುಂದೂಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಸಿದ್ದರಾಮಯ್ಯನವರ ಜೊತೆ ಚರ್ಚೆ ಮಾಡುತ್ತೇನೆ. ಅಭಿಪ್ರಾಯ ಭೇದಗಳು ಎಲ್ಲೆಡೆ ಇರುತ್ತವೆ. ಸದನದಲ್ಲಿ ಅಥವಾ ಸಭೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಕಾಂಗ್ರೆಸ್ ಬಹಳಷ್ಟು ವರ್ಷ ದೇಶ ಆಳಿದ ಪಕ್ಷ. ಕಾಯ್ದೆಗಳ ವಾಪಸಾತಿಗೆ ಹೋರಾಟ ಮಾಡಲು ಬೇರೆ ಮಾರ್ಗಗಳಿವೆ. ಹೀಗಾಗಿ ಸಭೆಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Budget Session 2021: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ; ರಾಷ್ಟ್ರಪತಿ ಭಾಷಣ ಬಹಿಷ್ಕಾರಕ್ಕೆ ವಿಪಕ್ಷಗಳು ನಿರ್ಧಾರ

ಸದನ ಕಲಾಪ ಸಲಹಾ ಸಮಿತಿ ಸಭೆಗೆ ಕಾಂಗ್ರೆಸ್ ಬಹಿಷ್ಕಾರ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿನ್ನೆ ಕಾಂಗ್ರೆಸ್ ನಾಯಕರು ಸಭೆಗೆ ಬರುವುದಿಲ್ಲ ಎಂದಿದ್ದರು. ಸಿದ್ದರಾಮಯ್ಯ ಅವರ ಜೊತೆ ಈ ವಿಚಾರವಾಗಿ ಮಾತನಾಡಿದ್ದೇನೆ. ಹಿರಿಯ ಸದಸ್ಯರಾದ ಆರ್. ವಿ ದೇಶಪಾಂಡೆ ಹಾಗೂ ಡಿಕೆ ಶಿವಕುಮಾರ್ ಅವರ ಬಳಿಯೂ ಮಾತುಕತೆ ಮಾಡಿದ್ದೇನೆ. ಏನೇ ವಿಚಾರ ಇದ್ದರೂ ಕುಳಿತುಕೊಂಡು ಬಗೆಹರಿಸೋಣ ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ.

ಹಿಂದಿನ ಕಲಾಪ ಸಲಹಾ ಸಮಿತಿಯ ಬಗ್ಗೆ ಅವರ ಕೆಲವೊಂದು ಆಕ್ಷೇಪಗಳಿವೆ. ಅವೆಲ್ಲವನ್ನೂ ಚರ್ಚೆ ಮಾಡಿ ದೂರ ಮಾಡಲು ಸಾಧ್ಯ ಎಂದು ಮನವಿ ಮಾಡಿದ್ದೇನೆ. ಜನರ ಹಿತದೃಷ್ಟಿಯಿಂದ ಬನ್ನಿ, ಸ್ಪೀಕರ್ ನೇತೃತ್ವದಲ್ಲಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸೋಣ ಎಂದಿದ್ದೇನೆ. ಆದರೆ, ಅವರು ಇಂದು ಸಭೆಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
Published by:Sushma Chakre
First published: