• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CM of Karnataka: ಏನ್ ಹೇಳಲಯ್ಯಾ ನಾನು? ಸಿಎಂ ಘೋಷಣೆ ಬಳಿಕ  ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

CM of Karnataka: ಏನ್ ಹೇಳಲಯ್ಯಾ ನಾನು? ಸಿಎಂ ಘೋಷಣೆ ಬಳಿಕ  ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಸಿದ್ದರಾಮಯ್ಯ,, ನೂತನ ಸಿಎಂ

ಸಿದ್ದರಾಮಯ್ಯ,, ನೂತನ ಸಿಎಂ

Siddaramaiah: ನವದೆಹಲಿಯ ಮೌರ್ಯ ಹೋಟೆಲ್ ಬಳಿ ನೂತನ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮಾಧ್ಯಮ ಸಿಬ್ಬಂದಿ, ನಿಮ್ಮ ಮೊದಲ ಪ್ರತಿಕ್ರಿಯೆ ಏನು ಎಂದು ಕೇಳಿದರು.

  • News18 Kannada
  • 2-MIN READ
  • Last Updated :
  • Karnataka, India
  • Share this:

ನವದೆಹಲಿ: ಎಐಸಿಸಿ (AICC) ಕಚೇರಿಯಲ್ಲಿ ಸಿದ್ದರಾಮಯ್ಯ (Siddaramaiah)  ನೂತನ ಸಿಎಂ ಮತ್ತು ಡಿಕೆ ಶಿವಕುಮಾರ್ (KPCC DK Shivakumar) ಉಪ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ. ನವದೆಹಲಿಯ ಮೌರ್ಯ ಹೋಟೆಲ್ ಬಳಿ ನೂತನ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮಾಧ್ಯಮ ಸಿಬ್ಬಂದಿ, ನಿಮ್ಮ ಮೊದಲ ಪ್ರತಿಕ್ರಿಯೆ ಏನು ಎಂದು ಕೇಳಿದರು. ಹೈಕಮಾಂಡ್ ಷರತ್ತುಗಳ (Congress High Command Conditions) ನಡುವೆ ಸಿಎಂ ಆಗಿರೋದಕ್ಕೆ ನಿಮಗೆ ಖುಷಿಯಾಗಿದೆಯಾ ಎಂಬ ಆಯಾಮದ ಪ್ರಶ್ನೆಯನ್ನು ಸಿದ್ದರಾಮಯ್ಯ ಅವರಿಗೆ ಕೇಳಲಾಯ್ತು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಏನ್.. ಹೇಳಯ್ಯಾ ನಾನು? ಎಐಸಿಸಿ ತೆಗೆದುಕೊಂಡಿರುವ ನಿರ್ಧಾರವೇ ನನ್ನದು ಎಂದು ಹೇಳಿ ಹೋಟೆಲ್ ಒಳಗೆ ನಡೆದರು.


ಸಿದ್ದರಾಮಯ್ಯ ಟ್ವೀಟ್


ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ.


ಸಿದ್ದರಾಮಯ್ಯ ಆಯ್ಕೆಗೆ ಕಾರಣಗಳೇನು?


1.ಲೋಕಸಭೆ ಚುನಾವಣೆ
2.ಅಹಿಂದ ಮತ ಬ್ಯಾಂಕ್
3.ರಾಹುಲ್ ಗಾಂಧಿ ಬೆಂಬಲ
4.ಸಮುದಾಯದ ನಾಯಕ, ಶಾಸಕರ ಬೆಂಬಲ
5.ಎಲ್ಲೂ ಶಕ್ತಿ ಪ್ರದರ್ಶನ ಮಾಡದಿರೋದು


ಇದನ್ನೂ ಓದಿ:  Karnataka DCM: ಡಿಸಿಎಂ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲ, ಎಕ್ಸ್‌ಟ್ರಾ ಪವರ್ ಏನೂ ಇಲ್ಲ: ಸತೀಶ್ ಜಾರಕಿಹೊಳಿ


ಸಿದ್ದರಾಮಯ್ಯ ಮನೆ ಮುಂದೆ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು

top videos


    2ನೇ ಬಾರಿ ಸಿಎಂ ಪಟ್ಟ ಅಲಂಕರಿಸುತ್ತಿರುವ ಸಿದ್ದರಾಮಯ್ಯ ಅವರ ಮನೆ ಮುಂದೆ ಶುಭಾಶಯ ಕೋರಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಶುಭ ಕೋರಲು ಅಭಿಮಾನಿಗಳು ಆಗಮಿಸುವ ಹಿನ್ನೆಲೆ ಸಿದ್ದರಾಮಯ್ಯ ನಿವಾಸದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    First published: