ಬೆಂಗಳೂರು: ಮತದಾರರ ಅಕ್ರಮ ಮಾಹಿತಿ ಸಂಗ್ರಹ (Voter ID Scam) ಮತ್ತು ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಲ್ಲೇಶ್ವರಂನಲ್ಲಿರುವ ಚಿಲುಮೆ ಸಂಸ್ಥೆಯ (Chilume Organisation) ಮೇಲೆ ದಾಳಿ ನಡೆದಿತ್ತು. ಇದೀಗ ಇಂತಹದೇ ಕೃತ್ಯದಲ್ಲಿ ರಾಷ್ಟ್ರೀಯ ಪಕ್ಷ ಕೂಡ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.
ಹೌದು.. ಚಿಲುಮೆ ಸಂಸ್ಥೆ ಅಕ್ರಮ ಎಸಗಿರುವ ರೀತಿಯಲ್ಲೇ ಕಾಂಗ್ರೆಸ್ ಪಕ್ಷ ಕೂಡ ಇಂತಹ ಕೃತ್ಯಕ್ಕೆ ಕೈ ಹಾಕಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಹದೇವಪುರ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್ ನಂಬರ್‌ನ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: Chilume Voter ID Scam: ವೋಟರ್ ಐಡಿ ಹಗರಣದ ಕಂಟಕ, ಕಪ್ಪು ಪಟ್ಟಿಗೆ ಸೇರಿದ ಚಿಲುಮೆ ಸಂಸ್ಥೆ!
ಐದು ಜನರ ವಿರುದ್ಧ ಎಫ್ಐಆರ್
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರ ಮನೆಗೆ ತೆರಳಿ ಗುರುತಿನ ಚೀಟಿ, ಆಧಾರ್ ಕಾರ್ಡ್ ನಂಬರ್‌ನ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೇ, ಮಹದೇವಪುರ ವಲಯದ ಎಡಿಒ ದಾಳಿ ಮಾಡಿದ್ದು, ಈ ಸಂಬಂಧ ಮತದಾರರ ಮಾಹಿತಿಯನ್ನ ಸಂಗ್ರಹಿಸುತ್ತಿದ್ದ ಐದು ಜನರ ವಿರುದ್ಧ ವೈಟ್‌ಫೀಲ್ಡ್ ಠಾನೆಯ ಪೊಲೀಸರು ಎಫ್‌ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮಾಧ್ಯಮದ ಜೊತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಮುಖ್ಯ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್, ಮನೆ ಮನೆಗೆ ತೆರಳಿ ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್ ನಂಬರ್‌ನ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಈಗಾಗಲೇ ನಮ್ಮ ಮಹದೇವರಪುರ ಎಡಿಒ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಕೂಡ ನಡೆಯುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: BBMP: ಮತದಾರರ ಮಾಹಿತಿ ಕಳವು ಮಾಡಿದ್ದ ಚಿಲುಮೆ ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ಬಯಲು!
ಅಲ್ಲದೇ, ಯಾವುದೇ ಪಕ್ಷ, ಯಾವುದೇ ಸಂಸ್ಥೆ ಅಥವಾ ಯಾವುದೇ ಸಂಘ ಮನೆ ಮನೆಗೆ ತೆರಳಿ ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್ ನಂಬರ್‌ನ ಮಾಹಿತಿಯನ್ನು ಕಲೆ ಹಾಕುವಂತಿಲ್ಲ. ತನಿಖೆ ವೇಳೆ, ತಪ್ಪು ಮಾಡಿರೋದು ದೃಢವಾದರೆ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೀವಿ ಎಂದು ಬೆಂಗಳೂರು ನಗರ ಮುಖ್ಯ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ