ನವದೆಹಲಿ (ಫೆ.7): ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೂಲ ಬಿಜೆಪಿಗರು ತಮಗೂ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಎಲ್ಲರನ್ನೂ ಸಮಾಧಾನ ಮಾಡಲು ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಸೋತಿದ್ದು, ಹೈಕಮಾಂಡ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಪಕ್ಷ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ
10 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದು ಸಹಜವಾಗಿಯೇ ಮೂಲ ಬಿಜೆಪಿಗರನ್ನು ಕೆರಳಿಸಿದ್ದು, ತಮಗೂ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಹೈಕಮಾಂಡ್ ಮೂಲಕವೇ ರೆಬೆಲ್ಗಳನ್ನು ಸಮಾಧಾನ ಮಾಡುವ ತಂತ್ರಕ್ಕೆ ಬಿಎಸ್ವೈ ಮುಂದಾಗಿದ್ದಾರೆ.
ಮಗ
ವಿಜಯೇಂದ್ರ ಮೂಲಕ ಹೈಕಮಾಂಡ್ ಸಂಪರ್ಕಕ್ಕೆ ಬಿಎಸ್ವೈ ಪ್ರಯತ್ನ ನಡೆಸಿದ್ದಾರೆ. ಇದೇ ಕಾರಣಕ್ಕೆ ಹೈಕಮಾಂಡ್ ಭೇಟಿಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡ ಭೇಟಿಗೆ ವಿಜಯೇಂದ್ರ ಪ್ರಯತ್ನ ನಡೆಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಕೆಲಸದಲ್ಲಿ ಶಾ ಹಾಗೂ ನಡ್ಡ ಬ್ಯುಸಿ ಇದ್ದಾರೆ. ಹೀಗಾಗಿ, ವಿಜಯೇಂದ್ರ ಅವರನ್ನು ಇಬ್ಬರೂ ನಾಳೆ ಭೇಟಿಯಾಗುವ ಸಾಧ್ಯತೆ ಇದೆ. ಭೇಟಿ ವೇಳೆ ಯಡಿಯೂರಪ್ಪ ನೀಡಿರುವ ಸಂದೇಶವನ್ನು ವಿಜಯೇಂದ್ರ ಹೈಕಮಾಂಡ್ಗೆ ತಿಳಿಸಲಿದ್ದಾರೆ.
ಇದನ್ನೂ ಓದಿ: 10 ಜನ ಮಂತ್ರಿಗಳಾದರೆ ಉಳಿದ ಬಿಜೆಪಿ ಶಾಸಕರೇನು ಕಡುಬು ತಿಂತಾರಾ?; ಕುಮಾರಸ್ವಾಮಿ ಕುಹಕ
ಪಕ್ಷದೊಳಗಿನ ಭಿನ್ನಮತ ಮತ್ತು ಮೂಲ
ಬಿಜೆಪಿಗರು - ಪಕ್ಷಾಂತರಿಗಳ ನಡುವೆ ಮುಸುಕಿನ ಗುದ್ದಾಟ ಮುಂದಿನ ದಿನಗಳಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಅದು ಮುನ್ನೆಲೆಗೆ ಬಂದು ವಿಪಕ್ಷದವರಿಗೆ ಆಹಾರ ಆಗುವುದರಳೊಗೆ ಅದನ್ನು ಶಮನ ಮಾಡುವ ಆಲೋಚನೆ ಸಿಎಂದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ