BS Yediyurappa: ಸಿಎಂ ಬದಲಾವಣೆ ಬಳಿಕ ವಲಸಿಗ ನಾಯಕರ ಸ್ಥಾನ ಮತ್ತಷ್ಟು ಭದ್ರ

ಮೂಲ ಬಿಜೆಪಿ ನಾಯಕರ ವಿರೋಧದ ಹಿನ್ನಲೆ ಈಗ ಅವರನ್ನು ಕೈ ಬಿಟ್ಟರೆ ಅದು ಭಿನ್ನಮತಕ್ಕೆ ಕಾರಣವಾಗಲಿದೆ

ಬಿ ಎಸ್ ಯಡ್ಯೂರಪ್ಪ

ಬಿ ಎಸ್ ಯಡ್ಯೂರಪ್ಪ

 • Share this:
  ಬೆಂಗಳೂರು (ಜು. 26):  ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಹಿನ್ನಲೆ ತಮ್ಮ ಸ್ಥಾನಮಾನ ಏನಾಗಲಿದೆ ಎಂಬ ಸಣ್ಣ ಅಳಕು ವಲಸಿಗ ಬಿಜೆಪಿ ನಾಯಕರಲ್ಲಿದೆ. ಯಾರು ಎಷ್ಟೇ ಅಭಯ ನೀಡಿದರೂ ಹೈ ಕಮಾಂಡ್​ ನಿರ್ಧಾರ ಅಂತಿಮ ಆಗಿರುವ ಹಿನ್ನಲೆ ತಮ್ಮ ಸಚಿವ ಸ್ಥಾನದಲ್ಲಿ ಬದಲಾವಣೆ ಆಗಲಿದೆಯಾ ಎಂಬ ಅನುಮಾನ ಕಾಡುತ್ತಿದೆ ಎನ್ನಲಾಗಿತ್ತು. ಆದರೆ, ಸಿಎಂ ಬದಲಾದರೂ ಕೂಡ ವಲಸಿಗ ನಾಯಕರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣ ಇಂತಿದೆ.

  ಪಕ್ಷ ತೊರೆದು ಬಂದಿದಕ್ಕೆ ಬಿಜೆಪಿ ಸರ್ಕಾರ ರಚನೆ ಆಗಿದ್ದು
  ವಲಸಿಗ ನಾಯಕರು ಮೈತ್ರಿ ಸರ್ಕಾರ ತೊರೆದು ಬಿಜೆಪಿಗೆ ಬೆಂಬಲ ನೀಡದಿದ್ದರೆ, ಇಂದು ಬಿಜೆಪಿ ಸರ್ಕಾರವೇ ಅಸ್ತತ್ವದಲ್ಲಿ ಇರುತ್ತಿರಲಿಲ್ಲ. ಇದೇ ಹಿನ್ನಲೆ ಸರ್ಕಾರ ರಚನೆಗೆ ಅವರ ಕೊಡುಗೆ ಅಪಾರ ಈ ಹಿನ್ನಲೆ ಅವರನ್ನು ಪಕ್ಷ ಯಾವುದೇ ಕಾರಣಕ್ಕೂ ಕಡೆಗಣಿಸಲ್ಲ ಎಂದು ತಿಳಿಸಿದೆ.

  ಬಿಜೆಪಿ ನಂಬಿ ಬಂದವರ ಕೈ ಬಿಡಲ್ಲ ಸಂದೇಶ
  ಬಿಜೆಪಿ ನಂಬಿ ಬಂದ ವಲಸಿಗ ನಾಯಕರನ್ನು ಈಗ ಕೈ ಬಿಟ್ಟರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಇದರಿಂದ ಪಕ್ಷದ ಮೇಲೆ ನಂಬಿಕೆ ಹೋಗುವ ಸಾಧ್ಯತೆ ಇದೆ.ಬಿಜೆಪಿ ಪಕ್ಷ ಸೇಫಲ್ಲ ಎಂಬ ಕಳಂಕ ಬರಬಾರದು. ವಲಸಿಗ ನಾಯಕರಿಗೆ ಮಾತ್ರವಲ್ಲದೇ, ಮುಂದೆ ಯಾರೇ ಬಿಜೆಪಿ ನಂಬಿ ಬಂದರೂ ಪಕ್ಷ ಅವರನ್ನು ಕೈ ಬಿಡುವುದಿಲ್ಲ ಎಂಬ ಸಂದೇಶ ರವಾನೆಯಾಗಬೇಕು ಎಂದರೆ ಅವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸುವುದು ಅನಿವಾರ್ಯವಾಗಿದೆ

  ವಲಸಿಗರ ಕೈ ಬಿಟ್ಟರೆ ಭಿನ್ನಮತಕ್ಕೆ ದಾರಿ ಆತಂಕ
  ಮೂಲ ಬಿಜೆಪಿ ನಾಯಕರ ವಿರೋಧದ ಹಿನ್ನಲೆ ಈಗ ಅವರನ್ನು ಕೈ ಬಿಟ್ಟರೆ ಅದು ಭಿನ್ನಮತಕ್ಕೆ ಕಾರಣವಾಗಲಿದೆ. ಜೊತೆಗೆ ವವಲಸಿಗರು ಒಗ್ಗಟ್ಟಾಗಿ ರಾಜೀನಾಮೆಗೆ ಮುಂದಾಗೋ ಆತಂಕ ಕೂಡ ಇದೆ.ಸರ್ಕಾರದ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗಬಾರದು. ಮುಂದಿನ ಎರಡು ವರ್ಷ ಸುಭದ್ರ ಸರ್ಕಾರವನ್ನು ಬಿಜೆಪಿ ನೀಡಬೇಕಿದ್ದು, ಮತ್ತೊಂದು ಬಂಡಾಯಕ್ಕೆ ಎಡೆ ಮಾಡಿಕೊಡದಂತೆ ಕಾರ್ಯ ನಿರ್ವಹಿಸಬೇಕಾಗಿದೆ.

  ಇದನ್ನು ಓದಿ: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ; ಹಾಗಾದ್ರೆ ವೇತನದಲ್ಲಿ ಎಷ್ಟು ಬದಲಾವಣೆಯಾಗಲಿದೆ

  ವಲಸಿಗರ ಕೈ ಬಿಟ್ಟರೆ ಬಿಎಸ್ವೈ ಕೆಂಗಣ್ಣಿಗೆ ಗುರಿಯಾಗಬಹುದು
  ವಲಸಿಗ ಬಿಜೆಪಿ ನಾಯಕರ ಪರ ಮೊದಲಿನಿಂದಲೂ ಬಿಎಸ್​ ಯಡಿಯೂರಪ್ಪ ಮೃದು ಧೋರಣೆ ಹೊಂದಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಕೂಡ ಬಿಎಸ್​ವೈ ಯಶಸ್ವಿಯಾಗಿದ್ದರು. ಈಗ ಅವರು ಕೆಳಗಿಳಿಯುತ್ತಿದ್ದಂತೆ ವಲಸಿಗರನ್ನು ಮೂಲೆ ಗುಂಪು ಮಾಡಿದರೆ, ಬಿಎಸ್​ ಯಡಿಯೂರಪ್ಪ ಅಸಮಾಧಾನ ಹೊಂದಬಹುದು. ಇದರಿಂದ ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಇದೆ.

  ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಬಾರದು
  ಈಗಾಗಲೇ ಬಿಎಸ್​ ಯಡಿಯೂರಪ್ಪ ಅವರ ಪದತ್ಯಾಗ ವಿಪಕ್ಷಗಳಿಗೆ ಅಸ್ತ್ರ ನೀಡಿದಂತೆ ಆಗಿದೆ. ಈಗ ಇವರನ್ನು ಕೈ ಬಿಟ್ಟರೆ ವಿಪಕ್ಷಗಳಿಗೆ ಮತ್ತೊಂದು ಬ್ರಹ್ಮಸ್ತ್ರ ಕೊಟ್ಟಂತೆ ಆಗುತ್ತದೆ. ಇದನ್ನೆ ಮುಂದಿನ ಚುನಾವಣೆಯಲ್ಲಿ ಪ್ರತಿಪಕ್ಷಗಳು ಲಾಭಾ ಪಡೆದುಕೊಳ್ಳುತ್ತವೆ. ಇದೇ ಹಿನ್ನಲೆ ಎಲ್ಲಾ ಆಯಾಮದಲ್ಲೂ ಅವರನ್ನು ಉಳಿಸಿಕೊಳ್ಳುವುದು ಸುರಕ್ಷೆ ಎಂಬ ಮಾತು ಕೇಳಿ ಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: