HOME » NEWS » State » AFTER BBMP BANGALORE POLICE ALSO COLLECTING 1000 RS FINE FOR NOT WEARING MASK IN PUBLIC SCT

ಮಾಸ್ಕ್ ಧರಿಸದಿದ್ದರೆ ಇಂದಿನಿಂದ ಪೊಲೀಸರೂ ಹಾಕ್ತಾರೆ 1,000 ರೂ. ದಂಡ!

ಇನ್ನುಮುಂದೆ ಕೇವಲ ಬಿಬಿಎಂಪಿ ಮಾರ್ಷಲ್​ಗಳು ಮಾತ್ರವಲ್ಲ ಪೊಲೀಸರು ಕೂಡ ಮಾಸ್ಕ್ ಹಾಕದವರಿಗೆ 1000 ರೂ. ದಂಡ ವಿಧಿಸಲಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಕಮಿಷನರ್ ದಂಡ ವಿಧಿಸೋ ಮಷಿನ್ ಕಳುಹಿಸಿದ್ದಾರೆ.

news18-kannada
Updated:October 7, 2020, 10:54 AM IST
ಮಾಸ್ಕ್ ಧರಿಸದಿದ್ದರೆ ಇಂದಿನಿಂದ ಪೊಲೀಸರೂ ಹಾಕ್ತಾರೆ 1,000 ರೂ. ದಂಡ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 7): ಮಾಸ್ಕ್ ಧರಿಸದೆ ಓಡಾಡುವವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದುಬಾರಿ ದಂಡವನ್ನೂ ಹಾಕಲು ಆರಂಭಿಸಿದ್ದರು. ಆದರೆ, ಇನ್ನುಮುಂದೆ ಕೇವಲ ಬಿಬಿಎಂಪಿ ಮಾರ್ಷಲ್​ಗಳು ಮಾತ್ರವಲ್ಲ ಪೊಲೀಸರು ಕೂಡ ಮಾಸ್ಕ್ ಹಾಕದವರಿಗೆ 1000 ರೂ. ದಂಡ ವಿಧಿಸಲಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಕಮಿಷನರ್ ದಂಡ ವಿಧಿಸೋ ಮಷಿನ್ ಕಳುಹಿಸಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರವಿಲ್ಲದಿದ್ದರೆ ಬಿಬಿಎಂಪಿ ಮಾರ್ಷಲ್ ಗಳ ಜೊತೆ ಪೊಲೀಸರು ಕೂಡ ಇನ್ನು ಮುಂದೆ ದಂಡ ವಿಧಿಸುತ್ತಾರೆ.

ಬೆಂಗಳೂರಿನ ಒಂದೊಂದು ಸ್ಟೇಷನ್ ಗೆ ಒಂದೊಂದು ದಂಡ ವಿಧಿಸುವ ಮಷಿನ್ ಕಳುಹಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್, ಇಂದಿನಿಂದ ಆಯಾ ಠಾಣೆಯ ವ್ಯಾಪ್ತಿಯಲ್ಲಿ ನಿಯಮ ಪಾಲನೆ ಮಾಡದವರಿಗೆ ದಂಡ ಹಾಕುವಂತೆ ಇನ್​ಸ್ಪೆಕ್ಟರ್​ಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ದುಬಾರಿ ದಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರು ಸಾರ್ವಜನಿಕರು, ಜನರಲ್ಲಿ ಮೊದಲು ಜಾಗೃತಿ ಮೂಡಿಸಿ, ತಾವೇ ಮಾಸ್ಕ್ ನೀಡಿ ನಂತರ ಜನರಿಗೆ ದಂಡ ಹಾಕಲಿ. ಮೊದಲೇ ಬದುಕು ನಡೆಸೋದು ಕಷ್ಟವಾಗಿರುವಾಗ ಸಾವಿರಾರು ರೂಪಾಯಿ ದಂಡ ಹಾಕೋದು ಸರಿಯಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಕೊರೊನಾ ಹೆಸರಿಟ್ಟು ಇದನ್ನೊಂದು ವ್ಯಾಪಾರ ಮಾಡಿದ್ದಾರೆ ಎಂದು ಬೆಂಗಳೂರು ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Bangalore News: ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ. ದಂಡ!

ರಾಜ್ಯಾದ್ಯಂತ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ತೋರುತ್ತಿರುವವರಿಗೆ ದುಬಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 1,000 ರೂ. ಹಾಗೂ ಇತರೆ ಪ್ರದೇಶಗಳಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರಾ ಎಂದು ಅಂಗಡಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅರ್ಧಂಬರ್ಧ ಮಾಸ್ಕ್ ಧರಿಸುವವರಿಗೂ ಸಹ ದಂಡ ಅನ್ವಯವಾಗಲಿದೆ.

ಬಿಬಿಎಂಪಿ ಮಾರ್ಷಲ್​ಗಳು ಮಾತ್ರ ಇದುವರೆಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದರು. ಆದರೆ, ಇಂದಿನಿಂದ ಬೆಂಗಳೂರು ಪೊಲೀಸರು ಕೂಡ ದಂಡ ವಸೂಲಿ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತ ಕಮಲ್ ಪಂಥ್ ಸುತ್ತೋಲೆ ಹೊರಡಿಸಿ, ಆದೇಶಿಸಿದ್ದಾರೆ. ಹೀಗಾಗಿ, ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸಲು ಮರೆಯದಿರಿ!
Published by: Sushma Chakre
First published: October 7, 2020, 10:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories