ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್ಸ್: ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ

ವಿಧಾನಸೌದ ಒಂದು ದೇವಸ್ಥಾನ ಇದ್ದಂತೆ, ಇಂತಹ ಪ್ರಕ್ರಿಯೆಗಳು 2008ರಲ್ಲಿ ನಡೆದಿತ್ತು ಈಗ ಮತ್ತೆ ನಡೆಯುತ್ತಿದೆ. ಈ ಉಪಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೂ ಹೆಚ್ಚು ಸೀಟ್ ಗಳು ಬರುವುದಿಲ್ಲ

G Hareeshkumar | news18-kannada
Updated:December 3, 2019, 6:31 PM IST
ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್ಸ್: ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ
  • Share this:
ಧಾರವಾಡ(ಡಿ.03): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವನ್ನು ತಡೆಗಟ್ಟಬೇಕಾದರೇ  15 ಜನ ಅನರ್ಹರನ್ನು ಸೋಲಿಸಬೇಕು. ಉಪಚುನಾವಣೆ ಬಳಿಕ ನಾವೇ ಕಿಂಗ್ ಮೇಕರ್ಸ್. ಮೈತ್ರಿ ಸರ್ಕಾರ ರಚನೆ ವಿಚಾರದ ಬಗ್ಗೆ ಡಿ. 9ರ  ನಂತರ ವಿಚಾರ ಮಾಡುತ್ತೇವೆ ಎಂದು ಸರ್ಕಾರ ರಚನೆ ಬಗ್ಗೆ ಮಾಜಿ ಶಾಸಕ ಎನ್​​ ಎಚ್​ ಕೋನರೆಡ್ಡಿ ಭವಿಷ್ಯ ನುಡಿದಿದ್ದಾರೆ. 

ವಿಧಾನಸೌದ ಒಂದು ದೇವಸ್ಥಾನ ಇದ್ದಂತೆ, ಇಂತಹ ಪ್ರಕ್ರಿಯೆಗಳು 2008ರಲ್ಲಿ ನಡೆದಿತ್ತು ಈಗ ಮತ್ತೆ ನಡೆಯುತ್ತಿದೆ. ಈ ಉಪಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೂ ಹೆಚ್ಚು ಸೀಟ್ ಗಳು ಬರುವುದಿಲ್ಲ. ಡಿಸೆಂಬರ್​ 9 ರಂದು ಒಳ್ಳೆಯ ದಿನ, ಅವತ್ತು ಜೆಡಿಎಸ್ ಪಕ್ಷ ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡರು ಮತ್ತು ಕುಮಾರಸ್ವಾಮಿ ಹೇಳಿದ್ದಾರೆ ಎಂದರು.

ನಮ್ಮ ಪಕ್ಷದ ಬಗ್ಗೆ ಹಲವು ಜನ ಮುಖಂಡರು ಟೀಕೆಗಳನ್ನು ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪತ್ರಿಕ್ರಿಯೆ ನೀಡಿದ ಅವರು, ಮೊದಲ ನಿಮ್ಮ ಪರಿಸ್ಥಿತಿಗಳನ್ನು ನೋಡಿ, ವಿಜಯಪುರ ಜಿಲ್ಲೆಯಲ್ಲಿ ಒಬ್ಬರನ್ನು ಮಂತ್ರಿ ಮಾಡಲಿಲ್ಲ, ಯತ್ನಾಳ, ನಡಹಳ್ಳಿ ಅವರನ್ನು ಏಕೆ ಮಂತ್ರಿ ಮಾಡಲಿಲ್ಲ. ಮೊದಲು ಅವರ ಮನೆ ಶುದ್ಧ ಮಾಡಿಕೊಳ್ಳಿ ನಂತರ ನಮ್ಮ ಬಗ್ಗೆ ಮಾತನಾಡಲಿ. ಇಂದಿನ ರಾಜಕೀಯದ ಟೀಕೆ ಟಿಪ್ಪಣಿಗಳನ್ನು ಯಾವತ್ತು ನೋಡಿಲ್ಲ, ವೈಯಕ್ತಿಕ ಟೀಕೆ ಮಾಡುವುದು ಶೋಭೆ ಅಲ್ಲ ಎಂದು ತಿರುಗೇಟು ನೀಡಿದರು.

ಸಚಿವ ಈಶ್ವರಪ್ಪನವರು ಮಾತನಾಡುತ್ತಾರೆ ಅದು ಯಾವ ಮಟ್ಟಕ್ಕೆ ಎನ್ನುವುದು ಇವತ್ತಿಗೂ ಗೊತ್ತಾಗಿಲ್ಲ. ಏನೇ ಆದರೂ ನೂರಕ್ಕೆ ನೂರರಷ್ಟು ನಾವೇ ಕಿಂಗ್ ಮೇಕರ್ ಆಗುತ್ತೇವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ್ರೆ ಮುಖ್ಯಮಂತ್ರಿ ಸ್ಥಾನ ಯಾರಿಗೆ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತಿರ್ಮಾನ ಮಾಡುತ್ತೆ ಎಂದು ಹೇಳಿದರು.

ಇದನ್ನೂ ಓದಿ : ಚುನಾವಣೆ ನಂತರ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಸತ್ಯ ಬಿಚ್ಚಿಡುತ್ತೇನೆ: ಡಾ. ಸುಧಾಕರ್

ನಾನು ಯಾರಿಗೆ ಕೊಟ್ಟರು ಬೇಡ ಎನ್ನಲ್ಲ, ಆದರೆ, ನಮ್ಮ ಪಕ್ಷಕ್ಕೆ ಸಿಎಂ ಸ್ಥಾನ ನೀಡಿದ್ರೆ ಒಳ್ಳೆದು ಎನ್ನುವನು ನಾನು. ಹೆಚ್ ವಿಶ್ವನಾಥ್​​ ಅವರು ಹಿರಿಯರು ಅವರು ಪಕ್ಷ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿದರು.

First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ