Chitradurga: ಬರೋಬ್ಬರಿ 53 ವರ್ಷಗಳ ಬಳಿಕ ತುಂಬಿದ ಕೆರೆ.. ತೆಪ್ಪೋತ್ಸವ ಸಂಭ್ರಮ

ಕಳೆದ 1968ರಲ್ಲಿ ಗ್ರಾಮದ ಈ ಕೆರೆ ತುಂಬಿ ಹರಿದು ತೆಪ್ಪೋತ್ಸವ ನಡೆದಿತ್ತು ಎಂಬುದು ನೆನಪು. ಆದರೇ ಅದು ಬಿಟ್ಟರೆ 53 ವರ್ಷಗಳ ಬಳಿಕ ಈಗ ಮಳೆ ಸಮೃದ್ದಿಯಾಗಿ ಬಂದಿದ್ದು ಮತ್ತೆ ಗ್ರಾಮದಲ್ಲಿ ತೆಪ್ಪೋತ್ಸವ ನಡೆಸಲಾಗಿದೆ.

ತೆಪ್ಪೋತ್ಸವ ಸಂಭ್ರಮ

ತೆಪ್ಪೋತ್ಸವ ಸಂಭ್ರಮ

  • Share this:
ಚಿತ್ರದುರ್ಗ : ಸತತ ಬರದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಜಿಲ್ಲೆಯ ಕೆರೆಗಳಿಗೆ (Lakes) ಈ  ಸಲ ಸಮೃದ್ದಿ ಮಳೆಯಿಂದ (Rain) ತುಂಬಿ ತುಳುಕುತ್ತಿವೆ. ದಶಕಗಳ ಕಾಲ ಬತ್ತಿ ಬರಿದಾಗಿದ್ದ ಕೆರೆಗಳು ತುಂಬಿ ಜಿಲ್ಲೆಯ ಜನರ ಮನ ಸೂರೆಗೊಳಿಸಿವೆ. ಹಲವು ವರ್ಷಗಳ ಬಳಿಕ ಜನರು ಸಂತಸಗೊಂಡು ಕೆರೆಗಳಲ್ಲಿ ಊರ ದೇವರ ಕೂರಿಸಿ ತೆಪ್ಪೋತ್ಸವ (Thepotsava) ಮಾಡಿದ್ದಾರೆ.  ಚಳ್ಳಕೆರೆ ತಾಲೂಕಿನಲ್ಲಿ (Challakere Taluk) ಕಳೆದ ಹತ್ತಾರು ವರ್ಷಗಳಿಂದ ಮಳೆ ಇಲ್ಲದೆ ಬತ್ತಿ ಬರಿದಾಗಿ ಸೊರಗಿದ್ದ ಕೆರೆಗಳಿಗೆ ಈಗ ಜೀವ ಕಳೆ ಬಂದಿದೆ. ಬರಿ ಬಿಸಿಲು ಬರವನ್ನೇ ಕಂಡಿದ್ದ ತಾಲ್ಲೂಕಿನ ಜನರು, ಜಾನುವಾರುಗಳು ಸಾಕಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಅನ್ನೋ ಭರವಸೆ ಮೂಡಿದೆ. ಈ ಎಲ್ಲಾ ಬೆಳವಣಿಗೆಗೆ  ಸಾಕ್ಷಿ ಎಂಬಂತೆ ತಾಲ್ಲೂಕಿನ ನಗರಂಗೆರೆ ಕೆರೆ ಸುಮಾರು 53  ವರ್ಷಗಳ ನಂತರ ತುಂಬಿ ತುಳುಕಿದೆ. ಆದ್ದರಿಂದಲೇ ಈಗ ತೆಪ್ಪೋತ್ಸವ  ಮಾಡಿದ್ದಾರೆ.

 53 ವರ್ಷಗಳ ಬಳಿಕ ತೆಪ್ಪೋತ್ಸವ

ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ತೆಪ್ಪೋತ್ಸವ ಮಾಡಿದ್ದು, ಗ್ರಾಮದ ಜನರಿಗೆ ಹೆಚ್ಚು ಸಂತೋಷ ಮನೆ ಮಾಡುವಂತೆ ಮಾಡಿತ್ತು. ಕಳೆದ 1968ರಲ್ಲಿ ಗ್ರಾಮದ ಈ ಕೆರೆ ತುಂಬಿ ಹರಿದು ತೆಪ್ಪೋತ್ಸವ ನಡೆದಿತ್ತು ಎಂಬುದು ನೆನಪು. ಆದರೇ ಅದು ಬಿಟ್ಟರೆ 53 ವರ್ಷಗಳ ಬಳಿಕ ಈಗ ಮಳೆ ಸಮೃದ್ದಿಯಾಗಿ ಬಂದಿದ್ದು ಮತ್ತೆ ಗ್ರಾಮದಲ್ಲಿ ತೆಪ್ಪೋತ್ಸವ ನಡೆಸಲಾಗಿದೆ. ಆಶ್ಚರ್ಯ ಅಂದ್ರೆ ಕಳೆದ 1970-80ರ ದಶಕದಲ್ಲಿ ನಗರಂಗೆರೆ ಗ್ರಾಮದ ಸುತ್ತ ಮುತ್ತಲ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ತೋಟಗಳಿದ್ದು, ಇದು ತಾಲ್ಲೂಕಿಗೆ ಹೆಸರುವಾಸಿ ಎನ್ನಲಾಗಿದೆ.

 ತೆಪ್ಪೋತ್ಸವಕ್ಕೆ ಸಾಕ್ಷಿಯಾದ ನೂರಾರು ಹಳ್ಳಿಗಳ ಜನ

ಕಳೆದ 90ರ ದಶಕದಲ್ಲಿ ಮಳೆ ಪ್ರಮಾಣ ಕಡಿಮೆಯಾದಂತೆ ತೋಟಗಳು ಸಹ ಒಣಗತೊಡಗಿದ್ದು, ಪ್ರಸ್ತುತ 2021ರ ಮಳೆ ಮತ್ತೆ ಹೊಸ ಭರವಸೆ ಹುಟ್ಟು ಹಾಕಿದೆ. ಆದ್ದರಿಂದಲೇ  53 ವರ್ಷಗಳ ಬಳಕ ಕೆರೆ ತುಂಬಿದ ಕಾರಣ ಗ್ರಾಮಸ್ಥರು ಅದ್ದೂರಿಯಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಸಿದರು. ತೆಪ್ಪೋತ್ಸವದಲ್ಲಿ ಆಂದ್ರದ ಭಕ್ತರು ಸೇರಿದಂತೆತಾಲ್ಲೂಕಿನ ನೂರಾರು ಹಳ್ಳಿಗಳ ಜನರು ತೆಪ್ಪೋತ್ಸವಕ್ಕೆ ಸಾಕ್ಷಿಯಾದರು. ಕೋಡಿಮಲ್ಲೇಶ್ವರ ದೇವಸ್ಥಾನದಿಂದ  ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸುಮಾರು ಒಂದು ಕಿ.ಮೀಟರ್ ದೂರ ದೇವರ ಮೂರ್ತಿಯನ್ನ ಮೆರವಣೆಗೆ ಮಾಡುತ್ತಾ, ಸಾವಿರಾರು ಭಕ್ತರು ಜೈಕಾರ ಕೂಗಿ ಕೆರೆಯಂಗಳಕ್ಕೆ ತಂದು ಪಟ್ಟಕ್ಕೆ ಕೂರಿಸಿದ್ದರು. ಬಳಿಕ ತೆಪ್ಪಕ್ಕೆ ಎಲ್ಲಾ ರೀತಿಯ ಪೂಜಾ  ಸಮರ್ಪಿಸಿದ್ರು.

ಇದನ್ನೂ ಓದಿ: Mysore Palace: ಇಂದಿನಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಪುನೀತ್ ಹಾಗೂ ಬಿಪಿನ್ ರಾವತ್​​ಗೆ ಪುಷ್ಪ ನಮನ

ಸುಮಾರು ನಾಲ್ಕೈದು ತಾಸುಗಳ ನಂತರ ಕೆರೆಯ ಏರಿಯ ಮೇಲಿನ ದೇವಸ್ಥಾನಕ್ಕೆ ತೆರಳಿದ ತೆಪ್ಪ ಅಲ್ಲಿ ನೂರಾರು ಭಕ್ತರು ಪೂಜೆ ಸಲ್ಲಿಸಿದ ನಂತರ ಮತ್ತೆ ಸ್ವಸ್ಥಾನಕ್ಕೆ ಬಂದು ಸೇರಿತು. ಇನ್ನೂ ತೆಪ್ಪೋತ್ಸವದ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮದ ಲಕ್ಷ್ಮಿ ಲಾರಿ ಟ್ರಾನ್ಸ್ ಫೊರ್ಟ್ ಮಾಲೀಕ ಅನಿಲ್ ರವರು 23001 ರೂಗೆ ಹರಾಜಿನಲ್ಲಿ ಪಡೆದರು. ಇನ್ನೂ ತೆಪ್ಪೋತ್ಸವದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭಾಗವಹಿಸಿ ಪೂಜೆ ಸಲ್ಲಿಸಿದ್ರು.

ಇನ್ನು ದಕ್ಷಿಣ ಭಾರತದ ಮಹಾ ಕುಂಭ ಮೇಳ ಎಂಬ ಖ್ಯಾತಿ ಹೊಂದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯೂ  ಈ ಬಾರಿ ನಡೆಯುತ್ತದೆಯೋ ಇಲ್ಲವೊ ಎಂಬ ಗೊಂದಲ ಈ ಬಾರಿ ಗೊಂದಲ ಮುಂದುವರಿದಿದೆ.  ಈ ಬಾರಿ ಓಮೈಕ್ರಾನ್ಭೀ ತಿ ಆವರಿಸಿದೆ, ಇಷ್ಟರಲ್ಲಿಯೇ ಮಠದಿಂದ ಸ್ಪಷ್ಠ ನಿರ್ಧಾರವಾಗಲಿದೆ. ದಕ್ಷಿಣ ಭಾರತದ ಕುಂಭಮೇಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಕೊಪ್ಪಳದ ಗವಿಮಠದ ಶ್ರೀಗವಿಸಿದ್ದೇಶ್ವರ ಜಾತ್ರೆಯನ್ನು  ಕಳೆದ ವರ್ಷ ಕೂಡ ಕೋವಿಡ್​ನಿಂದಾಗಿ ಸರಳವಾಗಿ ಜಾತ್ರೆ ಮಾಡಲಾಗಿತ್ತು. ಕೆಲವೇ ಕೆಲವು ಭಕ್ತರ ಸಮ್ಮುಖದಲ್ಲಿ ಬೆಳಗಿನ ವೇಳೆ ರಥೋತ್ಸವ ಜರುಗಿಸಲಾಗಿತ್ತು, ಈ ವರ್ಷ ಕೋವಿಡ್ ಸಂಖ್ಯೆ ಇಳಿಮುಖವಾಗಿದ್ದು ಅದ್ದೂರಿ ಜಾತ್ರೆ ನಡೆಸಬಹುದು ಎಂದುಕೊಂಡಿದ್ದ ಭಕ್ತರಿಗೆ ನಿರಾಸೆಯಾಗುವ ಲಕ್ಷಣವಿದೆ.
Published by:Kavya V
First published: