• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar ED Case: ಡಿಕೆಶಿ ದೆಹಲಿ ಫ್ಲ್ಯಾಟ್​ನಲ್ಲಿ ಸಿಕ್ಕಿರುವ 8.5 ಕೋಟಿ ರೂ, ಇಂದು ವಿಚಾರಣೆ

DK Shivakumar ED Case: ಡಿಕೆಶಿ ದೆಹಲಿ ಫ್ಲ್ಯಾಟ್​ನಲ್ಲಿ ಸಿಕ್ಕಿರುವ 8.5 ಕೋಟಿ ರೂ, ಇಂದು ವಿಚಾರಣೆ

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

ಇಂದು ಡಿ.ಕೆ‌. ಶಿವಕುಮಾರ್ ಪರ ವಕೀಲರು ದೆಹಲಿ ಪ್ಲ್ಯಾಟ್ ನಲ್ಲಿ ಸಿಕ್ಕಿರುವ 8.5 ಕೋಟಿ ರೂಪಾಯಿ ಹಣದ ಬಗ್ಗೆ ವಿವರಣೆ ನೀಡಬೇಕಾಗುತ್ತದೆ. ದಾಖಲೆಗಳನ್ನು ಒದಗಿಸಬೇಕಾಗುತ್ತದೆ‌. ಹಾಗಾಗಿ ಇಂದಿನ ವಿಚಾರಣೆ ಡಿ.ಕೆ. ಶಿವಕುಮಾರ್ ಪಾಲಿಗೆ  ನಿರ್ಣಾಯಕವಾದುದಾಗಿದೆ‌.

  • Share this:

ನವದೆಹಲಿ(ಮೇ 31): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ (Enforcement Directorate Special Court) ವಿಚಾರಣೆ ನಡೆಸಲಿದೆ. ನ್ಯಾಯಾಧೀಶ ವಿಕಾಸ್ ದುಲ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ಇಂದು ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ ಆದಾಯ ತೆರಿಗೆ ಇಲಾಖೆ (Income Tax Department) ದಾಳಿ ವೇಳೆ ಸಿಕ್ಕಿದೆ ಎನ್ನಲಾದ 8.5 ಕೋಟಿ ರೂಪಾಯಿ ಹಣದ ಬಗ್ಗೆ ವಿಚಾರಣೆ ನಡೆಯಲಿದೆ‌.


ವ್ಯಾಪ್ತಿ ಪರಿಶೀಲಿಸಿದ ಕೋರ್ಟ್


ಕಳೆದ ವಾರ ಡಿ.ಕೆ. ಶಿವಕುಮಾರ್ ಅವರ ಅಕ್ರಮವಾಗಿ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ವಿಚಾರಣೆ ಕೈಗೆತ್ತಿಕೊಂಡ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್ ದುಲ್ ನೇತೃತ್ವದ ಏಕಸದಸ್ಯ ಪೀಠದ ಎದುರು ಇಡಿ ವಕೀಲರು ಭಾರತೀಯ ದಂಡ ಸಂಹಿತೆ ಸೆಕ್ಷನ್ 120B ಕಾಯಿದೆ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತದೆ.


ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಜೊತೆಗೆ 120B ಸೆಕ್ಷನ್ ಸೇರ್ಪಡೆಯಾಗಿದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಪೂರಕವಾಗಿ ಇದೇ ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪಾಲುದಾರ ಸಚಿನ್ ನಾರಯಣ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಸೇರಿದಂತೆ ಮೂರು ವಿವಿಧ ಹೈಕೋರ್ಟಗಳು ನೀಡಿದ್ದ ಆದೇಶಗಳನ್ನು ಉಲ್ಲೇಖಿಸಿದ್ದರು‌.


ಹಾಗಾಗಿ ಪ್ರಕರಣ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ಮನವರಿಕೆಯಾದ ನ್ಯಾಯಾಲಯ ಮೇ 31ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದೆ.


ಡಿಕೆಶಿ ಪಾಲಿಗೆ ‌ನಿರ್ಣಾಯಕ


ಇಂದಿನ ವಿಚಾರಣೆಯಲ್ಲಿ ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಸಿಕ್ಕಿದೆ ಎನ್ನಲಾದ 8.5 ಕೋಟಿ ರೂಪಾಯಿ ಹಣದ ಮೂಲ ಮತ್ತು ವರ್ಗಾವಣೆ ಬಗ್ಗೆ ವಿಚಾರಣೆ ನಡೆಯಲಿದೆ‌.


ಹಣದ ಬಗ್ಗೆ ವಿವರಗಳನ್ನು ಕೊಡಲೇಬೇಕು ಡಿಕೆಶಿ


ಇಂದು ಡಿ.ಕೆ‌. ಶಿವಕುಮಾರ್ ಪರ ವಕೀಲರು ದೆಹಲಿ ಪ್ಲ್ಯಾಟ್ ನಲ್ಲಿ ಸಿಕ್ಕಿರುವ 8.5 ಕೋಟಿ ರೂಪಾಯಿ ಹಣದ ಬಗ್ಗೆ ವಿವರಣೆ ನೀಡಬೇಕಾಗುತ್ತದೆ ಮತ್ತು ದಾಖಲೆಗಳನ್ನು ಒದಗಿಸಬೇಕಾಗುತ್ತದೆ‌. ಹಾಗಾಗಿ ಇಂದಿನ ವಿಚಾರಣೆ ಡಿ.ಕೆ. ಶಿವಕುಮಾರ್ ಪಾಲಿಗೆ  ನಿರ್ಣಾಯಕವಾದುದಾಗಿದೆ‌.


ಪ್ರಕರಣದ ಏನು?


ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ತೆರಿಗೆ ವಂಚನೆ ಮತ್ತು ಹವಾಲಾ ವ್ಯವಹಾರದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿ ಆಧರಿಸಿ ಇಡಿ ಅಧಿಕಾರಿಗಳು 2018ರಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.


ಇದನ್ನೂ ಓದಿ: ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar


ನಂತರ 2019ರ ಸೆಪ್ಟೆಂಬರ್‌ 3ರಂದು ಇಡಿ ಅಧಿಕಾರಿಗಳು ಡಿ.ಕೆ‌. ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ಡಿ.ಕೆ‌. ಶಿವಕುಮಾರ್ 45 ದಿನಗಳ ಕಾಲ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇರಬೇಕಾಯಿತು. ಬಳಿಕ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.


ಆರೋಪ ಏನು?


ಡಿ.ಕೆ. ಶಿವಕುಮಾರ್ 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆ. ಕುಟುಂಬದ ಸದಸ್ಯರ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಷ್ಟು ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ. 20ಕ್ಕೂ ಹೆಚ್ಚು ಬ್ಯಾಂಕ್‌ಗಳಲ್ಲಿ 317 ಖಾತೆಗಳು ಪತ್ತೆಯಾಗಿವೆ. ಅವರ ಪುತ್ರಿ ಐಶ್ವರ್ಯ ಹೆಸರಿನಲ್ಲಿ 108 ಕೋಟಿ ರೂಪಾಯಿಯಷ್ಟು ಅಕ್ರಮ ಹಣ ವರ್ಗಾವಣೆ ಆಗಿದೆ. ಐಶ್ವರ್ಯ 48 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ.


ಆದರೆ ಸಾಲದ ಮೂಲವನ್ನು ಬಹಿರಂಗಪಡಿಸಿಲ್ಲ. ನೋಟು ಅಮಾನ್ಯೀಕರಣ ಆಗಿದ್ದ ವೇಳೆ ಡಿ‌.ಕೆ. ಶಿವಕುಮಾರ್ ಒಡೆತನದ ದೆಹಲಿಯ ಫ್ಲ್ಯಾಟ್ ನಲ್ಲಿ 8.59 ಕೋಟಿ ರೂಪಾಯಿ ಹಣ ಸಿಕ್ಕಿದೆ. ಡಿ.ಕೆ. ಶಿವಕುಮಾರ್‌ ಸಹೋದರ, ಸಂಸದ ಡಿ.ಕೆ. ಸುರೇಶ್ ಹೆಸರಲ್ಲಿ 27 ಮತ್ತು ತಾಯಿಯ ಹೆಸರಲ್ಲಿ 38 ಆಸ್ತಿಗಳು ಸೇರಿದಂತೆ ಒಟ್ಟು 300ಕ್ಕೂ ಹೆಚ್ಚು ಸ್ಥಿರಾಸ್ತಿಗಳಿವೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು