ಸುಮಾರು ಎರಡೂವರೆ ವರ್ಷಗಳಿಂದ ಅಂತ ಹೇಳಿದರೆ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ಸುಮಾರು ಒಂದು ವರ್ಷದ ತನಕ ಈ ಶಾಲೆ ಕಾಲೇಜುಗಳಿಗೆ (School and Colleges) ಬೀಗ ಹಾಕಿ ಬಂದ್ ಮಾಡಲಾಗಿತ್ತು ಅಂತ ನಮಗೆಲ್ಲಾ ಗೊತ್ತೇ ಇದೆ. ಕೋವಿಡ್-19 ರೋಗದ ಎರಡನೇ ಅಲೆ (Covid 2nd Wave) ಮುಕ್ತಾಯದ ಸಮಯದಲ್ಲಿ ಶಾಲೆ ಮತ್ತು ಕಾಲೇಜುಗಳು (Schools Reopening) ನಿಧಾನವಾಗಿ ಹಂತ-ಹಂತವಾಗಿ ಶುರುವಾದವು. ಈ ವರ್ಷದ ಜನವರಿಯಿಂದ ಶಾಲೆ ಮತ್ತು ಕಾಲೇಜುಗಳು ಸರಿಯಾಗಿ ನಡೆಯುವುದಕ್ಕೆ ಶುರುವಾದವು ಅಂತ ಹೇಳಬಹುದು.
ಹೌದು, ಈ ಕೋವಿಡ್-19 ರೋಗದ ಸಮಯದಲ್ಲಿ ಅನೇಕ ಬಾರಿ ಲಾಕ್ಡೌನ್ ಗಳನ್ನು ಮತ್ತು ನಿರ್ಬಂಧಗಳನ್ನು ಹೇರಲಾಗಿದ್ದು, ಆಗ ಆ ಎರಡು ವರ್ಷಗಳು ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶೈಕ್ಷಣಿಕ ಪ್ರವಾಸಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ ಅಂತನೇ ಹೇಳಬಹುದು.
ಆದರೆ ಈಗ ಎರಡೂವರೆ ವರ್ಷಗಳ ನಂತರ ಮತ್ತೆ ಶಾಲೆ ಕಾಲೇಜುಗಳಲ್ಲಿ, ಅದರಲ್ಲೂ ಈ ಉತ್ತರ ಕರ್ನಾಟಕದ ಭಾಗದಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಇದನ್ನೂ ಓದಿ: School Bus Problem: ವಿದ್ಯಾರ್ಥಿಗಳು ಶಾಲೆಗೆ ಹೋಗೋಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಸರ್ಕಾರದ ವಿರುದ್ಧ ಸಿದ್ದು ಗುಡುಗು!
ಮತ್ತೆ ಶುರುವಾಗಿವೆ ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸಗಳು
ಈ ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮತ್ತು ಕಾಲೇಜು ಶಿಕ್ಷಣದ ಅವಿಭಾಜ್ಯ ಅಂಗವಾಗಿರುತ್ತದೆ ಅಂತ ಹೇಳಬಹುದು. ಇದರ ಬಗ್ಗೆ ಕೇಳಿದಾಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ಮುಖ್ಯ ಸಂಚಾರ ವ್ಯವಸ್ಥಾಪಕರಾದ ರಾಜೇಶ್ ಹುದ್ದಾರ್ ಅವರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿ “ಕಳೆದ ಎರಡು ವರ್ಷಗಳಲ್ಲಿ ಶಾಲಾ ಪ್ರವಾಸಗಳಿಗೆ ಯಾವುದೇ ಬಸ್ ಗಳನ್ನು ಬುಕ್ ಮಾಡಿರಲಿಲ್ಲ. ಈ ವರ್ಷ ಶಾಲಾ ಪ್ರವಾಸಗಳಿಗಾಗಿ ಕ್ಯಾಶುವಲ್ ಕಾಂಟ್ರಾಕ್ಟ್ ಬಸ್ ಗಳ ಬೇಡಿಕೆಯನ್ನು ನಾವು ಪಡೆಯುತ್ತಿದ್ದೇವೆ. ವಿಶೇಷವಾಗಿ, ಎನ್ಡಬ್ಲ್ಯೂಕೆಆರ್ಟಿಸಿಯ ಎಲ್ಲಾ 9 ವಿಭಾಗಗಳಲ್ಲಿ ಡಿಸೆಂಬರ್ ನಲ್ಲಿ ಬುಕಿಂಗ್ ಗಳು ಉತ್ತುಂಗದಲ್ಲಿವೆ" ಎಂದು ಅವರು ಹೇಳಿದರು.
ಡಿವಿಇಎ ಟ್ರಸ್ಟ್ ನ ಚೇತನ್ ಪಬ್ಲಿಕ್ ಸ್ಕೂಲ್ ನ ಜಿ.ವಿ.ವಳಸಂಗ್ ಮಾತನಾಡಿ “ಈ ಬಾರಿ ಪ್ರೌಢಶಾಲಾ ವಿಭಾಗದ 179 ವಿದ್ಯಾರ್ಥಿಗಳು ಮೈಸೂರು ಮತ್ತು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಕ್ರಿಯೆಯಿಂದ ನಾವು ತುಂಬಾನೇ ಸಂತೋಷವಾಗಿದ್ದೇವೆ. ಅವರ ಪ್ರತಿಕ್ರಿಯೆಯನ್ನು ನೋಡಿ, ಮುಂದಿನ ವರ್ಷ ನಾವು ವಿದ್ಯಾರ್ಥಿಗಳನ್ನು ಇತರ ಕೆಲವು ರಾಜ್ಯಗಳು ಅಥವಾ ದೇಶಗಳಿಗೆ ಕರೆದೊಯ್ಯಲು ಯೋಚಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಏನ್ ಹೇಳ್ತಾರೆ ನೋಡಿ ಟೂರ್ ಅಪರೇಟರ್ಗಳು?
ಹುಬ್ಬಳ್ಳಿಯ ಶಾಲಾ ಟೂರ್ ಆಪರೇಟರ್ ಟಿ.ಎಸ್.ಪಾಟೀಲ್ ಅವರು “ಶಿಕ್ಷಣ ಇಲಾಖೆ ತಡವಾಗಿ ಶೈಕ್ಷಣಿಕ ಪ್ರವಾಸಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ನವೆಂಬರ್ ನಲ್ಲಿ ಈ ಆದೇಶವನ್ನು ಹೊರಡಿಸಿದ್ದರಿಂದ, ಅನೇಕ ಶಾಲೆಗಳು ವಾರಗಟ್ಟಲೆ ಪ್ರವಾಸ ಮಾಡಲು ಸಾಧ್ಯವಾಗಲಿಲ್ಲ. ಅವರು ಪ್ರವಾಸಗಳನ್ನು ಕೇವಲ 2-3 ದಿನಗಳಿಗೆ ಸೀಮಿತಗೊಳಿಸಬೇಕಾಗಿತ್ತು. ಸರ್ಕಾರ ಮೊದಲೇ ಆದೇಶ ಹೊರಡಿಸಿದ್ದರೆ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚು ಕಾಲ ಪ್ರವಾಸ ಮಾಡಬಹುದಿತ್ತು” ಎಂದು ಹೇಳಿದರು.
“ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯ ಹೆಚ್ಚಿನ ಶಾಲೆಗಳು ಈ ಬಾರಿ ಪ್ರವಾಸಕ್ಕೆ ಅಂತ ಮೈಸೂರಿಗೆ ಮಕ್ಕಳನ್ನು ಕರೆದೊಯ್ಯಲು ಹೆಚ್ಚಿನ ಆದ್ಯತೆ ನೀಡಿವೆ. ನಂತರದ ಸ್ಥಾನದಲ್ಲಿ ಕೊಡಗು ಇದೆ. ಕೋವಿಡ್ ನಂತರದ ಬಜೆಟ್ ನಿರ್ಬಂಧಗಳನ್ನು ನೋಡಿ, ನಾವು ಈ ಬಾರಿ ತ್ರೀ-ಸ್ಟಾರ್ ಬದಲು ಟೂ ಸ್ಟಾರ್ ಹೋಟೆಲ್ ಗಳ ಸೇವೆಗಳನ್ನು ನೀಡಿದ್ದೇವೆ. ಮತ್ತೊಂದೆಡೆ, ಹೋಟೆಲ್ ಉದ್ಯಮವು ಸಹ ಸಹಕಾರಿಯಾಗಿದೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಈ ವರ್ಷ ಫೆಬ್ರವರಿ-ಮಾರ್ಚ್ ನಲ್ಲಿ ಕಾಲೇಜು ಪ್ರವಾಸಗಳು ಸಹ ಹೆಚ್ಚಾಗುತ್ತವೆ ಎಂದು ನಾವು ಆಶಿಸುತ್ತೇವೆ" ಎಂದು ಅವರು ಹೇಳಿದರು.
ಧಾರವಾಡ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು “ಡಿಸೆಂಬರ್ 31ರೊಳಗೆ ಶೈಕ್ಷಣಿಕ ಪ್ರವಾಸ ಮುಗಿಸಬೇಕು. ಸಂಖ್ಯೆಗಳನ್ನು ನೋಡಿದರೆ ಶೈಕ್ಷಣಿಕ ಪ್ರವಾಸಗಳು ಇನ್ನೂ ಕೋವಿಡ್ ಪೂರ್ವದ ದಿನಗಳ ಉತ್ತುಂಗವನ್ನು ತಲುಪಿಲ್ಲ. ಅನೇಕ ಪೋಷಕರು ಇನ್ನೂ ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಆರ್ಥಿಕ ಪರಿಸ್ಥಿತಿ ಮತ್ತೊಂದು ಕಾರಣವಾಗಿರಬಹುದು" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ