Crime: ಕಡೆಗೂ ಸಿಕ್ಕಿದ ಕೊಲೆ ಆರೋಪಿ; 17ವರ್ಷದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಚಿಕ್ಕಮಗಳೂರು ಪೊಲೀಸರು

1997 ಕುದುರೆಮುಖ ಅದಿರು ಕಂಪನಿಯ ಕ್ಯಾಂಟೀನ್​ನಲ್ಲಿ ಊಟದ ವಿಚಾರಕ್ಕೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಚುಚ್ಚಿದ್ದರು. ಪ್ರಕರಣ ಸಂಬಂಧ ಕುದುರೆಮುಖ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು.

ಕೊಲೆ ಆರೋಪಿ

ಕೊಲೆ ಆರೋಪಿ

  • Share this:
ಚಿಕ್ಕಮಗಳೂರು (ಏ. 17) : 1997ರಲ್ಲಿ ಕ್ಷಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದ್ದ ಪ್ರಕರಣ ಸಂಬಂಧ 17 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಚಿಕ್ಕಮಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. 1997 ಕುದುರೆಮುಖ ಅದಿರು ಕಂಪನಿ ಉತ್ತುಂಗದಲ್ಲಿದ್ದ ಸಮಯದಲ್ಲಿ ಸಂಸ್ಥೆ ಕ್ಯಾಂಟೀನ್​ನಲ್ಲಿ ಊಟದ ವಿಚಾರಕ್ಕೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಚುಚ್ಚಿದ್ದರು. ಪ್ರಕರಣ ಸಂಬಂಧ ಕುದುರೆಮುಖ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ನಾಲ್ವರು ಮೇಲೆ ಎಫ್‍ಐಆರ್ ಆಗಿತ್ತು. 1997ರಲ್ಲಿ ಗಲಾಟೆಯಾದರೂ 2004ರವೆಗೂ ಕೇಸ್ ನಡೀತಿತ್ತು. ಗ್ಯಾಂಗ್ ಲೀಡರ್ ಅಲೆಕ್ಸಾಂಡರ್ 2004ರಲ್ಲಿ ಕುದುರೆಮುಖದಿಂದ ಕಣ್ಮರೆಯಾಗಿದ್ದ. ಬಳಿಕ ಕುದುರೆಮುಖ ಕಂಪನಿ ಕೂಡ ನಷ್ಟದಿಂದ ಮುಚ್ಚಿ ಹೋಯ್ತು. ಆದರೂ ಪೊಲೀಸರು ಆರೋಪಿಗಾಗಿ ಹುಡುಕುತ್ತಿದ್ದರು. ಎಲ್ಲಿಲ್ಲಿ ಹುಡುಕಾಡಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. 2004ರಿಂದ 2021 ಎಪ್ರಿಲ್‍ವರೆಗೂ ಆರೋಪಿ ಎಲ್ಲಿದ್ದಾನೆ ಅಂತಾನೇ ಗೊತ್ತಾಗಿರಲಿಲ್ಲ. 17 ವರ್ಷಗಳೇ ಕಳೆದು ಹೋದ್ವು. ಇನ್ನೇನು ನಾನು ಬಚಾವ್ ಅಂತ ಅಂದ್ಕೊಂಡಿದ್ದ ಆರೋಪಿಗೆ ಕಾಫಿನಾಡ ಪೊಲೀಸರು ಬಂಧಿಸಿ ಶಾಕ್ ನೀಡಿದ್ದಾರೆ.

ಕುದುರೆಮುಖ ಪೊಲೀಸ್ ಠಾಣೆಗೆ ಕಳೆದ ಜನವರಿಯಲ್ಲಿ ಕುಮಾರ್ ಎಂಬ ಸಬ್ ಇನ್ಸ್‍ಪೆಕ್ಟರ್ ಚಾರ್ಜ್ ತೆಗೆದುಕೊಂಡಿದ್ದರು. ಈ ಹಳೇ ಕೇಸಿನ ಹಿಂದೆ ಬಿದ್ದ ಅವರು, ತಮ್ಮ ಸ್ನೇಹಿತನ ಮೂಲಕ ಆರೋಪಿ ಕೇರಳದಲ್ಲಿ ಇರುವುದನ್ನು ಖಚಿತಪಡಿಸಿಕೊಂಡರು. ಬಳಿಕ ಆರೋಪಿ ಬಂಧನಕ್ಕೆ ಬಲೆ ಬೀಸಿ ಪೊಲೀಸ್ ಸಿಬ್ಬಂದಿಗಳಾದ ಸುರೇಶ್ ರಾವ್, ಯುವರಾಜ್, ಶ್ರೀಧರ್ ಎಂಬುವರನ್ನು ಕೇರಳಕ್ಕೆ ಕಳುಹಿಸಿ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಇಬ್ಬರಿಗೆ ಚಾಕು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 17 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಅಲೆಕ್ಸಾಂಡರ್ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನು ಓದಿ: ಬಸ್​ಚಾಲಕ ಸಾವು ಪ್ರಕರಣ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಕೊಲೆ ಮೊಕದ್ದಮೆ ದಾಖಲಿಸುವಂತೆ ದೂರು

17 ವರ್ಷಗಳ ಹಿಂದಿನ ಪ್ರಕರಣ ಸುಲಭವಾಗಿ ಜಾಮೀನು ಪಡೆಯಬಹುದು  ಎಂದು ಆರೋಪಿ ಅಲೆಕ್ಸಾಂಡರ್ ಕೂಡ ಭಾವಿಸಿದ್ದ. ಆದರೆ, ನ್ಯಾಯಾಲಯ 15 ದಿನಗಳ ಕಾಲ ಜೆಸಿಗೆ ಕೊಟ್ಟಿದೆ. ಗಲಾಟೆ ನಡೆದು 24 ವರ್ಷವಾಗಿತ್ತು. 17 ವರ್ಷದಿಂದ ಆರಾಮಾಗಿದ್ದ ಆರೋಪಿ ಈಗ ಜೈಲಲ್ಲಿ ಮುದ್ದೆ ಮುರಿಯುವಂತಾಗಿದೆ.

ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ಮೂವರು ಆರೋಪಿಗಳನ್ನ ಅಂದೇ ಕೈಬಿಡಲಾಗಿತ್ತು. ಕೇಸ್ ಕೂಡ ಖುಲಾಸೆಯಾಗಿತ್ತು. ಆದ್ರೆ ಕೋರ್ಟಿಗೆ ಹಾಜರಾಗದೇ ಖಾಕಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ ಅಸ್ಸಾಮಿ ಮಾತ್ರ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳದಿಂದ ಬಂದ ಆರೋಪಿ ಜೊತೆಗೆ ಲಾಯರ್ನ್ನು ಕರೆತಂದು ಜಾಮೀನಿಗೆ ಮನವಿ ಮಾಡಿದ್ದ. ಆದರೆ, ಇಷ್ಟು ವರ್ಷ ತಲೆಮರೆಸಿಕೊಂಡಿದ್ದ ಆಸಾಮಿಗೆ ಬೇಲ್ ನೀಡದ ನ್ಯಾಯಾಧೀಶರು ವಿಚಾರಣೆಯನ್ನ ಏಪ್ರಿಲ್ 30ಕ್ಕೆ ಮುಂದೂಡಿದ್ದಾರೆ. ಅದೇನೆ ಇದ್ದರೂ, 17 ವರ್ಷಗಳ ಬಳಿಕ ಆರೋಪಿ ಸೆರೆಯಾಗಿ ಉಪ್ಪು ತಿಂದವ ನೀರು ಕುಡಿಯಲೇಬೇಕು ಎನ್ನುವುದನ್ನು ಸಾಬೀತು ಮಾಡಿದ್ದಾನೆ.
Published by:Seema R
First published: