Karnataka Cabinet: 15 ವರ್ಷಗಳಲ್ಲೇ ಮೊದಲ ಬಾರಿಗೆ ಸಚಿವ ಸ್ಥಾನದಿಂದ ವಂಚಿತರಾದ ಜಾರಕಿಹೊಳಿ ಸಹೋದರರು​​

Karnataka Cabinet Expansion: ಈ ಮಧ್ಯೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಬೆಂಬಲಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಡೆಗೆ ಗರಂ ಆಗಿರುವ ಬೆಂಬಲಿಗರು, ನಮ್ಮ ಶಾಸಕರಿಗೆ ಸಚಿವ ಸ್ಥಾನ ಯಾಕೇ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Ganesh Nachikethu | news18
Updated:August 20, 2019, 3:34 PM IST
Karnataka Cabinet: 15 ವರ್ಷಗಳಲ್ಲೇ ಮೊದಲ ಬಾರಿಗೆ ಸಚಿವ ಸ್ಥಾನದಿಂದ ವಂಚಿತರಾದ ಜಾರಕಿಹೊಳಿ ಸಹೋದರರು​​
ಜಾರಕಿಹೊಳಿ ಸಹೋದರರು
  • News18
  • Last Updated: August 20, 2019, 3:34 PM IST
  • Share this:
ಬೆಂಗಳೂರು(ಆಗಸ್ಟ್​​.20): ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ. ಬಿಜೆಪಿ ಹೈಕಮಾಂಡ್​​ ಅಳೆದು ತೂಗಿ ಜಾತಿ, ಪ್ರಾಂತ್ಯ, ವರ್ಗದ ಆಧಾರದ ಮೇಲೆ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿಯೆಂದರೆ ಈ ಸಲ ಯಡಿಯೂರಪ್ಪನವರ ಆಪ್ತರಿಗೆ ಸಚಿವ ಸ್ಥಾನ ಸಿಗದೇ ಇರುವುದು. ಅಂತೆಯೇ ಪ್ರಮಾಣ ವಚನ ಸ್ವೀಕರಿಸಿದ 17 ಸಚಿವರ ಪೈಕಿ ಜಾರಕಿಹೊಳಿ ಕುಟುಂಬ ಇಲ್ಲದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.

ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬರಲಿ ಜಾರಕಿಹೊಳಿ ಕುಟುಂಬದ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕಳೆದ 15 ವರ್ಷಗಳಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಸಾಹುಕಾರ ರಮೇಶ್​​ ಜಾರಕಿಹೊಳಿ ಅಥವಾ ಸಹೋದರ ಬಾಲಚಂದ್ರ ಜಾರಕಿಹೊಳಿಗಾದರೂ ಮಂತ್ರಿ ಸ್ಥಾನ ನೀಡಬೇಕಿತ್ತು. ಮೂಲಗಳ ಪ್ರಕಾರ ಎರಡನೇ ಬಾರಿ ಸಂಪುಟ ವಿಸ್ತರಣೆ ಮಾಡುವಾಗ ಇಬ್ಬರಲ್ಲಿ ಒಬ್ಬರಿಗೆ ಮಂತ್ರಿಗಿರಿ ನೀಡಲಿದ್ದಾರೆ ಎನ್ನುತ್ತಿದ್ದರಾದರೂ, ಬಿಜೆಪಿ ನಡೆಗೆ ತಮ್ಮ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಬಹುತೇಕ ಸಚಿವ ಸ್ಥಾನ ಅಂತಿಮವಾಗಿತ್ತು. ಇವರು ಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಯಾವುದೋ ಕಾರಣಕ್ಕೆ ಮಂಗಳವಾರ ಬೆಳಗ್ಗೆ ಪಟ್ಟಿ ದಿಢೀರ್ ಬದಲಾಗಿದೆ. ಕೊನೆಯ ಕ್ಷಣದಲ್ಲಿ ಇವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ.

ಇದನ್ನೂ ಓದಿ: ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿಗೆ ಕೈತಪ್ಪಿದ ಸಚಿವಸ್ಥಾನ: ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದರಾ ರಮೇಶ್ ಜಾರಕಿಹೊಳಿ?

ಈ ಮಧ್ಯೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಬೆಂಬಲಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಡೆಗೆ ಗರಂ ಆಗಿರುವ ಬೆಂಬಲಿಗರು, ನಮ್ಮ ಶಾಸಕರಿಗೆ ಸಚಿವ ಸ್ಥಾನ ಯಾಕೇ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಬಿಜೆಪಿ ಅಧಿಕಾರಕ್ಕೆ ಬರಲು ನಮ್ಮ ಶಾಸಕರು ರಾಜ್ಯಾದ್ಯಂತ ಓಡಾಟ ನಡೆಸಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಯಡಿಯೂರಪ್ಪಗೆ ಹೈಕಮಾಂಡ್​ ಶಾಕ್; ಸಿಎಂ ಆಪ್ತರಿಗಿಲ್ಲ ಸಚಿವ ಸ್ಥಾನ​​

ಇನ್ನೊಂದೆಡೆ ಬಾಲಚಂದ್ರ ಜಾರಕಿಹೊಳಿಗೆ ಕೊಕ್ ಕೊಡುವುದರ ಹಿಂದೆ ರಮೇಶ್ ಜಾರಕಿಹೊಳಿ ಪಾತ್ರವೇ ಇದೆ. ಬೆಳಗಾವಿ ಕೋಟಾದಲ್ಲಿ ತಾನೇ ಮಂತ್ರಿಯಾಗಬೇಕೆಂಬುದು ರಮೇಶ್​​​ ಜಾರಕಿಹೊಳಿ ಉದ್ದೇಶ. ಇಡೀ ಜಿಲ್ಲೆಯ ರಾಜಕಾರಣ ತನ್ನೊಬ್ಬನ ಹಿಡಿತದಲ್ಲೇ ಇರಬೇಕೆಂಬುದು ಬೆಳಗಾವಿಯ ಪ್ರಮುಖ ನಾಯಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನವನ್ನು ಕೈತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
---------------
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ