ಕಾಫಿನಾಡಲ್ಲಿ ಅರಳಿತು ನೀಲಿ ಕುರುವಂಜಿ ಹೂ ; 12 ವರ್ಷಕ್ಕೊಮ್ಮೆ ಅರಳುವ ಪುಷ್ಪದ ಸೊಬಗನ್ನು ಕಣ್ತುಂಬಿಕೊಳ್ಳಿ

ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುವ ಕಾಲ ಸನ್ನಿಹಿತ. ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರುವ ಈ ಕುರವಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳುವ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತ ಶ್ರೇಣಿ, ಮುಳ್ಯಯ್ಯನಗಿರಿ ಸೇರಿದಂತೆ ಕಾಫಿನಾಡ ಬೆಟ್ಟ ಗುಡ್ಡಗಳಲ್ಲಿ ಅರಳಿ ನಿಂತಿವೆ

G Hareeshkumar | news18-kannada
Updated:October 16, 2019, 7:28 AM IST
ಕಾಫಿನಾಡಲ್ಲಿ ಅರಳಿತು ನೀಲಿ ಕುರುವಂಜಿ ಹೂ ; 12 ವರ್ಷಕ್ಕೊಮ್ಮೆ ಅರಳುವ  ಪುಷ್ಪದ ಸೊಬಗನ್ನು ಕಣ್ತುಂಬಿಕೊಳ್ಳಿ
ನೀಲಿ ಕುರುವಂಜಿ ಹೂ
  • Share this:
ಚಿಕ್ಕಮಗಳೂರು(ಅ.16) : ಹೂ ಚೆಲುವೆಲ್ಲಾ ನಂದೆಂದಿತು ಅನ್ನೋದು ಅಕ್ಷರಶಃ ಸತ್ಯ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೆ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದ ಮುಂದೆ ಉಳಿದೆಲ್ಲಾ ಸೌಂದರ್ಯವೂ ನಶ್ವರ ಅನ್ನೋದಿಲ್ಲಿ ಸಾಬೀತಾಗಿದೆ. ಕಾಫಿನಾಡಲ್ಲಿ ಮನೆ ಮಾಡಿರುವ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ರಮಣೀಯತೆಯನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ.

ಈ ಹೂವಿನ ಹೆಸರು ಕುರುವಂಜಿ, ಈ ಹೂವಿಗೆ ಗುರ್ಗಿ ಅಂತ ಕರೆಯುತ್ತಾರೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನ ಹೊರ ಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿರುತ್ತೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿನಾಡಿನ ಗಿರಿ-ಪರ್ವ ಶ್ರೇಣಿಗಳು ನೀಲಿ ರೂಪ ಪಡೆದುಕೊಳ್ಳುತ್ತಿವೆ.

ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುವ ಕಾಲ ಸನ್ನಿಹಿತ. ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರುವ ಈ ಕುರವಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳುವ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತ ಶ್ರೇಣಿ, ಮುಳ್ಯಯ್ಯನಗಿರಿ ಸೇರಿದಂತೆ ಕಾಫಿನಾಡ ಬೆಟ್ಟ ಗುಡ್ಡಗಳಲ್ಲಿ ಅರಳಿ ನಿಂತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನ ಭೂಲೋಕದ ಸ್ವರ್ಗವಾಗಿಸುತ್ತಿದೆ.

ಇದನ್ನೂ ಓದಿ: ಸದನದಲ್ಲಿ ಕೊಟ್ಟ ಭರವಸೆ ಮರೆತ ರಾಜ್ಯ ಸರ್ಕಾರ; ನೆರೆ ಪರಿಹಾರ ಕಾರ್ಯ ಬಿಟ್ಟು ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಭಾಗಿ

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆದಾಗ ಈ ಹೂವಿನ ಮಾಲೆ ಹಾಕಿದರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಎಂತಲು ಕರೆಯುತ್ತಾರೆ. ಕೇರಳ, ತಮಿಳುನಾಡಿಗರು. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ.

flower
ಅರಳಿರುವ ನೀಲಿ ಕುರುವಂಜಿ ಹೂ


 ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳುವ ಪ್ರಭೇದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರುವುದರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ. ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರುವ, ಮತ್ತಷ್ಟು ಅರಳುವ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೇ ಉಳಿದಿದೆ.

ಇದನ್ನೂ ಓದಿ :  ಮಾಳಿಗಮ್ಮಳ ಹುಲಿ ಪವಾಡ..! ದೇವಿಗೆ ಹರಕೆ ತೀರಿಸಿದ ಅರಣ್ಯಾಧಿಕಾರಿ; ಇಂದಿನಿಂದ ಪೂಜೆ ಪುನಾರಂಭ

ಒಟ್ಟಾರೆ ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದೆಯೋ ಬಲ್ಲವರ್ಯಾರು ಇಲ್ಲ. ಕಾಫಿನಾಡಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನ ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನ ನೋಡಬೇಕು ಅಂದ್ರೆ, ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲುವ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನೋದಂತು ಸತ್ಯ.

ವರದಿ : ವೀರೇಶ್ ಜಿ ಹೊಸೂರ್

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading