HOME » NEWS » State » AFTER 1 YEAR BYADARAHALLI POLICE ARRESTED THE ACCUSED IN A MURDER CASE GVTV MAK

Banglore Crime News: ವರ್ಷದ ಬಳಿಕ ಕೊಲೆ ರಹಸ್ಯ ಭೇಧಿಸಿ, ಆರೋಪಿಯನ್ನು ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು

ಈತ ವೃತ್ತಿಯಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತಿದ್ದ. ಇನ್ನು ಈತನ ಪತ್ನಿ ಜೊತೆ ಮೃತ ವೆಂಕಟೇಶ್ ಸಲುಗೆಯಿಂದ ಇದ್ದದ್ದೆ ಕೊಲೆಗೆ ಕಾರಣ ಎನ್ನಲಾಗಿದೆ.

news18-kannada
Updated:February 19, 2021, 2:29 PM IST
Banglore Crime News: ವರ್ಷದ ಬಳಿಕ ಕೊಲೆ ರಹಸ್ಯ ಭೇಧಿಸಿ, ಆರೋಪಿಯನ್ನು ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ಆ ವ್ಯಕ್ತಿ ಮೃತಪಟ್ಟು ವರ್ಷವೇ ಕಳೆದಿದೆ. ಅಸಹಜ ಸಾವೆಂದು ಪರಿಗಣಿಸಿದ್ದ ಪೊಲೀಸರು ಈ ಪ್ರಕರಣವನ್ನು ಬಹುತೇಕ ಮುಚ್ಚಿದ್ದರು. ಆದರೆ, ಈ ಕೇಸ್​ಗೆ ಟ್ವಿಸ್ಟ್ ಸಿಕ್ಕಿದ್ದು ಅದೊಂದು ನಾರಿಯ ಜೊತೆಗಿನ ಒಡನಾಟ. ಆ ಜಾಡು ಹಿಡಿದು ಬೆನ್ನತ್ತಿದ ಪೊಲೀಸರ ತನಿಖೆಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಅದು ಅಸಹಜ ಸಾವಲ್ಲ ಕೊಲೆ ಅನ್ನೊದು ಈಗ ಬಟಾಬಯಲಾಗಿದೆ. ಹೌದು, ಅದು ಒಂದು ವರ್ಷದ ಹಿಂದಿನ ಮಾತು.. ಬ್ಯಾಡರಹಳ್ಳಿಯ ಆಂದ್ರಹಳ್ಳಿ ಮುಖ್ಯರಸ್ತೆಯ ಅದೊಂದು ಮನೆಯಲ್ಲಿ ವೆಂಕಟೇಶ್ ಅಲಿಯಾಸ್ ಪೆನಾಯಿಲ್ ವೆಂಕಟೇಶ್ ಎಂಬಾತ ಸಾವನಪ್ಪಿದ್ದ. ರಾತ್ರಿ ವೇಳೆ ತನ್ನ ಗೆಳೆಯನ ಜೊತೆ ಕುಳಿತು ಪಾರ್ಟಿ ಮಾಡಿದ್ದ ಆತ ಬೆಳಗಾಗುವಷ್ಟರಲ್ಲೇ ಸಾವನಪ್ಪಿದ್ದ.

ಅಸಹಜ ಸಾವು ಅಂತ ಕೇಸ್ ದಾಖಲಾಗಿತ್ತು. ಆದರೆ, ಈಗ ಆ ಕೇಸ್ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಅದು ಅಸಹಜ ಸಾವಲ್ಲ ಕೊಲೆ ಅನ್ನೊದು ಬಯಲಾಗಿದೆ. ಅಷ್ಟೇ ಅಲ್ಲದೇ, ವೆಂಕಟೇಶ್ ಕೊಲೆ ಮಾಡಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಆಂದ್ರಹಳ್ಳಿ ನಿವಾಸಿಯಾದ ಹರೀಶ್​ ಎಂದು ಗುರುತಿಸಲಾಗಿದೆ.

ಈತ ವೃತ್ತಿಯಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತಿದ್ದ. ಇನ್ನು ಈತನ ಪತ್ನಿ ಜೊತೆ ಮೃತ ವೆಂಕಟೇಶ್ ಸಲುಗೆಯಿಂದ ಇದ್ದದ್ದೆ ಕೊಲೆಗೆ ಕಾರಣ ಎನ್ನಲಾಗಿದೆ. ಇನ್ನು ಇದೇ ವಿಚಾರವಾಗಿ ಕಳೆದ ವರ್ಷ ಫೆಬ್ರವರಿಯ 17ರಂದು ತನ್ನ ಗೆಳೆಯನ ಜೊತೆ ಪಾರ್ಟಿಗೆ ಕುಳಿತದ್ದ ವೆಂಕಟೇಶ್ ಜಗಳ ತೆಗೆದಿದ್ದ. ಇನ್ನು ಈ ವೇಳೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ರಾಡ್ ನಿಂದ ವೆಂಕಟೇಶ್ ಗೆ ಹಲ್ಲೆ ಮಾಡಿದ್ದ. ಬಳಿಕ ಕುಸಿದು ಬಿದ್ದ ವೆಂಕಟೇಶ್ ಕೆಲ ಸಮಯದ ಬಳಿಕ ಮೃತಪಟ್ಟಿದ್ದಾನೆ.

ಮತ್ತೊಂದು ಕಡೆ ಆತನ ಕೊಲೆಯ ವಿಚಾರದಲ್ಲಿ ಅನುಮಾನಗೊಂಡಿರೋ ಗೆಳೆಯರು. ಇದು ಉದ್ದೇಶ ಪೂರಿತ ಷಡ್ಯಂತರ ಅನ್ನೊ ಮಾತು ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗೆಳೆಯ ಹೆಂಗಸರ ಸವಾಸಕ್ಕೆ ಬಿದ್ದವನಲ್ಲ, ಆತ ಜೈಲಿನಿಂದ ಬಿಡುಗಡೆಯಾದ್ರೆ ಮುಹೂರ್ತ ಫಿಕ್ಸ್ ಮಾಡೊದಾಗಿ ಸ್ಕೆಚ್ ಹಾಕಿದ್ದಾರಂತೆ. ಒಟ್ನಲ್ಲಿ ಒಂದು ವರ್ಷದ ಹಿಂದೆ ನಡೆದ ಕೊಲೆಯ ಅಸಲಿ ಸತ್ಯ ಈಗ ಬಯಲಾಗಿದ್ದು, ಇದರ ಹಿಂದಿನ ಕಾರಣದ ವಿಚಾರದಲ್ಲಿ ಹಲವು ಅನುಮಾನ ಮೂಡಿದೆ.

ಇದನ್ನೂ ಓದಿ : ಟಿಕ್...ಟಿಕ್... ಬರುತ್ತಿದೆ ಮನುಕುಲದ ಅಂತ್ಯದ ಕಾಲ!?

ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಬಂಧಿತ ಹರೀಶ್ ಗೆ ಸಹಕರಿಸಿದ್ದ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದು, ಶೀಘ್ರದಲ್ಲೇ ಖೆಡ್ಡಾಕೆ ಕೆಡವಲಿದ್ದಾರೆ. ಈ ಬಳಿಕ ಮತ್ತಷ್ಟು ಅಸಲಿ ಸತ್ಯ ಹೊರ ಬೀಳುವ ಸಾಧ್ಯತೆಗಳಿವೆ.
Youtube Video
ಅದೇನೇ ಇರಲಿ ಎಲ್ಲರೂ ಜೊತೆಯಲ್ಲಿದ್ದ ಸ್ನೇಹಿತರೇ ಕುಡಿದು ಒಬ್ಬಾತ ಹೆಣವಾದ್ರೆ, ಮತ್ತೊಬ್ಬ ಜೈಲು ಸೇರಿದ್ದು ವಿಪರ್ಯಾಸವೇ ಸರಿ. ವರ್ಷದ ಬಳಿಕ ಗೆಳೆಯನನ್ನ ಆತನ ಆತ್ಮೀಯನೇ ಕೊಲೆ ಮಾಡಿರೋ ಸಂಗತಿ ತಿಳಿದ ಮತ್ತೊಬ್ಬ ಗೆಳೆಯ ಆರೋಪಿಯನ್ನ ಮುಗಿಸ್ತೀನಿ ಎಂದಿದ್ದಾನೆ. ಪೊಲೀಸರು ಮತ್ತೆ ಘಟನೆ ಮರುಕಳಿಸದಂತೆ ಎರಡು ಗುಂಪುಗಳಿಗೆ ವಾರ್ನ್ ಮಾಡಿದ್ದಾರೆ.
Published by: MAshok Kumar
First published: February 19, 2021, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories