• Home
  • »
  • News
  • »
  • state
  • »
  • African Swine Fever: ಕೊಡಗಿನಲ್ಲಿ ಕಾಣಿಸಿಕೊಂಡಿದೆ ಆಫ್ರಿಕನ್ ಹಂದಿ ಜ್ವರ!

African Swine Fever: ಕೊಡಗಿನಲ್ಲಿ ಕಾಣಿಸಿಕೊಂಡಿದೆ ಆಫ್ರಿಕನ್ ಹಂದಿ ಜ್ವರ!

ಕೊಡಗಿನಲ್ಲಿ ಹಂದಿ ಜ್ವರ

ಕೊಡಗಿನಲ್ಲಿ ಹಂದಿ ಜ್ವರ

ಮೊದಲಿಗೆ ಗಣೇಶ್ ಎಂಬುವರ ಹಂದಿಯೊಂದಕ್ಕೆ ಜ್ವರ ಕಾಣಿಸಿಕೊಂಡಿತ್ತಂತೆ. ಹಂದಿಗೆ ಜ್ವರ ಬರುತ್ತಿದ್ದಂತೆ ಆಹಾರ ತ್ಯಜಿಸಿದ್ದ ಹಂದಿ 2 ದಿನಗಳಲ್ಲೇ ಸಾವನ್ನಪ್ಪಿತ್ತು. ಬಳಿಕ ಒಂದೊಂದೆ ಹಂದಿಗೆ ಆಫ್ರಿಕನ್ ಜ್ವರ ಕಾಣಿಸಿಕೊಂಡು 21 ಹಂದಿಗಳು ಸಾವನ್ನಪ್ಪಿವೆ.

  • News18 Kannada
  • Last Updated :
  • Karnataka, India
  • Share this:

ಕೊಡಗು (ಅ. 26) : ಎಲ್ಲೋ ಕಾಣಿಸಿಕೊಳ್ಳುತ್ತಿದ್ದ ಆಫ್ರಿಕನ್ ಹಂದಿ‌ಜ್ವರ (African Swine Fever) ಈಗ ಕೊಡಗಿನಲ್ಲೂ ಕಾಣಿಸಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ದೂಡಿದೆ. ಮಡಿಕೇರಿ (Madikeri) ತಾಲ್ಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತಲಿನ ಹಂದಿ ಸಾಕಾಣಿಕಾ ಕೇಂದ್ರಗಳ (Pig Breeding Centre) ಹಂದಿಗಳಿಗೆ ಈ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಎರಡು ತಿಂಗಳ ಅವಧಿಯಲ್ಲಿ 30ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ.


ಕೊಡಗಿನಲ್ಲಿ 21 ಹಂದಿಗಳು ಸಾವು


ಮೊದಲಿಗೆ ಗಣೇಶ್ ಎಂಬುವರ ಹಂದಿಯೊಂದಕ್ಕೆ ಜ್ವರ ಕಾಣಿಸಿಕೊಂಡಿತ್ತಂತೆ. ಹಂದಿಗೆ ಜ್ವರ ಬರುತ್ತಿದ್ದಂತೆ ಆಹಾರ ತ್ಯಜಿಸಿದ್ದ ಹಂದಿ 2 ದಿನಗಳಲ್ಲೇ ಸಾವನ್ನಪ್ಪಿತ್ತು. ಬಳಿಕ ಒಂದೊಂದೆ ಹಂದಿಗೆ ಆಫ್ರಿಕನ್ ಜ್ವರ ಕಾಣಿಸಿಕೊಂಡು 21 ಹಂದಿಗಳು ಸಾವನ್ನಪ್ಪಿದ್ದವು.


ಒಂದೆರಡು ಹಂದಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದಂತೆ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಮೃತ ಹಂದಿಯ ಲಿವರ್ ಮತ್ತು ಕಿಡ್ನಿಯನ್ನು ಸಂಗ್ರಹಿಸಿ ಹೈದರಾಬಾದಿನ ಲ್ಯಾಬ್ ಗೆ ಕಳುಹಿಸಿದ್ದರು. ಇದೀಗ ಲ್ಯಾಬ್ ವರದಿ ಬಂದಿದ್ದು ಹಂದಿಗಳಿಗೆ ಆಫ್ರಿಕನ್ ಜ್ವರ ಬಂದಿರುವುದು ದೃಢಪಟ್ಟಿದೆ.


ಇದನ್ನೂ ಓದಿ:  Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!


ಹಂದಿ ಸಾಕಿದವರಲ್ಲಿ ಆತಂಕ


ಇದರ ನಡುವೆ ಗಾಳಿಬೀಡಿನ ಪ್ರಶಾಂತ್ ಎಂಬುವರು ಸಾಕಿದ್ದ ಹಂದಿಗಳಿಗೂ ಕಳೆದ ಹತ್ತು ದಿನಗಳ ಹಿಂದೆ ಆಫ್ರಿಕನ್ ಹಂದಿ ಜ್ವರಕ್ಕೆ ಮಾರಾಟಕ್ಕೆ ಸಿದ್ದವಾಗಿದ್ದ ತಲಾ ನೂರು ಕೆ. ಜಿ ತೂಗುತ್ತಿದ್ದ 10 ಹಂದಿಗಳು ಒಂದೊಂದಾಗಿಯೇ ಸಾವನ್ನಪ್ಪಿವೆ. ಗಣಪತಿ ಎಂಬುವರ ಹಂದಿಗಳು ಸಾವನ್ನಪ್ಪುತ್ತಿರುವುದು ಗೊತ್ತಾಗುತ್ತಿದ್ದಂತೆ ಪ್ರಶಾಂತ್ ಅವರು ತಮ್ಮ ಹಂದಿಗಳಿಗೆ ವ್ಯಾಕ್ಸಿನ್ ಹಾಕಿಸಿದ್ದರು. ಆದರೂ ಹಂದಿಗಳು ಮೃತಪಟ್ಟಿವೆ. ಮೃತಪಟ್ಟ ಹಂದಿಗಳನ್ನು ತೋಟದಲ್ಲಿಯೇ ಅವುಗಳನ್ನು ಗುಂಡಿ ತೆಗೆದು ಹೂಳಲಾಗಿದೆ.


ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ 


ಗಾಳಿಬೀಡು ವ್ಯಾಪ್ತಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಹಂದಿ‌ಜ್ವರ ಬಂದಿರುವುದು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಅದರ ನಿಯಂತ್ರಣಕ್ಕೆ ಮುಂದಾಗಿದೆ. ಮತ್ತಷ್ಟು ರೋಗ ಹರಡದಂತೆ ತಡೆಯಲು ಮುಂದಾದ ಕೊಡಗು ಜಿಲ್ಲಾಡಳಿತ, ಹಂದಿ ಸಾಕಾಣಿಕಾ ಕೇಂದ್ರದ 1 ಕಿ.ಮೀ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಘೋಷಣೆ ಮಾಡಿದೆ. ಅಲ್ಲದೆ 10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಜಿಲ್ಲಾಡಳಿತ ಘೋಷಿಸಿದೆ.


ಹಲವು ಮುನ್ನೆಚ್ಚರಿಕಾ ಕ್ರಮ


ಸೋಂಕಿಗೆ ತುತ್ತಾದ ಹಂದಿಗಳ ವೈಜ್ಞಾನಿಕ ವಧೆ ಮಾಡಿ ಸಂಸ್ಕಾರ ಮಾಡುವಂತೆ ಸೂಚಿಸಿದೆ. ಇನ್ನು ಜಾಗೃತ ವಲಯಕ್ಕೆ‌ ಹೊಸದಾಗಿ‌‌ ಬೇರೆ ಕಡೆಯಿಂದ ಹಂದಿ ತರದಂತೆ ಸೂಚನೆ ನೀಡಲಾಗಿದ್ದು, ಹಂದಿ ಮತ್ತು ಸಾಕಾಣಿಕಾ ಕೇಂದ್ರದ ಕೆಲಸಗಾರರ ಸಂಚಾರವನ್ನು ನಿಯಂತ್ರಣ ಮಾಡಲಾಗಿದೆ. ಒಂದು ಹಂದಿ ಫಾರಂನ ಕೆಲಸಗಾರರು ಬೇರೆ ಫಾರಂಗೆ ಹೋಗಬಾರದು, ಹಂದಿ ಮಾಂಸದ ಹೋಟೆಲ್‌ ಉಳಿಕೆಯನ್ನು ಹಂದಿಗಳಿಗೆ ನೀಡಬಾರದು, ಹಂದಿ ಆಹಾರ, ಇತರೆ ಸಾಮಗ್ರಿ ಸಾಗಿಸುವ ವಾಹನಗಳಿಗೆ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದ್ದಾರೆ.


ಇದನ್ನೂ ಓದಿ: C T Ravi: ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ರಸ್ತೆ ಬದಿ ಕುಳಿತು ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ!


ಹಂದಿ ಫಾರಂ ಒಳಗೆ ಪ್ರವೇಶ ನಿರ್ಬಂಧ


ಯಾವುದೇ ಸಂದರ್ಶಕರು ಬಂದರೂ ಹಂದಿ ಫಾರಂ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ.  ಆದರೆ ಐದಾರು ವರ್ಷಗಳಿಂದ ಹಂದಿ ಸಾಕಾಣಿಕೆ ಮಾಡುತ್ತಿದ್ದ ರೈತರು ಮಾರಾಟಕ್ಕೆ ಸಿದ್ಧವಾಗಿದ್ದ ಹಂದಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ ಎಂದು ಗಾಳಿಬೀಡು ಗ್ರಾಪಂ ಉಪಾಧ್ಯಕ್ಷ ಗಿರೀಶ್ ಹೇಳಿದ್ದಾರೆ. ಸರ್ಕಾರ ಆದಷ್ಟು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Published by:ಪಾವನ ಎಚ್ ಎಸ್
First published: