• Home
  • »
  • News
  • »
  • state
  • »
  • Bannerghatta: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ, ಆಕರ್ಷಣೆ ಹೆಚ್ಚಿಸಿದ ಆಫ್ರಿಕನ್ ಮೂಲದ ಹಮಾದ್ರ

Bannerghatta: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ, ಆಕರ್ಷಣೆ ಹೆಚ್ಚಿಸಿದ ಆಫ್ರಿಕನ್ ಮೂಲದ ಹಮಾದ್ರ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ, ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಣೀಯವಾಗಲಿವೆ ಆಫ್ರಿಕನ್ ಮೂಲದ ಹಮಾದ್ರಿಯಾಸ್ ಬಬೂನ್ ಗಳು

  • News18 Kannada
  • Last Updated :
  • Bangalore [Bangalore], India
  • Share this:

ಆನೇಕಲ್(ನ,11): ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನ ಅಂದ್ರೆ ಅದು ಸಾವಿರಾರು ಪ್ರಾಣಿ ಪಕ್ಷಿಗಳಿರುವ ಪ್ರವಾಸಿಗರ ನೆಚ್ಚಿನ ತಾಣ. ಹಸಿರು ವಾತಾವರಣದ ಸುಂದರ ಪರಿಸರದ ನಡುವೆ ಪ್ರಾಣಿ- ಪಕ್ಷಿಗಳನ್ನ ನೋಡಿ ಪ್ರವಾಸಿಗರು ಸಂತಸಗೊಳ್ಳುತ್ತಾರೆ . ಆದ್ರೆ ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಇದರಿಂದ ಪ್ರವಾಸಿಗರನ್ನ ಮತ್ತಷ್ಟು ಆಕರ್ಷಿಸುತ್ತಿದೆ. ಅಷ್ಟಕ್ಕೂ ಆ ಹೊಸ ಅತಿಥಿಗಳಾದ್ರು ಯಾರು? ಮುಂದಿದೆ ವಿವರ


ಹಮಾದ್ರಿಯಾಸ್ ಬಬೂನ್, ಆಫ್ರಿಕಾ ದೇಶದಲ್ಲಿ ಹೆಚ್ಚಾಗಿ ಕಂಡುಬರುವ ಈ ಅಪರೂಪದ ಪ್ರಾಣಿ ಸಂಕುಲ. ಸದ್ಯ ಈ ಅಪರೂಪದ ಬಬೂನ್ ಜಾತಿಯ ಕೋತಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ ತರಲಾಗಿದೆ. ಉದ್ಯಾನವನಕ್ಕೆ ಆಗಮಿಸುವ ಪ್ರಾಣಿ ಪ್ರಿಯರಿಗೆ ಇನ್ನಷ್ಟು ಮುದ ನೀಡಲು ಆಫ್ರಿಕಾ ಮೂಲದ ಬಬೂನ್ ಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ . ಸಿಂಗಾಪುರದಿಂದ ಮೈಸೂರಿಗೆ ತೆಗೆದುಕೊಂಡು ಬರಲಾಗಿದ್ದ ಹಮಾದ್ರಿಯಾಸ್ ಬಬೂನ್ ಗಳನ್ನ ಬನ್ನೇರುಘಟ್ಟಕ್ಕೆ ಜೈವಿಕ ಉದ್ಯಾನವನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ತರಿಸಿಕೊಳ್ಳಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ .


ಇದನ್ನೂ ಓದಿ: ಹೆಜ್ಜೆ ಗುರುತು ಇದೆ, ಆದ್ರೆ ಚಿರತೆ ಸಿಕ್ತಿಲ್ಲ! 24ನೇ ದಿನವೂ ಫಲಕೊಡದ ಆಪರೇಷನ್!


ಇನ್ನೂ ಒಂದೂವರೆ ವರ್ಷದ ಎರಡು ಗಂಡು ಹಾಗೂ ಒಂದು ಹೆಣ್ಣು ಹಮಾದ್ರಿಯಾಸ್ ಬಬೂನ್ ಗಳನ್ನ ಬನ್ನೇರುಘಟ್ಟಕ್ಕೆ ತರಲಾಗಿದ್ದು ಅವುಗಳಿಗೆ ಪ್ರತ್ಯೇಕವಾದ ಕ್ರಾಲ್ ನಿರ್ಮಾಣ ಮಾಡಲಾಗಿದೆ . ಕೋತಿ ಜಾತಿಗೆ ಸೇರುವ ಈ ಬಬೂನ್ಗಳು ಹೆಚ್ಚಾಗಿ ಆಫ್ರಿಕಾ ದೇಶದಲ್ಲಿ ಕಂಡು ಬರುತ್ತವೆ . ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಅಪರೂಪದ ಪ್ರಾಣಿಗಳನ್ನು ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ. ಹೆಣ್ಣಿಗಿಂತ ಗಂಡು ಬಬೂನ್ಗಳು ಸುಮಾರು ಎರಡು ಪಟ್ಟು ದೊಡ್ಡದಾಗಿದ್ದು, ಕೋತಿ ಜಾತಿಯ ಅಪರೂಪದ ಮೂರು ಬಬೂನ್ ಗಳನ್ನ ಬನ್ನೇರುಘಟ್ಟಕ್ಕೆ ಕರೆತರಲಾಗಿದೆ.


ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದ್ದು , ಅವುಗಳಿಗೆ ಆಹಾರ ಹಾಗೂ ಆರೈಕೆ ಮಾಡಲೆಂದು ಓರ್ವ ಸಿಬ್ಬಂದಿಯನ್ನ ನೇಮಕ ಮಾಡಿ ಅವುಗಳನ್ನ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ಅಫ್ರಿಕಾ ದೇಶದಲ್ಲಿ ಬಬೂನ್ಗಳನ್ನು ದೇವರಂತೆ ಪೂಜಿಸಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ದೇಶಕ ಡಾ ಉಮಾಶಂಕರ್ ತಿಳಿಸಿದ್ದಾರೆ .


ಇದನ್ನೂ ಓದಿ: ಬೆಂಗಳೂರಿನಲ್ಲಿನ್ನು ವಾಹನ ಪಾರ್ಕಿಂಗ್​ಗೆ ಸೂಪರ್ ವ್ಯವಸ್ಥೆ!


ಒಟ್ಟಿನಲ್ಲಿ ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರ ಆಕರ್ಷಣೀಯ ತಾಣವಾಗಿದ್ದು , ರಾಜ್ಯದ ಹಲವೆಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ‌. ಪ್ರಾಣಿ ಪಕ್ಷಿಗಳನ್ನ ನೋಡಿ ಏಂಜಾಯ್ ಮಾಡಲು ಬನ್ನೇರುಘಟ್ಟಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ಇದೀಗ ಹೊಸ ಅತಿಥಿಗಳಾದ ಆಫ್ರಿಕಾ ಮೂಲದ  ಬಬೂನ್ ಮತ್ತಷ್ಟು ಆಕರ್ಷಣೀಯವಾಗಿದ್ದು, ನೀವು ಸಹ ಬನ್ನೇರುಘಟ್ಟಕ್ಕೆ ಆಗಮಿಸಿ ಆಫ್ರಿಕನ್ ಮೂಲದ ಹಮಾದ್ರಿಯಾಸ್ ಬಬೂನ್ ಗಳನ್ನ ನೋಡಿ ಏಂಜಾಯ್ ಮಾಡಬಹುದಾಗಿದೆ .

Published by:Precilla Olivia Dias
First published: