• Home
  • »
  • News
  • »
  • state
  • »
  • ಮಾಸ್ಕ್ ಹಾಕಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಾಸ್ಕ್ ತೆಗೆಸಿದ ಡಿಸಿಎಂ ಅಶ್ವತ್ಥನಾರಾಯಣ

ಮಾಸ್ಕ್ ಹಾಕಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಾಸ್ಕ್ ತೆಗೆಸಿದ ಡಿಸಿಎಂ ಅಶ್ವತ್ಥನಾರಾಯಣ

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಪ್ರಧಾನಮಂತ್ರಿಯವರ ಆತ್ಮ ನಿರ್ಭಾರ್ ಭಾರತ್ ಯೋಜನೆಯಲ್ಲಿ ಉದ್ಯೋಗಾವಕಾಶ ಸಿಗಲಿದೆ. ನೇರವಾಗಿ 5 ಸಾವಿರ ಜನರಿಗೆ ಮತ್ತು ಪರೋಕ್ಷವಾಗಿ 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ರಾಜ್ಯದ ಪರವಾಗಿ ಕೇಂದ್ರ ರಕ್ಷಣಾ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವೇದಿಕೆ ಮೇಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೃತಜ್ಞತೆ ಹೇಳಿದರು. ಜೊತೆಗೆ ಏರೋ ಇಂಡಿಯಾ ಶೋ 2021 ಅದ್ಬುತ ಯಶಸ್ಸು ಕಾಣಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಓದಿ ...
  • Share this:

    ಬೆಂಗಳೂರು; ಏರೋ ಶೋ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ರಾಜ್ಯದ ಜನತೆಗೆ ಸಂತಸ ತಂದಿದೆ. ಈ ಬಾರಿಯೂ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಕೊರೋನಾದ ನಡುವೆಯೂ ಏರೋ ಇಂಡಿಯಾ ಶೋ ನಡೆಯುತ್ತಿದೆ. ಇಂಥ ಸಮಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ರಾಜ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.


    ಏರ್ ಇಂಡಿಯಾ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ತೇಜಸ್ ನಿರ್ಮಾಣ ಯೂನಿಟ್​ಗೆ 45 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದಕ್ಕೆ ಸಂತಸ ಆಗುತ್ತಿದೆ. ಮೈಸೂರು ಸಂಸ್ಥಾನ ಹೆಚ್​ಎಎಲ್ ಸಂಸ್ಥೆ ಆರಂಭಿಸಿದ್ದು, ನಮಗೆ ಹೆಮ್ಮೆಯ ಸಂಗತಿ. ದೇಶದ ರಕ್ಷಣೆ ವಿಚಾರದಲ್ಲಿ ಹೆಚ್​ಎಎಲ್ ಮಹತ್ವದ ಪಾತ್ರ ವಹಿಸುತ್ತಿದೆ. ಮೂರು ಸೇನೆಯಲ್ಲೂ ಹೆಚ್​ಎಎಲ್ ಮಹತ್ವದ ಪಾತ್ರ ವಹಿಸಿದೆ. ಏರೋನಾಟಿಕ್ಸ್ ವಿಭಾಗದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿದ್ದು, ಇದನ್ನು ಯುವಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


    ಪ್ರಧಾನಮಂತ್ರಿಯವರ ಆತ್ಮ ನಿರ್ಭಾರ್ ಭಾರತ್ ಯೋಜನೆಯಲ್ಲಿ ಉದ್ಯೋಗಾವಕಾಶ ಸಿಗಲಿದೆ. ನೇರವಾಗಿ 5 ಸಾವಿರ ಜನರಿಗೆ ಮತ್ತು ಪರೋಕ್ಷವಾಗಿ 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ರಾಜ್ಯದ ಪರವಾಗಿ ಕೇಂದ್ರ ರಕ್ಷಣಾ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವೇದಿಕೆ ಮೇಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೃತಜ್ಞತೆ ಹೇಳಿದರು. ಜೊತೆಗೆ ಏರೋ ಇಂಡಿಯಾ ಶೋ 2021 ಅದ್ಬುತ ಯಶಸ್ಸು ಕಾಣಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.


    ಇದನ್ನು ಓದಿ: ಇಎಂಐ ಕಟ್ಟದ ಕಾರಿನ ಮಾಲೀಕರೇ ಇವರ ಟಾರ್ಗೆಟ್; ಕಾರು ಖರೀದಿ ಸೋಗಿನಲ್ಲಿ ವಂಚನೆ, 7 ಮಂದಿ ಅಂತಾರಾಜ್ಯ ಕಳ್ಳರ ಬಂಧನ


    ಮಾಸ್ಕ್ ತೆಗೆಸಿದ ಡಿಸಿಎಂ!


    ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕದೆ ವೇದಿಕೆಯ ಮೇಲೆ ಸಿಎಂ ಯಡಿಯೂರಪ್ಪ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರು ಮಾಸ್ಕ್ ಹಾಕಿದ್ದರು. ಆದರೆ, ಡಿಸಿಎಂ ಅಶ್ವಥ್ ನಾರಾಯಣ ಮಾಸ್ಕ್ ಹಾಕದೆ ಕುಳಿತಿದ್ದರು. ಈ ವೇಳೆ ಮಾಸ್ಕ್ ಧರಿಸುವಂತೆ ಅಶ್ವಥ್ ನಾರಾಯಣ ಅವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದರು. ರಾಜನಾಥ್ ಸಿಂಗ್ ಹೇಳಿದ ನಂತರ ಮಾಸ್ಕ್ ಅಶ್ವಥ್ ನಾರಾಯಣ ಅವರು ತಮ್ಮ ಆಪ್ತ ಸಹಾಯಕರಿಂದ ಮಾಸ್ಕ್ ತರಿಸಿಕೊಂಡು ಹಾಕಿಕೊಂಡರು.


    ಇದಾದ ಬಳಿಕ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸನ್ಮಾನ ಮಾಡುವಾಗ ಮಾಸ್ಕ್ ಬಿಚ್ಚುವಂತೆ ಡಿಸಿಎಂ ಅಶ್ವಥ್ ನಾರಾಯಣ ಅವರು ಮನವಿ ಮಾಡಿದರು. ಅದರಂತೆ ಅವರು ಮಾಸ್ಕ್ ತೆಗೆದರು. ರಾಜನಾಥ್ ಸಿಂಗ್ ಹೇಳಿ ಮಾಸ್ಕ್ ತೆಗೆಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮತ್ತು ಸಚಿವ ಜಗದೀಶ್ ಶೆಟ್ಟರ್ ಸಹ ಮಾಸ್ಕ್ ತೆಗೆದರು.

    Published by:HR Ramesh
    First published: