Aero India 2023: ಇಂದು ಏರೋ ಶೋಗೆ ಚಾಲನೆ; 5 ದಿನ ಏನೆಲ್ಲಾ ನಡೆಯುತ್ತೆ?

ಏರ್ ಶೋ

ಏರ್ ಶೋ

ಸ್ಪೀಡ್‌ ಎಂಬ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಕ್ಷಣಾ ಸಚಿವರ ಸಮ್ಮೇಳನ, ಸೆಮಿನಾರ್ ನಡೆಯಲಿದೆ. ಮಧ್ಯಾಹ್ನ 1 2ರಿಂದ 1.30 ವರೆಗೂ ವೈಮಾನಿಕ ಪ್ರದರ್ಶನ ಇರಲಿದೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಬೆಂಗಳೂರು: ಇಂದಿನಿಂದ ಫೆಬ್ರವರಿ 17ರವರಗೆ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್​ ಶೋವನ್ನು (Aero India Air Show) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಉದ್ಘಾಟಿಸಲಿದ್ದಾರೆ. ಭಾನುವಾರ ಭಾರತೀಯ ವಾಯುಸೇನೆ ವಿಮಾನದಲ್ಲಿ ಹೆಚ್‌ಎಎಲ್‌ಗೆ (HAL) ಆಗಮಿಸಿದ ಪ್ರಧಾನಮಂತ್ರಿ ಮೋದಿಯವರನ್ನು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ (Governor Thawar Chand Gehlot)‌, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಹೂಗುಚ್ಛ ನೀಡಿ ಸ್ವಾಗತಿಸಿದರು. ಇಂದು ಬೆಳಗ್ಗೆ 8:50ಕ್ಕೆ ರಾಜಭವನದಿಂದ ಮೆಕ್ರಿ ಸರ್ಕಲ್ ಬಳಿ ಇರುವ HQTCಗೆ ಮೋದಿ ತೆರಳುತ್ತಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಲಹಂಕ ವಾಯುನೆಲೆಗೆ ತಲಪುತ್ತಾರೆ. ಬೆಳಗ್ಗೆ 9:30 ಕ್ಕೆ ಏರ್​ ಶೋ ಉದ್ಘಾಟಿಸಲಿದ್ದಾರೆ.


ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿ ರಾಜ್ ನಾಥ್ ಸಿಂಗ್, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗುತ್ತಾರೆ. ಬೆಳಗ್ಗೆ 9:30 ರಿಂದ 11:30ರವರೆಗೆ ಮೋದಿ ಏರೋ ಶೋ ವೀಕ್ಷಿಸಲಿದ್ದಾರೆ. 11:45ಕ್ಕೆ ಯಲಹಂಕ ವಿಮಾನ ನಿಲ್ದಾಣದಿಂದ ತ್ರಿಪುರಾದ ಅಗರ್ತಾಲ್​ಗೆ ತಲುಪಲಿದ್ದಾರೆ.


ಕನ್ನಡಿಗರ ಜೊತೆ ಮೋದಿ ಸಂವಾದ


ನಿನ್ನೆ ರಾತ್ರಿ ರಾಜಭವನದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಮೋದಿ ಸಂವಾದ ನಡೆಸಿದರು. ಹಲವು ಗಣ್ಯರನ್ನು ಮೋದಿ ಡಿನ್ನರ್​ಗೆ ಆಹ್ವಾನಲಾಗಿತ್ತು.


Aero india arishow five days Schedule mrq
ಏರ್ ಶೋ


ಮೋದಿ ಜೊತೆ ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್​ಕುಮಾರ್, ನಿರ್ದೇಶಕ ಪ್ರಶಾಂತ್ ನೀಲ್, ಶ್ರದ್ಧಾ ಜೈನ್​ನೆ ಮೋದಿ ಆಹ್ವಾನಿಸಿದ್ರು. ರಾತ್ರಿ ಭೋಜನ ಸವಿಯುತ್ತಾ ಸಿನಿಮಂದಿ ಜತೆ ಚರ್ಚಿಸಿದ್ರು.


ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಉದ್ಯಮಿಗಳಾದ ನಿತಿನ್ ಕಾಮತ್, ತರುಣ್ ಮೆಹ್ತಾಗೂ ಮೋದಿ ಆಹ್ವಾನಿಸಿದ್ದರು.




ಐದು ದಿನ ಯಾವೆಲ್ಲಾ ಕಾರ್ಯಕ್ರಮಗಳು ಇರಲಿವೆ?


ಮೊದಲ ದಿನ


ಬೆಳಗ್ಗೆ 9.30ಕ್ಕೆ ಏರೋ ಇಂಡಿಯಾ 2023 ಉದ್ಘಾಟನೆ ನಡೆಯಲಿದೆ. ರಕ್ಷಣಾ ಸಚಿವರು, ರಕ್ಷಣಾ ಇಲಾಖೆ ಮುಖ್ಯಸ್ಥರು, ಕರ್ನಾಟಕ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 10.15 ರಿಂದ 10.50ವರೆಗೂ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಇದರ ಜೊತೆಗೆ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸೆಮಿನಾರ್‌ಗಳು ನಡೆಯಲಿವೆ.


ಎರಡನೇ ದಿನ


ಸ್ಪೀಡ್‌ ಎಂಬ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಕ್ಷಣಾ ಸಚಿವರ ಸಮ್ಮೇಳನ, ಸೆಮಿನಾರ್ ನಡೆಯಲಿದೆ. ಮಧ್ಯಾಹ್ನ 1 2ರಿಂದ 1.30 ವರೆಗೂ ವೈಮಾನಿಕ ಪ್ರದರ್ಶನ ಇರಲಿದೆ.


Aero india arishow five days Schedule mrq
ಪ್ರಧಾನಿ ಮೋದಿ


ಮೂರನೇ ದಿನ


ವಿವಿಧ ಸೆಮಿನಾರ್‌ಗಳು ಜರುಗಲಿದ್ದು, ಮಧ್ಯಾಹ್ನ 12ರಿಂದ 1.30 ವರೆಗೂ ವೈಮಾನಿಕ ಪ್ರದರ್ಶನ ನಡೆಯಲಿದೆ.


ನಾಲ್ಕು ಮತ್ತು ಐದನೇ ದಿನ


ಬೆಳಗ್ಗೆ 9 ರಿಂದ ಸಂಜೆ 6ವರೆಗೂ ಪ್ರದರ್ಶನ ಮಳಿಗೆಗೆ ಸಾರ್ವಜನಿಕರು ಭೇಟಿ ನೀಡಬಹುದು.


ಬೆಳಗ್ಗೆ 9.30 ರಿಂದ 11ರವರೆಗೂ ಹಾಗೂ ಮಧ್ಯಾಹ್ನ 2 ರಿಂದ 3.30ವರೆಗೂ ವೈಮಾನಿಕ ಪ್ರದರ್ಶನ


ದೇಶದ ಆರ್ಥಿಕತೆಗೆ ಕೊಡುಗೆ ನೀಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ


100ಕ್ಕೂ ಅಧಿಕ ದೇಶಗಳು ಶೋದಲ್ಲಿ ಭಾಗಿಯಾಗುತ್ತಿದೆ. ಕಳೆದ ಎಲ್ಲಾ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್​ನಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು, ಲೀಡರ್‌ಗಳು ಆಗಮಿಸುತ್ತಿದ್ದಾರೆ.


ಇದನ್ನೂ ಓದಿ: Aero India: BMTC ವಿಶೇಷ ಬಸ್ ವ್ಯವಸ್ಥೆ, ಎಲ್ಲಿಂದ ಎಲ್ಲಿಗೆ ವಿವರ ಇಲ್ಲಿದೆ


ಅಮೆರಿಕಾ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ.

Published by:Mahmadrafik K
First published: