• Home
  • »
  • News
  • »
  • state
  • »
  • Aero India 2021: ಬೆಂಗಳೂರಿನಲ್ಲಿ ಏರ್ ಶೋ; ಈ ರಸ್ತೆಗಳಲ್ಲಿ ಇಂದಿನಿಂದ 3 ದಿನ ಸಂಚಾರ ನಿಷೇಧ

Aero India 2021: ಬೆಂಗಳೂರಿನಲ್ಲಿ ಏರ್ ಶೋ; ಈ ರಸ್ತೆಗಳಲ್ಲಿ ಇಂದಿನಿಂದ 3 ದಿನ ಸಂಚಾರ ನಿಷೇಧ

ಬೆಂಗಳೂರು ಏರ್ ಶೋ ವೈಮಾನಿಕ ಪ್ರದರ್ಶನ

ಬೆಂಗಳೂರು ಏರ್ ಶೋ ವೈಮಾನಿಕ ಪ್ರದರ್ಶನ

Bengaluru Air Show | ಬೆಂಗಳೂರಿನಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಚಾರದಲ್ಲಿ ಕೊಂಚ ಬದಲಾವಣೆಯಾಗಲಿದೆ. ಹೆಬ್ಬಾಳದ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್​ವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ.

  • Share this:

ಬೆಂಗಳೂರು (ಫೆ. 3): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರೋ ಇಂಡಿಯಾ ಏರ್ ಶೋ ನಡೆಯಲಿದೆ. ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೀವೇನಾದರೂ ಯಲಹಂಕ ಮಾರ್ಗವಾಗಿ ಸಂಚರಿಸುವುವವರಾದರೆ ಇಲ್ಲಿ ಗಮನಿಸಿ. ಬೆಂಗಳೂರಿನಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಚಾರದಲ್ಲಿ ಕೊಂಚ ಬದಲಾವಣೆಯಾಗಲಿದೆ. ಅಧಿಕ ಸಂಖ್ಯೆಯಲ್ಲಿ ಏರ್ ಶೋ ವೀಕ್ಷಿಸಲು ಜನರು ಬರುವುದರಿಂದ ಹೆಬ್ಬಾಳ ಮೇಲ್ಸೇತುವೆಯಿಂದ ಸಾದಹಳ್ಳಿ ಗೇಟ್ ವರೆಗೂ ಎರಡೂ ಸರ್ವಿಸ್ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಾಗಲೂರು ರೇವಾ ಕಾಲೇಜಿನ ಜಂಕ್ಷನ್ ನಿಂದ ಬಾಗಲೂರು ಕ್ರಾಸ್ ವರೆಗೂ ಸಂಚಾರ ನಿಷೇಧ ಹೇರಲಾಗಿದೆ.


ಹೆಬ್ಬಾಳ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್​ವರೆಗೂ ಸಂಚಾರ ನಿಷೇಧಿಸಲಾಗಿದೆ. ವಿಐಪಿ, ತುರ್ತುಸೇವೆ, ಪಾಸ್ ಹೊಂದಿರುವವರು ಹಾಗೂ ಬಿಎಂಟಿಸಿ ಬಸ್ ಗಳು ಮಾತ್ರ ಸಂಚಾರ ಮಾಡಲಿವೆ. ಲಾರಿ, ಟ್ರಕ್, ಭಾರೀ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಫೆ. 3ರಿಂದ ಫೆ. 5ರವರೆಗೂ ವಾಹನ ಸಂಚಾರದಲ್ಲಿ ಬದಲಾವಣೆಯಾಗಲಿದೆ.


ಏರ್ ಷೋ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಹೆಬ್ಬಾಳದ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್​ವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ. ಏರ್ ಶೋಗೆ ಹೋಗುವವರಿಗೆ, ಪಾಸ್ ಇದ್ದ ವಾಹನಗಳು ಹೋಗಲು ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ತುರ್ತು ಸೇವಾ ವಾಹನಗಳು, ಬಸ್​ಗಳು ಓಡಾಡೋಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇಂದು ಮುಂಜಾನೆ 5 ಗಂಟೆಯಿಂದ ನಗರಕ್ಕೆ ಎಂಟ್ರಿ ಕೊಡೋ ಎಲ್ಲಾ ಟ್ರಕ್​ಗಳಿಗೂ ನಿಷೇಧ ಹೇರಲಾಗಿದೆ. ರಾತ್ರಿ 10 ಗಂಟೆಯ ಬಳಿಕ ನಗರಕ್ಕೆ ಎಂಟ್ರಿ ಕೊಡಲು ಸೂಚನೆ ನೀಡಲಾಗಿದೆ. ಈಗಾಗಲೇ 1500ಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪಾರ್ಕಿಂಗ್ ಎಲ್ಲಾ ಏರ್ ಪೋರ್ಸ್ ಅಧಿಕಾರಿಗಳ ನಿಯಂತ್ರಣದಲ್ಲೇ ಇರುತ್ತದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ನ್ಯೂಸ್ 18 ಗೆ ತಿಳಿಸಿದ್ದಾರೆ.


ಇದನ್ನೂ ಓದಿ: Aero India 2021: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರ್ ಶೋ; ಏರೋ ಇಂಡಿಯಾಗೆ ರಾಜನಾಥ್ ಸಿಂಗ್ ಚಾಲನೆ


ಮೈ ನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಸಜ್ಜಾಗಿದೆ. ಕೊರೋನಾ ಆತಂಕದ ನಡುವೆ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನ ಇದಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಮತ್ತೆ ಸಾಕ್ಷಿಯಾಗಲಿದ್ದು, ಇಂದು ಬೆಳಗ್ಗೆ 9.30ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋಗೆ ಚಾಲನೆ ನೀಡಲಿದ್ದಾರೆ. ಏರ್​ ಶೋನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳ ಪ್ರದರ್ಶನಗೊಳ್ಳಲಿವೆ. ಡಕೋಟ , ಸುಖೋಯ್, ರಫೆಲ್, ಎಲ್​ಸಿಎಚ್​ಗಳಿಂದ ಏರ್ ಶೋ ನಡೆಯಲಿವೆ.


5 ದಿನಗಳ ಕಾಲ ನಡೆಯಬೇಕಿದ್ದ ಏರ್ ಶೋವನ್ನು ಕೊರೋನಾ ಹಿನ್ನೆಲೆಯಲ್ಲಿ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕೊರೋನಾ ನೆಗೆಟಿವ್ ಪರೀಕ್ಷಾ ವರದಿಯೊಂದಿಗೆ ಪ್ರತಿದಿನ 3 ಸಾವಿರ ಜನರಿಗೆ ಏರ್ ಶೋ ವೀಕ್ಷಿಸಲು ಆಗಮಿಸಲು ಅವಕಾಶವಿರಲಿದೆ. ಹಾಗೇ, ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಜನರು ಆಗಮಿಸಲು ಅವಕಾಶ ನೀಡಲಾಗಿದೆ.

Published by:Sushma Chakre
First published: