Aero India 2021: ಇಂದು ಎರಡನೇ ದಿನದ ಏರ್ ​ಶೋ; ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

 ಏರ್ ಶೋ ಪಾರ್ಕಿಂಗ್​​ನಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.  ಪ್ರತೀ ಪಾರ್ಕಿಂಗ್  ಲೇಸ್ ನಲ್ಲೂ ಒಂದೊಂದು ಅಗ್ನಿಶಾಮಕ ತಂಡವನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ಸ್ಥಳದಲ್ಲೇ ಇರುವಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ಏರ್ ಶೋ ವೈಮಾನಿಕ ಪ್ರದರ್ಶನ

ಬೆಂಗಳೂರು ಏರ್ ಶೋ ವೈಮಾನಿಕ ಪ್ರದರ್ಶನ

  • Share this:
ಬೆಂಗಳೂರು(ಫೆ.04): ನಿನ್ನೆಯಿಂದ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಇಂದು ಎರಡನೇ ದಿನದ ಏರ್​ ಶೋ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ವೈಮಾನಿಕ ಪ್ರದರ್ಶನ ಶುರುವಾಗಲಿದೆ. ಇಂದು ಬ್ಯುಸಿನೆಸ್ ವಿಸಿಟರ್ಸ್​​​ಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ವಿದೇಶಿಗರ ಜೊತೆ ಸಾಕಷ್ಟು ರಕ್ಷಣಾ ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂಸದ ತೇಜಸ್ವಿ ಸೂರ್ಯ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಈ ತೇಜಸ್​ ಹೆಚ್ ಎ ಎಲ್ ನಿರ್ಮಿತ ಲಘು ಯುದ್ಧ ವಿಮಾನವಾಗಿದೆ.  ಹೆಚ್ಎಎಲ್‌ ನಿಂದ ಮಹತ್ವದ ಪತ್ರಿಕಾಗೋಷ್ಠಿ ಕೂಡಾ ಇಂದೇ ನಡೆಯಲಿದೆ. ಏರ್ ಶೋನಲ್ಲಿ ಹೆಚ್ ಎ ಎಲ್ ನಡೆಸಿರುವ ವಹಿವಾಟಿನ ಮಾಹಿತಿಯನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Mamata Banerjee: ಬಿಜೆಪಿ ಭ್ರಷ್ಟ ನಾಯಕರನ್ನು ಖರೀದಿ ಮಾಡಬಹುದೇ ಹೊರತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ; ಮಮತಾ ಬ್ಯಾನರ್ಜಿ

ಇನ್ನು, ಏರ್ ಶೋ ಪಾರ್ಕಿಂಗ್​​ನಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ.  ಪ್ರತೀ ಪಾರ್ಕಿಂಗ್  ಲೇಸ್ ನಲ್ಲೂ ಒಂದೊಂದು ಅಗ್ನಿಶಾಮಕ ತಂಡವನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ಸ್ಥಳದಲ್ಲೇ ಇರುವಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್, ದಾಖಲೆಗಳ ಪರೀಕ್ಷೆ ನಂತರವಷ್ಟೇ ಶೋ ನಡೆಯುವ ಸ್ಥಳಕ್ಕೆ ತೆರಳಲು ಅನುಮತಿ ನೀಡಲಾಗುತ್ತದೆ. ಹೆಚ್ಚುವರಿ ಫೈರ್ ಎಕ್ಸ್ಟಿಂಗಿಶರ್ಸ್ ಲಭ್ಯವಿರುವಂತೆ ತಯಾರಿ ನಡೆಸಲಾಗಿದೆ.

5 ದಿನಗಳ ಕಾಲ ನಡೆಯಬೇಕಿದ್ದ ಏರ್ ಶೋವನ್ನು ಕೊರೋನಾ ಹಿನ್ನೆಲೆಯಲ್ಲಿ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕೊರೋನಾ ನೆಗೆಟಿವ್ ಪರೀಕ್ಷಾ ವರದಿಯೊಂದಿಗೆ ಪ್ರತಿದಿನ 3 ಸಾವಿರ ಜನರಿಗೆ ಏರ್ ಶೋ ವೀಕ್ಷಿಸಲು ಆಗಮಿಸಲು ಅವಕಾಶವಿರಲಿದೆ. ಹಾಗೇ, ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಜನರು ಆಗಮಿಸಲು ಅವಕಾಶ ನೀಡಲಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ಏರ್ ಶೋ ವೇದಿಕೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಒಪ್ಪಂದಗಳು ನಡೆಯಲಿವೆ.

ಏರ್ ಷೋ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಹೆಬ್ಬಾಳದ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್​ವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ. ಏರ್ ಶೋಗೆ ಹೋಗುವವರಿಗೆ, ಪಾಸ್ ಇದ್ದ ವಾಹನಗಳು ಹೋಗಲು ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ತುರ್ತು ಸೇವಾ ವಾಹನಗಳು, ಬಸ್​ಗಳು ಓಡಾಡೋಕೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.  ಮುಂಜಾನೆ 5 ಗಂಟೆಯಿಂದ ನಗರಕ್ಕೆ ಎಂಟ್ರಿ ಕೊಡೋ ಎಲ್ಲಾ ಟ್ರಕ್​ಗಳಿಗೂ ನಿಷೇಧ ಹೇರಲಾಗಿದೆ. ರಾತ್ರಿ 10 ಗಂಟೆಯ ಬಳಿಕ ನಗರಕ್ಕೆ ಎಂಟ್ರಿ ಕೊಡಲು ಸೂಚನೆ ನೀಡಲಾಗಿದೆ.

ಈಗಾಗಲೇ 1500ಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪಾರ್ಕಿಂಗ್ ಎಲ್ಲಾ ಏರ್ ಪೋರ್ಸ್ ಅಧಿಕಾರಿಗಳ ನಿಯಂತ್ರಣದಲ್ಲೇ ಇರುತ್ತದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ನ್ಯೂಸ್ 18 ಗೆ ತಿಳಿಸಿದ್ದಾರೆ.
Published by:Latha CG
First published: