ಬೆಂಗಳೂರು(ಫೆ.04): ಇಂದು ಯಲಹಂಕ ವಾಯುನೆಲೆಯಲ್ಲಿ ಎರಡನೇ ದಿನದ ಏರ್ ಶೋ ನಡೆಯುತ್ತಿದೆ. ಸಂಸದ ತೇಜಸ್ವಿ ಸೂರ್ಯ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಜೀವನದಲ್ಲಿ ಸಿಗುವ ಅತ್ಯದ್ಭುತ ಅನುಭವ ಇದು. ಸಾವಿರ ಕಿಲೋಮೀಟರ್ ವೇಗದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಸಾಗಿ ಬಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಎಲ್ಸಿಎ ತೇಜಸ್ ನಮ್ಮ ಬೆಂಗಳೂರಿನ ಎಚ್ಎಎಲ್ ನಲ್ಲಿ ಭಾರತದ ಇಂಜಿನಿಯರ್ ಗಳು ತಯಾರಿಸಿರೋದು. ಬೆಂಗಳೂರಿನ ಭಾರತದ ಹೆಮ್ಮೆ ಇದು. ಇದು ಡಿಆರ್ಡಿಒದ ಎಡಿಎ ಡಿಸೈನ್ ಮೂಲಕ ಕಾರ್ಯರೂಪಕ್ಕೆ ಬಂದಿದೆ. ಎಲ್ಸಿಎ ತೇಜಸ್ 2003 ರಲ್ಲಿ ವಾಜಪೇಯಿ ಅವರು ಹೆಸರು ಕೊಟ್ಟದ್ದು. ಮಾರ್ಕ್ 2 ತೇಜಸ್ ಬರ್ತಾ ಇದೆ. ಪ್ರಧಾನಿ ಮೋದಿ 48 ಸಾವಿರ ಕೋಟಿಯ ಆರ್ಡರ್ನ್ನು ಎಚ್ ಎ ಎಲ್ ಗೆ ನೀಡಿದ್ದಾರೆ. 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿದೆ ಎಂದು ಹೇಳಿದರು.
ತೇಜಸ್ ವಿಮಾನಗಳ ರಫ್ತಿಗೆ ಅನುಮತಿ ನೀಡಿದ ರಕ್ಷಣಾ ಇಲಾಖೆ; ಮತ್ತೊಂದು ತಯಾರಿಕಾ ಘಟಕ ಆರಂಭಿಸಲು ಎಚ್ಎಎಲ್ ಚಿಂತನೆ
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಮತ್ತು ಕನ್ನಡಿಗರ ಪರವಾಗಿ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ತಿಳಿಸಿದರು. 250 ಕ್ಕೂ ಹೆಚ್ಚು ಸಣ್ಣ ಸಂಸ್ಥೆಗಳು ಇದರ ಭಾಗಗಳನ್ನು ತಯಾರಿಸಿವೆ. ಶೇಕಡಾ 70ರಷ್ಟು ಭಾರತೀಯ ತಯಾರಿಕಾ ವಸ್ತುಗಳೇ ಆಗಿವೆ. ಪ್ರಪಂಚದಲ್ಲಿ ಕೆಲವೇ ನಗರಗಳು ಅಂತಾರಾಷ್ಟ್ರೀಯ ಮಟ್ಟದ ಫೈಟರ್ ಜೆಟ್ ತಯಾರಿಸಿವೆ. ಅವುಗಳಲ್ಲಿ ಬೆಂಗಳೂರು ಕೂಡಾ ಒಂದು ಎಂದು ಸಂತಸ ವ್ಯಕ್ತಪಡಿಸಿದರು.
20 ವರ್ಷದ ಪ್ರಯತ್ನದ ಫಲ ಈ ತೇಜಸ್. ನನ್ನನ್ನ ಸುರಕ್ಷಿತವಾಗಿ ಕರ್ಕೊಂಡು ಹೋಗಿ ಬಂದ ಪೈಲಟ್ ಗುಣಶೇಖರ್ ಗೆ ಧನ್ಯವಾದ. ತಲೆಯಿಂದ ರಕ್ತವೆಲ್ಲಾ ದೇಹದ ಕೆಳಭಾಗಕ್ಕೆ ಬಂದಿರುತ್ತೆ. ಆಗ ಬೆವರುತ್ತೇವೆ, ಉಸಿರಾಡೋದು ಕಷ್ಟ. ಅಂತಹ ಸಂದರ್ಭದಲ್ಲಿ ಶತ್ರುವನ್ನು ಗುರುತಿಸಿ ಫೈಟ್ ಮಾಡೋದು ಸುಲಭವಲ್ಲ. ನಮ್ಮ ಪೈಲಟ್ ಗಳಿಗೆ ಸಲಾಂ ಎಂದರು.
ಇಷ್ಟೊಂದು ಎನರ್ಜೆಟಿಕ್ ಆದ ವ್ಯಕ್ತಿಯೊಂದಿಗೆ ಹಾರಾಟ ನಡೆಸಿದ್ದು ಸಂತಸ ತಂದಿದೆ ಎಂದು ಪೈಲಟ್ ಗುಣಶೇಖರ್ ಅವರೂ ಕೂಡ ಖುಷಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ