• Home
  • »
  • News
  • »
  • state
  • »
  • Aero India 2021: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರ್ ಶೋ; ಏರೋ ಇಂಡಿಯಾಗೆ ರಾಜನಾಥ್ ಸಿಂಗ್ ಚಾಲನೆ

Aero India 2021: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರ್ ಶೋ; ಏರೋ ಇಂಡಿಯಾಗೆ ರಾಜನಾಥ್ ಸಿಂಗ್ ಚಾಲನೆ

ಬೆಂಗಳೂರು ಏರ್​ ಶೋ ರಿಹರ್ಸಲ್

ಬೆಂಗಳೂರು ಏರ್​ ಶೋ ರಿಹರ್ಸಲ್

Bengaluru Air Show: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 3 ದಿನ ನಡೆಯುವ ಏರ್ ಶೋಗೆ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋಗೆ ಚಾಲನೆ ನೀಡಿದ್ದಾರೆ. ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ.

ಮುಂದೆ ಓದಿ ...
  • Share this:

ಬೆಂಗಳೂರು (ಫೆ. 3): ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯಲಿದೆ. ಮೈ ನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಸಜ್ಜಾಗಿದೆ. ಕೊರೋನಾ ಆತಂಕದ ನಡುವೆ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನ ಇದಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಮತ್ತೆ ಸಾಕ್ಷಿಯಾಗಲಿದ್ದು, ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋಗೆ ಚಾಲನೆ ನೀಡಿದ್ದಾರೆ.


ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ- 2021 ಧ್ವಜ ಹೊತ್ತು ಎಲ್​ಯುಎಚ್ ಹೆಲಿಕಾಪ್ಟರ್​ಗಳು ಚಾಲನೆಗೊಳ್ಳಲಿವೆ. ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. ಡಕೋಟ , ಸುಖೋಯ್, ರಫೆಲ್, ಎಲ್​ಸಿಎಚ್​ಗಳಿಂದ ಏರ್ ಶೋ ನಡೆಯಲಿವೆ.


5 ದಿನಗಳ ಕಾಲ ನಡೆಯಬೇಕಿದ್ದ ಏರ್ ಶೋವನ್ನು ಕೊರೋನಾ ಹಿನ್ನೆಲೆಯಲ್ಲಿ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕೊರೋನಾ ನೆಗೆಟಿವ್ ಪರೀಕ್ಷಾ ವರದಿಯೊಂದಿಗೆ ಪ್ರತಿದಿನ 3 ಸಾವಿರ ಜನರಿಗೆ ಏರ್ ಶೋ ವೀಕ್ಷಿಸಲು ಆಗಮಿಸಲು ಅವಕಾಶವಿರಲಿದೆ. ಹಾಗೇ, ವಸ್ತು ಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರ ಜನರು ಆಗಮಿಸಲು ಅವಕಾಶ ನೀಡಲಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ಏರ್ ಶೋ ವೇದಿಕೆಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಒಪ್ಪಂದಗಳು ನಡೆಯಲಿವೆ.


ಇದನ್ನೂ ಓದಿ: ಯುಗಾದಿ ಬಳಿಕ ಉತ್ತರ ಕರ್ನಾಟಕದವರೇ ರಾಜ್ಯದ ಸಿಎಂ ಆಗುತ್ತಾರೆ; ಬಿಜೆಪಿ ಶಾಸಕ ಯತ್ನಾಳ್ ಭವಿಷ್ಯ


ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಏರ್ ಶೋ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಏರ್ ಶೋ ಭದ್ರತೆಗಾಗಿ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಿದ ಪೊಲೀಸರು ಯಲಹಂಕ ವಾಯು ನೆಲೆ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ನಾಲ್ಕು ಹೆಚ್ಚುವರಿ ಪೊಲೀಸ್ ಆಯುಕ್ತರು , 18 ಡಿಸಿಪಿಗಳು , ಎಸಿಪಿ, ಇನ್ಸ್‌ಪೆಕ್ಟರ್, ಪಿಎಸ್ಐಗಳು ಸೇರಿ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.


ಹೆಚ್ಚುವರಿಯಾಗಿ 52 ಕೆಎಸ್ಆರ್ ಪಿ ತುಕಡಿ, 26 ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ವಾಯುನೆಲೆಯ ಪ್ರವೇಶ ದ್ವಾರದ ಮುಂದೆ 1500 ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಏರ್ ಷೋ ವೀಕ್ಷಣೆಗೆ ಗಣ್ಯಾತಿಗಣ್ಯರು ಆಗಮಿಸುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.


ಬೆಂಗಳೂರಿನಲ್ಲಿ ಏರ್ ಷೋ ಹಿನ್ನಲೆಯಲ್ಲಿ ಇಂದಿನಿಂದ ಮೂರು ದಿನಗಳ ಸಂಚಾರದಲ್ಲಿ ಕೊಂಚ ಬದಲಾವಣೆಯಾಗಲಿದೆ. ಅಧಿಕ ಸಂಖ್ಯೆಯಲ್ಲಿ ಏರ್ ಶೋ ವೀಕ್ಷಿಸಲು ಜನ ಬರುವ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆಯಿಂದ ಸಾದಹಳ್ಳಿ ಗೇಟ್​ವರೆಗೂ ಎರಡೂ ಸರ್ವಿಸ್ ರಸ್ತೆಗಳು ಏಕಮುಖ ಸಂಚಾರವಾಗಲಿವೆ. ಬಾಗಲೂರು ರೇವಾ ಕಾಲೇಜಿನಿಂದ ಜಂಕ್ಷನ್ ನಿಂದ ಬಾಗಲೂರು ಕ್ರಾಸ್ ವರೆಗೂ ಸಂಚಾರ ನಿಷೇಧಿಸಲಾಗಿದೆ. ಹೆಬ್ಬಾಳ ಫ್ಲೈ ಓವರ್​ನಿಂದ ಸಾದಹಳ್ಳಿ ಗೇಟ್ ವರೆಗೂ ಸಂಚಾರ ನಿಷೇಧಿಸಲಾಗಿದೆ.

Published by:Sushma Chakre
First published: