• Home
  • »
  • News
  • »
  • state
  • »
  • Aero India 2021: ಪ್ರಧಾನಿಯ ಆತ್ಮನಿರ್ಭರ ಭಾರತದ ಕನಸು ಕರ್ನಾಟಕದಲ್ಲಿ ಸಾಕಾರವಾಗುತ್ತಿದೆ; ಸಿಎಂ ಯಡಿಯೂರಪ್ಪ

Aero India 2021: ಪ್ರಧಾನಿಯ ಆತ್ಮನಿರ್ಭರ ಭಾರತದ ಕನಸು ಕರ್ನಾಟಕದಲ್ಲಿ ಸಾಕಾರವಾಗುತ್ತಿದೆ; ಸಿಎಂ ಯಡಿಯೂರಪ್ಪ

ಬೆಂಗಳೂರು ಏರ್ ಶೋನಲ್ಲಿ ಸಿಎಂ ಯಡಿಯೂರಪ್ಪ, ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು ಏರ್ ಶೋನಲ್ಲಿ ಸಿಎಂ ಯಡಿಯೂರಪ್ಪ, ರಕ್ಷಣಾ ಸಚಿವ ರಾಜನಾಥ್ ಸಿಂಗ್

Bangalore Air Show: ದೇವನಹಳ್ಳಿಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ಸಿದ್ಧವಾಗುತ್ತಿದೆ. ಪ್ರಧಾನಿ‌‌ ನರೇಂದ್ರ ಮೋದಿ ಆತ್ಮನಿರ್ಭರ ಭಾರತದ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ಳುತ್ತಿದೆ ಎಂದು ಸಿಎಂ ಯಡಿಯೂರಪ್ಪ ಏರ್ ಶೋನಲ್ಲಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಫೆ. 3): ವಿಶ್ವದ ಮೊದಲ ಹೈಬ್ರಿಡ್ ಏರ್ ಶೋ ಇಂದಿನಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದೆ. ಈ ಏರೋ ಇಂಡಿಯಾ-2021ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಭಾರತದ ಶೇ. 65ರಷ್ಟು ಯುದ್ಧ ವಿಮಾನಗಳು ಕರ್ನಾಟಕದಲ್ಲೇ ಸಿದ್ಧವಾಗುತ್ತಿವೆ. ದೇವನಹಳ್ಳಿಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ಸಿದ್ಧವಾಗುತ್ತಿದೆ. ಎರಡು ಅಂತಾರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ಏರ್​ಪೋರ್ಟ್​ಗಳು ಕರ್ನಾಟಕದಲ್ಲಿ ಇವೆ. ಪ್ರಧಾನಿ‌‌ ನರೇಂದ್ರ ಮೋದಿ ಆತ್ಮನಿರ್ಭರ ಭಾರತದ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.


ಕೊರೋನಾ ಅಟ್ಟಹಾಸದ ನಡುವೆಯೇ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದೆ. ರಾಜ್ಯ ಸರ್ಕಾರ ಎಲ್ಲರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. 540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. ಬೆಂಗಳೂರು ವಿದ್ಯಾಭ್ಯಾಸ, ಸ್ಟಾರ್ಟ್ ಅಪ್, ವಹಿವಾಟಿಗೆ ಅತ್ಯುತ್ತಮ ಸ್ಥಳವಾಗಿದೆ. ಭಾರತದ‌ ಒಟ್ಟಾರೆ ವೈಮಾನಿಕ ತಯಾರಿಕೆಯಲ್ಲಿ ಶೇ. 65ರಷ್ಟು ಕರ್ನಾಟಕದಲ್ಲೇ ಆಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ಏರ್ ಶೋ ನಮ್ಮ ರಾಜ್ಯದ ಹೆಮ್ಮೆಯಾಗಿದೆ. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲೂ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ನಿರ್ಧರಿಸಿದ್ದಕ್ಕೆ ರಕ್ಷಣಾ ಇಲಾಖೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯುತ್ತಿದೆ. ಮೈ ನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಸಾಕ್ಷಿಯಾಗಲಿದೆ. ಕೊರೋನಾ ಆತಂಕದ ನಡುವೆ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನ ಇದಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಲೋಹದ ಹಕ್ಕಿಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ.


ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ- 2021 ಧ್ವಜ ಹೊತ್ತು ಎಲ್​ಯುಎಚ್ ಹೆಲಿಕಾಪ್ಟರ್​ಗಳು ಚಾಲನೆಗೊಳ್ಳಲಿವೆ. ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳ ಪ್ರದರ್ಶನಗೊಳ್ಳಲಿವೆ. ಡಕೋಟ , ಸುಖೋಯ್, ರಫೆಲ್, ಎಲ್​ಸಿಎಚ್​ಗಳಿಂದ ಏರ್ ಶೋ ನಡೆಯಲಿವೆ.

Published by:Sushma Chakre
First published: