Fire in Air Show: ಏರೋ ಶೋನಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಬೆಂಕಿ; ಸ್ಫೋಟಗೊಳ್ಳುತ್ತಿವೆ ಕಾರುಗಳು!

Air show 2019: ಏರ್​ಪೋರ್ಟ್​​ ರಸ್ತೆಯಲ್ಲಿ ಭಾರೀ ಟ್ರಾಫಿಕ್​ ಜ್ಯಾಮ್​ ಸಂಭವಿಸಿದೆ. ಜನರು ಪ್ರಾಣಭಯದಿಂದ ತಮ್ಮ ತಮ್ಮ ವಾಹನ ತೆಗೆದುಕೊಂಡು ಅಲ್ಲಿಂದ ಹೊರ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಜನರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ ಎನ್ನುವ ಕಾರಣಕ್ಕೆ ಮಾಧ್ಯಮಗಳ ಮೇಲೆ ನಿರ್ಭಂದ ಹೇರಲಾಗಿದೆ.

Rajesh Duggumane | news18
Updated:February 23, 2019, 2:06 PM IST
Fire in Air Show: ಏರೋ ಶೋನಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಬೆಂಕಿ; ಸ್ಫೋಟಗೊಳ್ಳುತ್ತಿವೆ ಕಾರುಗಳು!
ಬೆಂಕಿಗೆ ಆಹುತಿಯಾದ ಕಾರುಗಳು
Rajesh Duggumane | news18
Updated: February 23, 2019, 2:06 PM IST
ಬೆಂಗಳೂರು (ಫೆ.23): ಇಲ್ಲಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಶೋನಲ್ಲಿ ಸಂಭವಿಸಿದ ಅಗ್ನಿ ಅವಘಢಕ್ಕೆ ಕಾರು ಹಾಗೂ ಬೈಕ್​ಗಳು ಹೊತ್ತಿ ಉರಿಯುತ್ತಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇಷ್ಟಾದರೂ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಜನರು ಪ್ರಾಣಭಯದಿಂದ ಓಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.  ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿಂಯಿಂದ ಡೀಸೆಲ್​ ತುಂಬಿದ ಕಾರುಗಳ ಸ್ಫೋಟಗೊಳ್ಳುತ್ತಿವೆ. ಗೇಟ್​ ನಂಬರ್​ 5ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇನ್ನು, ಏರ್​ಪೋರ್ಟ್​​ ರಸ್ತೆಯಲ್ಲಿ ಭಾರೀ ಟ್ರಾಫಿಕ್​ ಜ್ಯಾಮ್​ ಸಂಭವಿಸಿದೆ. ಜನರು ಪ್ರಾಣಭಯದಿಂದ ತಮ್ಮ ತಮ್ಮ ವಾಹನ ತೆಗೆದುಕೊಂಡು ಅಲ್ಲಿಂದ ಹೊರ ಹೋಗಲು ಪ್ರಯತ್ನಿಸುತ್ತಿದ್ದಾರೆ. ಜನರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ ಎನ್ನುವ ಕಾರಣಕ್ಕೆ ಮಾಧ್ಯಮಗಳ ಮೇಲೆ ನಿರ್ಭಂದ ಹೇರಲಾಗಿದೆ.

ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ, 100 ಕ್ಕೂ ಹೆಚ್ಚು ಕಾರುಗಳು ಭಸ್ಮ; ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತ

200ಕ್ಕೂ ಹೆಚ್ಚು ಕಾರುಗಳು ಸುಟ್ಟುಹೋಗಿವೆ. ಪಾರ್ಕ್​ ಮಾಡಲಾದ ಕೆಲವು ಕಾರುಗಳನ್ನು ತೆಗೆಯುವ ಮೂಲಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಒಣಗಿದ ಹುಲ್ಲು ಮತ್ತು ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಬೆಂಕಿ ನಿಯಂತ್ರಿಸುವುದು ಕಷ್ಟವಾಗಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.First published:February 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...