• Home
  • »
  • News
  • »
  • state
  • »
  • Aerial Ladder Platform: ಸಿಲಿಕಾನ್ ಸಿಟಿಗೆ ಬಂತು ಅತಿ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್​​ಫಾರಂ ವಾಹನ

Aerial Ladder Platform: ಸಿಲಿಕಾನ್ ಸಿಟಿಗೆ ಬಂತು ಅತಿ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್​​ಫಾರಂ ವಾಹನ

ಏರಿಯಲ್ ಲ್ಯಾಡರ್

ಏರಿಯಲ್ ಲ್ಯಾಡರ್

90 ಮೀಟರ್ ಎತ್ತರದ ಲ್ಯಾಡರ್ ವಾಹನವುಳ್ಳ ನಗರ ಬೆಂಗಳೂರು ಆಗಲಿದ್ದು, ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 90 ಮೀಟರ್ ಎತ್ತರದ ಲ್ಯಾಡರ್ ವಾಹನವಿತ್ತು.

  • News18 Kannada
  • Last Updated :
  • Bangalore [Bangalore], India
  • Share this:

ಬಹುಮಹಡಿ ಕಟ್ಟಡಗಳಲ್ಲಿ (multi floor apartment) ಸಂಭವಿಸುವ ಆಗ್ನಿ ಅವಘಡಗಳನ್ನ (Fire Incidents) ನಂದಿಸುವ ಅತ್ಯಾಧುನಿಕ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ (Aerial Ladder Platform) ವಾಹನ ಬೆಂಗಳೂರು ನಗರ ಅಗ್ನಿಶಾಮಕ ಇಲಾಖೆ (Fire fighter Department) ಕೈ ಸೇರಿದೆ. ನಗರದಲ್ಲಿ ಬಹುಮಹಡಿಗಳ ಗಗನಚುಂಬಿ ಕಟ್ಟಡಗಳು ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಸಲುವಾಗಿ ಏರಿಯಲ್ ಲ್ಯಾಡರ್ ವಾಹನವನ್ನ ಅಗ್ನಿಶಾಮಕ ಇಲಾಖೆ ಹೊಂದಿದೆ. ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ವಾಹನದ ಮೂಲಕ 90 ಮೀಟರ್ ಎತ್ತರದಲ್ಲೂ ಬೆಂಕಿ ನಂದಿಸಲು ಅಥವಾ ರಕ್ಷ ಣಾ ಕಾರ್ಯಾಚರಣೆ (Rescue Operation) ನಡೆಸಲು ಈ ವಾಹನದ ಮೂಲಕ ಸಾಧ್ಯ. ನಗರದಲ್ಲಿ ಈ ಹಿಂದೆ ಕೆಲವು ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ವೇಳೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ತಾಪತ್ರಯ ಪಡುವಂತಾಗಿತ್ತು. ಅಲ್ಲದೇ ನೆಲಮಹಡಿಯಿಂದ ಹತ್ತಾರು ಮಹಡಿಗಳ ಮೇಲೆ ಬೆಂಕಿ ನಂದಿಸಿ ಹತೋಟಿಗೆ ತರಲು ಪರದಾಟ ನಡೆಸುವಂತಿತ್ತು.


ಇದೀಗ ಇಂತಹ ಪರದಾಟಕ್ಕೆ ಬ್ರೇಕ್ ಬಿದ್ದಿದ್ದು, 90 ಮೀಟರ್ ಎತ್ತರದವರೆಗೂ ವಿಸ್ತರಿಸಬಹುದಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ಇಬ್ಬರು ಸಿಬ್ಬಂದಿ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ನಂದಿಸಲು ಸಾಧ್ಯ.


25 ಕೋಟಿಗೂ ಅಧಿಕ ಮೊತ್ತದ ಏರಿಯಲ್ ಲ್ಯಾಡರ್


ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ವಾಹನವನ್ನ ಫಿನ್ಲೆಂಡ್‌ನಿಂದ ಸುಮಾರು 25 ಕೋಟಿಗೂ ಅಧಿಕ ಮೊತ್ತದಲ್ಲಿ ಖರೀದಿಸಿದ ಅಗ್ನಿಶಾಮಕ ಇಲಾಖೆ ಫಿನ್ಲೆಂಡ್‌ನಿಂದ ಮುಂಬೈ ಮೂಲಕ ಬೆಂಗಳೂರಿಗೆ ವಾಹನ ತರಿಸಿದ್ದಾರೆ.


90 ಮೀಟರ್ ಎತ್ತರದ ಲ್ಯಾಡರ್


ಸಂಪೂರ್ಣ ಹೈಡ್ರಾಲಿಕ್ ವ್ಯವಸ್ಥೆ ಇರುವ ಲ್ಯಾಡರ್ ವಾಹನದಲ್ಲಿ 90 ಮೀಟರ್ ಎತ್ತರದಲ್ಲಿ ಅನಾಯಾಸವಾಗಿ ಸಿಬ್ಬಂದಿ ಕೆಲಸ ನಿರ್ವಹಿಸಬಹುದು ಹಾಗೂ ತುರ್ತು ಸಮಯದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ರಕ್ಷಣಾ ಕಾರ್ಯಚರಣೆ ಕೂಡ ನಡೆಸಬಹುದು.


2020 ರಲ್ಲಿ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಅಗ್ನಿಶಾಮಕ ಇಲಾಖೆ ಮುಂದಾಗಿತ್ತು. ಅನಂತರ ಸ್ವಲ್ಪ ತಡವಾದರೂ ಈಗ ಲ್ಯಾಡರ್ ವಾಹನ ಅಗ್ನಿಶಾಮಕ ಇಲಾಖೆ ಕೈ ಸೇರಿದೆ.


Aerial Ladder Platform introduce to bengaluru kmtv mrq
ಏರಿಯಲ್ ಲ್ಯಾಡರ್


ಸೆಪ್ಟೆಂಬರ್ 20 ರಂದು ಏರಿಯಲ್ ಲ್ಯಾಡರ್ ವಾಹನವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲ್ಯಾಡರ್ ವಾಹನ ಲೋಕಾರ್ಪಣೆ ಮಾಡಿ, ಅಗ್ನಿಶಾಮಕ ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ. ಈ ಹಿಂದಿನ ಕೆಲವು ಘಟನೆಗಳ ಬಳಿಕ ಎಚ್ಚೆತ್ತ ಸರ್ಕಾರ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಮುಂದಾಗಿತ್ತು.


ಇದನ್ನೂ ಓದಿ: Karnataka Assembly Elections: ಸರ್ವಜನಾಂಗದ ತೋಟ ಸರ್ವಜ್ಞನಗರ! ಕಾಂಗ್ರೆಸ್ ಕೋಟೆಯಲ್ಲಿ ಈ ಬಾರಿ ಗೆಲ್ಲೋದ್ಯಾರು?


ಏರಿಯಲ್ ಲ್ಯಾಡರ್ ಹೊಂದಿರುವ ನಗರ


ಇನ್ನೂ ದೇಶದಲ್ಲಿ ಏರಿಯಲ್ ಲ್ಯಾಡರ್ ವಾಹನ ಹೊಂದಿರುವ ಎರಡನೇ ನಗರ ಎನ್ನುವ ಗರಿಮೆಗೆ ಸಿಲಿಕಾನ್ ಸಿಟಿ ಬೆಂಗಳೂರು ಪಾತ್ರವಾಗಲಿದೆ. 90 ಮೀಟರ್ ಎತ್ತರದ ಲ್ಯಾಡರ್ ವಾಹನವುಳ್ಳ ನಗರ ಬೆಂಗಳೂರು ಆಗಲಿದ್ದು, ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 90 ಮೀಟರ್ ಎತ್ತರದ ಲ್ಯಾಡರ್ ವಾಹನವಿತ್ತು.


ಅಗ್ನಿಶಾಮಕ ಇಲಾಖೆ ಬತ್ತಳಿಕೆ ಸೇರಿದ ಲ್ಯಾಡರ್


ಇದೀಗ ಏರಿಯಲ್ ಲ್ಯಾಡರ್ ವಾಹನ ನಮ್ಮ ಬೆಂಗಳೂರು ಅಗ್ನಿಶಾಮಕ ಇಲಾಖೆ ಅಂಗಳಕ್ಕೂ ಲಗ್ಗೆ ಇಟ್ಟಿದೆ. ನಗರದಲ್ಲಿ ದಿನೇ ದಿನೇ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗಗನಚುಂಬಿ ಕಟ್ಟಡಗಳು ಹೆಚ್ಚಾಗುತ್ತಿದ್ದಂತೆ ಅತ್ಯಾಧುನಿಕ ಬೆಂಕಿ ನಂದಿಸುವ ವಾಹನಗಳನ್ನ ತನ್ನ ಬತ್ತಳಿಕೆಯಲ್ಲಿ ಇರಿಸಿಕೊಳ್ಳಲು ಅಗ್ನಿಶಾಮಕ ಇಲಾಖೆ ಮುಂದಾಗಿದೆ‌. ಏರಿಯಲ್ ಲ್ಯಾಡರ್ ವಾಹನದ (Arial Ladder vehicle) ಬಗ್ಗೆ ಅಗ್ನಿಶಾಮಕ ಇಲಾಖೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.


ಇದನ್ನೂ ಓದಿ:  Assembly Election 2023: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಚುನಾವಣಾ ತಂತ್ರ; ಟಗರಿಗೆ ಯಾರಾಗ್ತಾರೆ ಎದುರಾಳಿ?

 ಇತ್ತೀಚೆಗೆ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ತಾಯಿ-ಮಗಳು ಮನೆಯಿಂದ ಹೊರ ಬರಲಾಗದೇ ಸಾವನ್ನಪ್ಪಿದ್ದರು. ಬಾಲ್ಕನಿಗೆ ಬಂದಿದ್ರೂ ಇವರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಏರಿಯಲ್  ಲ್ಯಾಡರ್ ಬಳಕೆ ಆಗುತ್ತದೆ.

Published by:Mahmadrafik K
First published: