ಸರ್ಕಾರಿ ಸಭೆಯಲ್ಲಿ ಅಧಿಕಾರಿಗಳ ಪಾರ್ನ್ ವೀಕ್ಷಣೆ; ಆನ್​ಲೈನ್ ಶಾಪಿಂಗ್

news18
Updated:July 11, 2018, 8:13 PM IST
ಸರ್ಕಾರಿ ಸಭೆಯಲ್ಲಿ ಅಧಿಕಾರಿಗಳ ಪಾರ್ನ್ ವೀಕ್ಷಣೆ; ಆನ್​ಲೈನ್ ಶಾಪಿಂಗ್
news18
Updated: July 11, 2018, 8:13 PM IST
ಮಂಜುನಾಥ ಯಡಳ್ಳಿ, ನ್ಯೂಸ್ 18 ಕನ್ನಡ

ಧಾರವಾಡ( ಜುಲೈ 11) : ಜಿಲ್ಲಾ ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳನ್ನ ಬಗೆ ಹರಿಸ ಬೇಕಿದ್ದ ಅಧಿಕಾರಿಗಳಯ ಮೊಬೈಲ್ ನಲ್ಲಿ ಅಶ್ಲಿಲ್ ಪೊಟೋ ನೋಡುತ್ತ ಬೇಕಾಬಿಟ್ಟಿ ಕಾಲಹರಣ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ನಡೆದಿತ್ತು. ಈ ಸಭೆಯ ವೇಳೆಯಲ್ಲಿಯೇ ಅಶ್ಲೀಲ ವೆಬ್​ಸೈಟ್ ವಿಸಿಟ್ ಮಾಡಿದ್ದಾರೆ. ಅಲ್ಲದೇ ಅಶ್ಲೀಲ ಪೊಟೋವನ್ನು ನೋಡಿತ್ತ, ಪೊಟೋ ಮೇಲೆ ಕೈಯಾಡಿಸುತ್ತ ಕಾಲಹರಣ ಮಾಡಿದ್ದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಇಲಾಖೆಯ ಎಇಇ ಲಕ್ಷ್ಮಣ ನಾಯ್ಕ್.

ಇನ್ನು ಸಭೆಯ ವೇಳೆ ಮಹಿಳಾ ಅಧಿಕಾರಿಯಾದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ ಕೂಡ ಆನ್ಲೈನ್ ಶಾಪಿಂಗ್ ವೇಬ್ ನಲ್ಲಿ ಬ್ಯುಸಿಯಾಗಿದ್ದರು.ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾದ ಅಧಿಕಾರಿಗಳು ಈ ರೀತಿಯ  ದುರ್ವರ್ತನೆ ತೋರಿದ್ದಾರೆ.

ಈ ಬಗ್ಗೆ ಜಿಲ್ಲಾ ಸಿಇಓ ಸ್ನೇಹಲ್ ಅವರನ್ನ ಕೇಳಿದ್ರೆ, ಮೊಬೈಲ್ ಬಳಕೆ ಮಾಡುತ್ತ ಕಾಲಹರಣ ಮಾಡಿದ ಇಬ್ಬರು ಅಧಿಕಾರಿಗಳು ನೋಟಿಸ್ ನೀಡುವುದರ ಜತೆಗೆ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ಬಳಕೆ ಮಾಡಬಾರದೆಂಬ ಉದ್ದೇಶ ದಿಂದ ಮೊಬೈಲ್ ಜಾಮರ್ ಅಳವಡಿಸಲಾಗಿದೆ, ಇದನ್ನ ಜಾರಿಗೆ ತರಲಾಗುತ್ತದೆ ಎಂದಿದ್ದಾರೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...