Kodagu: ಸ್ಥಳೀಯರ ರಾಜಕೀಯ ಕುತಂತ್ರಕ್ಕೆ ಬೀದಿಗೆ ಬಿದ್ದ ಕುಟುಂಬ; ಮುಂದೇನು?

ಈ ಕುರಿತು ಪಂಚಾಯಿತಿ ಪಿಡಿಓ ಆಯಿಷಾ ಅವರನ್ನು ಕೇಳಿದರೆ ಗ್ರಾಮದವರು ಪಂಚಾಯಿತಿಗೆ ದೂರು ಬರೆದಿದ್ದರು. ಅದನ್ನು ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತು. ತಾಲ್ಲೂಕು ಆಡಳಿತ ಮನೆ ತೆರವು ಮಾಡಿಸಿದೆ ಎಂದು ಹೇಳುತ್ತಿದ್ದಾರೆ.

ಮನೆ ಖಾಲಿ ಮಾಡಿಸಿರೋದು

ಮನೆ ಖಾಲಿ ಮಾಡಿಸಿರೋದು

  • Share this:
ಕೊಡಗು: ಸ್ಥಳೀಯರು ಮಾಡುತ್ತಿರುವ ಕುತಂತ್ರದ ರಾಜಕೀಯಕ್ಕೆ ಕುಟುಂಬವೊಂದು ಚಳಿ, ಮಳೆಯ ನಡುವೆಯೂ ಬೀದಿಯಲ್ಲಿ ಬದುಕು ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಕೊಡಗು (Kodagu) ಜಿಲ್ಲೆ ಕುಶಾಲನಗರ (Kushalanagra) ತಾಲೂಕಿನ ಸೀಗೆಹೊಸೂರಿನ ಸತ್ಯವ್ರತ ಮತ್ತು ಪಾರ್ವತಿ ಎಂಬುವರ ಕುಟುಂಬವನ್ನು ತಾಲೂಕು ಆಡಳಿತ ಯಾವುದೇ ನೋಟಿಸ್ ಕೂಡ ನೀಡದೆ ಅವರಿದ್ದ ಮನೆಯಿಂದ ಏಕಾಏಕಿ ಹೊರಹಾಕಿ, ಮನೆಯನ್ನು ಲಾಕ್ ಮಾಡಿದೆ. ರೈತರು ತಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆಯಲು ಮತ್ತು ಇತರೆ ರೈತರಿಗೆ ರೇಷ್ಮೆ ಸಾಕಾಣಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲು ಅನುಕೂಲವಾಗುವಂತೆ ರೇಷ್ಮೆ ಇಲಾಖೆ ಅನುದಾನ ನೀಡಿತ್ತು. ಅದು ಕೂಡ ಹತ್ತು ವರ್ಷಗಳ ಅವಧಿಗೆ ಟೈಮ್ ಬಾಂಡ್ ಮಾಡಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಈರಪ್ಪ ಅವರು 1979 ರಿಂದ 1786 ರವರೆಗೆ ರೇಷ್ಮೆ ಇಲಾಖೆಯಿಂದ ಸರ್ಕಾರದ ಸಹಾಯಧನ ಪಡೆದು ಒಂದು ಕಟ್ಟಡ ನಿರ್ಮಿಸಿ ರೇಷ್ಮೆ ಬೆಳೆ ಮಾಡುವುದರ ಜೊತೆಗೆ ಸ್ಥಳೀಯ ರೈತರಿಗೆ ತರಬೇತಿ ನೀಡಿದ್ದರು.

ಆ ಅವಧಿ ಮುಗಿದ ನಂತರ ರೇಷ್ಮೆ ಕೃಷಿಯನ್ನು ಈರಪ್ಪ ಕೈಬಿಟ್ಟಿದ್ದರು. ರೇಷ್ಮೆ ಇಲಾಖೆ ಕೂಡ ಮಾಡಿಕೊಂಡಿದ್ದ ಒಪ್ಪಂದ ಮುಗಿದಿದ್ದರಿಂದ ಎಲ್ಲವೂ ಮುಗಿಯಿತು ಎಂದು ಸುಮ್ಮನಾಗಿತ್ತು. ಇದಾದ ಮೇಲೆ ಈರಪ್ಪ ಅವರ ಮಗ ಸತ್ಯವ್ರತ ಮತ್ತು ಪಾರ್ವತಿ ದಂಪತಿಗಳ ಕುಟುಂಬ ಈ ಕಟ್ಟಡದಲ್ಲಿ ತಮ್ಮ ವಾಸ ಆರಂಭಿಸಿತ್ತು.

administration vacate house without notice rsk mrq
ಮನೆ ಖಾಲಿ ಮಾಡಿಸಿರೋದು


ಇದನ್ನೂ ಓದಿ:  Siddaramaiah Song: ಸಿದ್ದರಾಮಯ್ಯ ಬರ್ತ್ ಡೇಗೆ ಸಾಂಗ್ ರಿಲೀಸ್: ‘ಮುಂದಿನ ಸಿಎಂ’ ಬೆಂಕಿಗೆ ಬಿತ್ತು ತುಪ್ಪ!

ಕಳೆದ 25 ವರ್ಷಗಳಿಂದ ಇದೇ ಕಟ್ಟಡದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಅದಕ್ಕೆ ಪಂಚಾಯಿತಿಯಿಂದ ತಮ್ಮ ಹೆಸರಿನಲ್ಲಿ ಕಂದಾಯವನ್ನು ಪಾವತಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳಿಂದ ಗ್ರಾಮದ ಕೆಲವರು ಸಂಚು ರೂಪಿಸಿ ಇದು ರೇಷ್ಮೆ ಇಲಾಖೆಯ ಕಟ್ಟಡ, ಗ್ರಾಮದ ಹತ್ತು ಜನರು ಅನುಕೂಲವಾಗಲೆಂದು ಕಟ್ಟಡ ನಿರ್ಮಿಸಲಾಗಿತ್ತು.

administration vacate house without notice rsk mrq
ಮನೆ ಖಾಲಿ ಮಾಡಿಸಿರೋದು


ಗ್ರಾಮಸ್ಥರಿಂದಲೇ ತಾಲೂಕಾಡಳಿತಕ್ಕೆ ದೂರು

ಇದೀಗ ಯಾರೋ ಖಾಸಗಿಯವರು ಅದರಲ್ಲಿ ಅನಧಿಕೃತವಾಗಿ ಜೀವನ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದಾರೆ. ಈ ದೂರು ಆಧಿರಿಸಿದ ಕುಶಾಲನಗರ ತಾಲ್ಲೂಕು ಆಡಳಿತ ಜುಲೈ ತಿಂಗಳ ಕೊನೆ ವಾರದಲ್ಲಿ ಸತ್ಯವ್ರತ ಮತ್ತು ಪಾರ್ವತಿ ಅವರ ಕುಟುಂಬಕ್ಕೆ ಕನಿಷ್ಟ ನೋಟಿಸ್ ನೀಡದೇ ಮನೆಯಿಂದ ಹೊರ ಹಾಕಿದೆ.

ಇಬ್ಬರು ಹೆಣ್ಣು ಮಕ್ಕಳಿರುವ ಕುಟುಂಬವನ್ನು ಹೀಗೆ ಏಕಾಏಕಿ ಮನೆಯಿಂದ ಹೊರ ಹಾಕಿದ ಪರಿಣಾಮ ಇಡೀ ಕುಟುಂಬ ಈಗ ಕಂಗಾಲಾಗಿದ್ದು, ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮಲಗುವುದಕ್ಕೂ ಜಾಗವಿಲ್ಲದೇ ದನಗಳನ್ನು ಕಟ್ಟುತ್ತಿದ್ದ ಶೆಡ್ಡಿನಲ್ಲಿಯೇ ಕುಟುಂಬ ಅಡುಗೆ ಮಾಡಿ, ರಾತ್ರಿ ಅಲ್ಲಿಯೇ ಮಲಗಿ ಜೀವನ ಸಾಗಿಸುತ್ತಿದೆ.

administration vacate house without notice rsk mrq
ಮನೆ ಖಾಲಿ ಮಾಡಿಸಿರೋದು


ಪಿಡಿಓ ಹೇಳಿದ್ದೇನು?

ಈ ಕುರಿತು ಪಂಚಾಯಿತಿ ಪಿಡಿಓ ಆಯಿಷಾ ಅವರನ್ನು ಕೇಳಿದರೆ ಗ್ರಾಮದವರು ಪಂಚಾಯಿತಿಗೆ ದೂರು ಬರೆದಿದ್ದರು. ಅದನ್ನು ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತು. ತಾಲ್ಲೂಕು ಆಡಳಿತ ಮನೆ ತೆರವು ಮಾಡಿಸಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:  Devaramane Trekking: ಭೂಮಿಯ ಮೇಲಿರುವ ದೇವರ ಮನೆ; ಚಾರಣಿಗರ ಮನಸೆಳೆಯುವ ಭೂ ಲೋಕದ ಸ್ವರ್ಗದ ಮಾಹಿತಿ

ಕಳೆದ 25 ವರ್ಷಗಳಿಂದ ಸತ್ಯವ್ರತ ಅವರು ಇದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಕೂಡಿಗೆ ಗ್ರಾಮ ಪಂಚಾಯಿತಿಗೆ ಕಂದಾಯ ಕಟ್ಟಿದ್ದಾರೆ. ನಿಯಮ ಪ್ರಕಾರ ಈ ಮನೆ ಸರ್ಕಾರಿ ಭೂಮಿಯಲ್ಲಿಯೇ ಇದ್ದರೂ ನಿರಂತರ 12 ವರ್ಷಗಳ ಕಾಲ ಅದರಲ್ಲಿ ವಾಸವಾಗಿದ್ದರೆ ಆ ಜಾಗ ವಾಸಿಸುವವನದೇ ಆಗಿರುತ್ತದೆ.

administration vacate house without notice rsk mrq
ಮನೆ ಖಾಲಿ ಮಾಡಿಸಿರೋದು


ನೋಟಿಸ್ ನೀಡದೇ ತೆರವು

ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಕನಿಷ್ಠ ನೋಟಿಸ್ ಅನ್ನು ನೀಡದೆ ಮನೆಯ ಎಲ್ಲಾ ವಸ್ತುಗಳನ್ನು ಹೊರಹಾಕಿ ಕುಟುಂಬವನ್ನು ಬೀದಿಗೆ ಬೀಳುವಂತೆ ಮಾಡಿರುವುದರ ಹಿಂದೆ ರಾಜಕೀಯ ಕುತಂತ್ರದ ಮೇಲಾಟವಿದೆ ಎನ್ನಲಾಗುತ್ತಿದೆ.
Published by:Mahmadrafik K
First published: