Seemanth Kumar: ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಎಸಿಬಿ ಎಡಿಜಿಪಿ! ಕಾರಣ ಏನು ಗೊತ್ತಾ?

ಕಳೆದ ವಾರವಷ್ಟೇ  ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಎಸಿಬಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳ 'ವಸೂಲಿ ಕೇಂದ್ರ'ವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

  • Share this:
ಬೆಂಗಳೂರು: ಎಸಿಬಿ (ACB) ವಿರುದ್ಧ ಹಾಗೂ ತಮ್ಮ ವಿರುದ್ಧ ಗುಡುಗಿದ್ದ ಹೈಕೋರ್ಟ್ ನ್ಯಾಯಮೂರ್ತಿ (High Court Justice) ಎಚ್‌.ಪಿ. ಸಂದೇಶ್ (HP Sandesh) ವಿರುದ್ಧ ಎಸಿಬಿ ಎಡಿಜಿಪಿ (ACB ADGP) ಸೀಮಂತ್ ಕುಮಾರ್ (Seemanth Kumar) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ವಸೂಲಿ ಕೇಂದ್ರವಾಗಿದೆ ಅಂತ ನ್ಯಾಯಮೂರ್ತಿ ಸಂದೇಶ್ ಆರೋಪಿಸಿದ್ದರು. ನ್ಯಾಯಮೂರ್ತಿಗಳ ವಿರುದ್ಧ ಎಡಿಜಿಪಿ ಸೀಮಂತ್ ಕುಮಾರ್ ಅವರು ನ್ಯಾ. ಸಂದೇಶ್ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಇನ್ನೂ ವಿಚಾರಣೆಗೆ ಸ್ವೀಕರಿಸಿಲ್ಲ. ಹೀಗಾಗಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯ ತುರ್ತು ವಿಚಾರಣೆಗೆ ಇಂದು ಸಿಜೆಐ ಎನ್.ಎ. ರಮಣ (CIJ N.A. Ramana) ಅವರಿದ್ದ ನ್ಯಾಯಪೀಠದ ಎದುರು ಮನವಿ ಮಾಡಲಾಯಿತು.


ನ್ಯಾಯಮೂರ್ತಿ ಸಂದೇಶ್ ಆರೋಪಿಸಿದ್ದರು?

ಕಳೆದ ವಾರವಷ್ಟೇ  ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಎಸಿಬಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭ್ರಷ್ಟಾಚಾರ ನಿಗ್ರಹ ದಳ 'ವಸೂಲಿ ಕೇಂದ್ರ'ವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಭ್ರಷ್ಟಾಚಾರ ಹೊರಗೆಳೆದಿದ್ದಕ್ಕೆ ವರ್ಗಾವಣೆ ಬೆದರಿಕೆ

ಇದಾದ ಬಳಿಕ ಈ ರೀತಿ ಎಸಿಬಿ ತರಾಟೆಗೆ ತೆಗೆದುಕೊಂಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ನ್ಯಾಯಮೂರ್ತಿ ಸಂದೇಶ್ ಗಂಭೀರ ಆರೋಪ ಮಾಡಿದ್ಗರು. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್‌ ಫುಲ್‌ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್‌ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ," ಎಂದು ಗುಡುಗಿದರು.

ಇದನ್ನೂ ಓದಿ: Jayalalitha: ಜಯಲಲಿತಾ ತಂದೆಯೇ ನನ್ನ ತಂದೆ, ಅವ್ರ ಆಸ್ತಿಯಲ್ಲಿ ನನಗೂ ಪಾಲು ಬೇಕು! ಕೋರ್ಟ್ ಮೆಟ್ಟಿಲೇರಿದ ವೃದ್ಧ

ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂಗೆ ಮನವಿ

ಇನ್ನು ನ್ಯಾಯಮೂರ್ತಿ ಸಂದೇಶ್ ವಿರುದ್ಧ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಹಾಗೂ ತಮ್ಮ ವಿರುದ್ಧ ಭಾರಿ ಟೀಕೆ ಮಾಡಿರುವುದನ್ನು ಪ್ರಶ್ನಿಸಿ ನ್ಯಾ. ಸಂದೇಶ್ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಇನ್ನೂ ವಿಚಾರಣೆಗೆ ಸ್ವೀಕರಿಸಿಲ್ಲ. ಹಾಗಾಗಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯ ತುರ್ತು ವಿಚಾರಣೆಗೆ ಸೋಮವಾರ ಬೆಳಗ್ಗೆ ಸಿಜೆಐ ಎನ್.ಎ. ರಮಣ ಅವರಿದ್ದ ನ್ಯಾಯಪೀಠದ ಎದುರು ಮನವಿ ಮಾಡಲಾಯಿತು.

ನಾಳೆಗೆ ವಿಚಾರಣೆ ಮುಂದೂಡಿದ ಕೋರ್ಟ್

ಆಗ ಸಿಜೆ, ನ್ಯಾಯಮೂರ್ತಿ ತಮಗೆ ವರ್ಗಾವಣೆ ಬೆದರಿಕೆ ಇದೆ ಎಂದು ಹೇಳಿದ್ದಾರಲ್ಲಾ ಇದು ಅದೇ ಪ್ರಕರಣವೇ? ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಅಲ್ಲವೇ ಎಂದು ಕೇಳಿದರು. ಆಗ ಅರ್ಜಿದಾರರ ಪರ ವಕೀಲರು, ಹೌದು ಅದೇ ಪ್ರಕರಣ. ಆದರೆ, ಇದರಲ್ಲಿ ಎಸಿಬಿಯ ಪಾತ್ರವೇನೂ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಸಿಜೆ, ಸರಿ ಹಾಗಿದ್ದರೆ ಮಂಗಳವಾರ ಅರ್ಜಿ ವಿಚಾರಣೆ ನಡೆಸೋಣ ಎಂದು ಮುಂದೂಡಿದರು.

ಇದನ್ನೂ ಓದಿ: Bengaluru: ಈದ್ಗಾ ಮೈದಾನ ವಿವಾದ, ನಾಳೆ ಚಾಮರಾಜಪೇಟೆ ಬಂದ್; ಶಾಲಾ-ಕಾಲೇಜಿಗೆ ರಜೆ

ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸಬೇಡಿ

ಎಸಿಬಿ ಎಡಿಜಿಪಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಮತ್ತೆ ಗರಂ ಆಗಿದ್ದಾರೆ. ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನಿಯೋಜನೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಎಸಿಬಿಗೆ ಅಧಿಕಾರಿಗಳ ನಿಯೋಜನೆ ವೇಳೆ ಯಾವುದೇ ಪ್ರಭಾವಕ್ಕೆ ಒಳಗಾಗದಂತೆಯೂ ಸೂಚನೆ ನೀಡಿದ್ದಾರೆ. ತಮಗೆ ಬಂದ ಬೆದರಿಕೆ ವಿಚಾರವನ್ನು ಕೋರ್ಟ್ ಆದೇಶದಲ್ಲಿ ಬರೆಸಿದ್ದಾರೆ. ಜುಲೈ 1ರಂದು ತಮಗೆ ಸಹ ನ್ಯಾಯಮೂರ್ತಿಗಳು ಹೇಳಿದ್ದೇನು ಎಂಬುದನ್ನು ಆದೇಶದಲ್ಲಿ ಇಂಚಿಂಚಾಗಿ ಬರೆಸಿದ್ದಾರೆ. ಆದರೆ ತಮ್ಮ ಬಳಿ ಮಾತನಾಡಿದ ಸಹ ನ್ಯಾಯಮೂರ್ತಿಗಳ ಹೆಸರನ್ನು ನ್ಯಾಯಮೂರ್ತಿಗಳು ಬಹಿರಂಗಪಡಿಸಲಿಲ್ಲ.
Published by:Annappa Achari
First published: