ನಾಳೆ ವಿಜಯನಗರ ಉಪಚುನಾವಣೆ; ಶಾಂತಿಯುತ ಮತದಾನಕ್ಕಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ

ಇತ್ತ ಅಂತಿಮ ಪ್ರಚಾರಕ್ಕೆ ತೆರೆಬಿದ್ದ ಬಳಿಕ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮನೆಯಲ್ಲಿಯೇ ಕುಳಿತು ಅಂತಿಮ ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮನೆಯಲ್ಲಿಯೇ ಇದ್ದುಕೊಂಡು ಬೂತ್ ವಾರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿಜಯನಗರ ಕ್ಷೇತ್ರದ ವಿಜಯ ಮಾಲೆಗಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಡೆಸಿದ ಅಂತಿಮ ಕಸರತ್ತಿಗೆ ಈಗ ತೆರೆಬಿದ್ದಿದೆ. ಈಗ ಏನಿದ್ದರೂ ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನ ಮತ ಯಂತ್ರದಲ್ಲಿ ದಾಖಲಿಸುವ ಸಮಯ. ಹೀಗಾಗಿ ನಾಳೆ ನಡೆಯುವ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಸೂಸುತ್ರವಾಗಿ ಮತದಾನ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ನಾಳೆ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6ರವರೆಗೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದು 2,36,206 ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಮತಯಂತ್ರದಲ್ಲಿ ದಾಖಲಿಸಲಿದ್ದಾರೆ.

ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ, ಲೈಂಗಿಕ ಆಸೆಗಳನ್ನು ಪೂರೈಸಿ, ಸಾವಿನಿಂದ ಪಾರಾಗಿ; ನಿರ್ಮಾಪಕನಿಂದ ವಿಕೃತ ಸಲಹೆ

ಇದಕ್ಕಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದಾದ್ಯಂತ 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. 21 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 10 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಹೊರತುಪಡಿಸಿ 3500 ಜನರನ್ನು ಈ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಆದ ಕಡೆ ಪ್ರಕರಣ ದಾಖಲಿಸಲಾಗಿದೆ. ಉಲ್ಲಂಘನೆ ದೂರುಗಳು ಬಂದ ತಕ್ಷಣ ‌ನಮ್ಮ ತಂಡಗಳು ಸ್ಥಳಕ್ಕೆ‌ ಧಾವಿಸಿವೆ ಎಂದು ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿ‌ ನಕುಲ್ ಅವರು, ಚುನಾವಣಾ ಕಾರ್ಯಕ್ಕಾಗಿ ತಹಸೀಲ್ದಾರ್ ರನ್ನು ವಿಶೇಷ ಕರ್ತವ್ಯಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೊಸಪೇಟೆಯ ಸಂಡೂರು ರಸ್ತೆಯಲ್ಲಿರುವ ಲಿಟ್ಲ್ ಪ್ಲವರ್ ಕಾನ್ವೆಂಟ್ ಸ್ಕೂಲ್ ನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಯಿತು. 60 ವಾಹನಗಳ ಬಳಕೆ ಮಾಡಲಾಗುತ್ತಿದ್ದು ಚುನಾವಣಾ ಕಾರ್ಯಕ್ಕೆ 40 ಬಸ್‍ಗಳು, 20 ಮಿನಿ ಟೆಂಪೋ‌ ವಾಹನಗಳನ್ನು ಉಪಯೋಗಿಸಲಾಗುತ್ತಿದೆ. ಈ‌ ಉಪಚುನಾವಣೆಯಲ್ಲಿ ಅಗತ್ಯಕ್ಕಿಂತ ಶೇ.20ರಷ್ಟು ಮತಯಂತ್ರಗಳು ಹೆಚ್ಚಾಗಿವೆ ಮತ್ತು ಇದೇ‌ ಮೊದಲ ಬಾರಿಗೆ ಎಂ-3 ಮಿಶನ್ ಗಳನ್ನು ಉಪಯೋಗಿಸಲಾಗುತ್ತಿದೆ. ಯಾವುದೇ ರೀತಿಯ ಮತಯಂತ್ರಗಳ ಕೊರತೆ ಆಗದಂತೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಇನ್ನೂ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಒಟ್ಟು 500 ಭದ್ರತಾ ಸಿಬ್ಬಂದಿ ಹಾಗೂ 2 ಕೆ.ಎಸ್.ಆರ್.ಪಿ ಮತ್ತು 1 ತೆಲಂಗಾಣ ಪೊಲೀಸ್ ಪಡೆಯನ್ನು ಈ‌ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಕೆ ಬಾಬಾ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್​​​ ಷಡ್ಯಂತ್ರ, ಕುತಂತ್ರ ಏನೂ ನಡೆಯಲ್ಲ; ಸಚಿವ ಶ್ರೀರಾಮುಲು

ಇತ್ತ ಅಂತಿಮ ಪ್ರಚಾರಕ್ಕೆ ತೆರೆಬಿದ್ದ ಬಳಿಕ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮನೆಯಲ್ಲಿಯೇ ಕುಳಿತು ಅಂತಿಮ ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಮನೆಯಲ್ಲಿಯೇ ಇದ್ದುಕೊಂಡು ಬೂತ್ ವಾರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಪ್ರಮುಖ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಅಂತಿಮ ಹಂತದ ಕಸರತ್ತು ಆರಂಭಿಸಿದ್ದಾರೆ.  ಅದೇನೇ ಇರಲಿ, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನ ಮತಯಂತ್ರದಲ್ಲಿ ದಾಖಲಿಸಲಿದ್ದಾರೆ.
First published: