lok sabha election 2019: 'ನರೇಂದ್ರ ಮೋದಿ ದೇಶದ ನಂಬರ್​1 ಕ್ರಿಮಿನಲ್, ಆತನಿಗೆ ಸರಿಸಾಟಿ ಯಾರೂ ಇಲ್ಲ'; ನಟಿ ವಿಜಯಶಾಂತಿ

ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿಯಿಂದ ದೇಶದ ಕೊಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು. ಪರಿಸ್ಥಿತಿ ಹೀಗಿರಬೇಕಾದರೆ ಮೋದಿಗೆ ಮತ ಹಾಕಿ ಎಂದು ನಾನು ಹೇಗೆ ಹೇಳಲಿ? ಎಂದು ನಟಿ ವಿಜಯಶಾಂತಿ ಪ್ರಶ್ನೆ ಮಾಡಿದ್ದಾರೆ.

MAshok Kumar | news18
Updated:April 20, 2019, 1:00 PM IST
lok sabha election 2019: 'ನರೇಂದ್ರ ಮೋದಿ ದೇಶದ ನಂಬರ್​1 ಕ್ರಿಮಿನಲ್, ಆತನಿಗೆ ಸರಿಸಾಟಿ ಯಾರೂ ಇಲ್ಲ'; ನಟಿ ವಿಜಯಶಾಂತಿ
ಬಹುಭಾಷಾ ನಟಿ ವಿಜಯಶಾಂತಿ.
MAshok Kumar | news18
Updated: April 20, 2019, 1:00 PM IST
ಕಲಬುರ್ಗಿ: ಮಾಯಾ ಮಾತುಗಳನ್ನಾಡಿ ಜನರನ್ನು ಮೋಸಗೊಳಿಸುವ ನಂಬರ್​1 ಕ್ರಿಮಿನಲ್ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ಆತನಂತಹ ಕ್ರಿಮಿನಲ್​ನನ್ನು ನಾನು ನೋಡಿಯೇ ಇಲ್ಲ ಎಂದು ಬಹುಭಾಷಾ ನಟಿ ವಿಜಯಶಾಂತಿ ಮೋದಿ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ್ದಾರೆ.

ಶುಕ್ರವಾರ ರಾತ್ರಿ ಕಲಬುರ್ಗಿಯ ಸೇಡಂ ತಾಲೂಕಿನ ಮುಧೋಳದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಮತಯಾಚಿಸಲು ಆಗಮಿಸಿದ್ದ ವಿಜಯಶಾಂತಿ, “ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿಯಿಂದ ದೇಶದ ಕೊಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು.

ಇದನ್ನೂ ಓದಿ : ಮೋದಿ ಭಯೋತ್ಪಾದಕನಂತೆ ಕಾಣಿಸುತ್ತಾರೆ, ಜನರನ್ನು ಪ್ರೀತಿಸುವ ಬದಲು ಹೆದರಿಸುತ್ತಾರೆ; ವಿಜಯಶಾಂತಿ ಹೊಸ ವಿವಾದ

ಪರಿಸ್ಥಿತಿ ಹೀಗಿರಬೇಕಾದರೆ ಮೋದಿಗೆ ಮತ ಹಾಕಿ ಎಂದು ನಾನು ಹೇಗೆ ಹೇಳಲಿ? ಒಂದು ವೇಳೆ ಆತನ ಸುಳ್ಳನ್ನು ನಂಬಿ ನಾವು ಮತ ಹಾಕಿದರೆ ನಮ್ಮ ಸಮಾಧಿಯನ್ನು ನಾವೇ ತೋಡಿಕೊಂಡಂತೆ. ಆತ ಸುಳ್ಳು ಹೇಳುವುದರಲ್ಲಿ ನಂಬರ್.1 ಕ್ರಿಮಿನಲ್. ಇದೇ ಕಾರಣಕ್ಕೆ ನೀವು ಮೋಸ ಹೋಗಬಾರದು ಎಂಬ ಉದ್ದೇಶದಿಂದ ಇಷ್ಟು ದೂರು ಬಂದಿದ್ದೇನೆ ” ಎಂದು ಕಟು ಶಬ್ಧಗಳ ಮೂಲಕ ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.



ಆರೋಪವನ್ನು ಮುಂದುವರೆಸಿದ್ದ ವಿಜಯಶಾಂತಿ, “ಕಳೆದ 5 ವರ್ಷದಲ್ಲಿ ಮೋದಿ ಏನನ್ನೂ ಮಾಡಿಲ್ಲ. ರೈತರು, ಯುವಕರು, ಮಹಿಳೆಯರು ಯಾರೂ ಉದ್ದಾರವಾಗಿಲ್ಲ. ಆತನ ವಿರುದ್ಧ ಸುದ್ದಿ ಹಾಕಿದರೆ ಅಂತಹ ಮೀಡಿಯಾಗಳನ್ನೇ ಮೋದಿ ಸರ್ವನಾಶ ಮಾಡ್ತಾರೆ. ಇದೇ ಕಾರಣಕ್ಕೆ ಮೋದಿಯನ್ನು ಕಂಡರೆ ಮೀಡಿಯಾಗಳಿಗೂ ಭಯವಿದೆ. ಪರಿಣಾಮ ಮಿಡಿಯಾಗಳು ದಿನನಿತ್ಯ ಮೋದಿ ಭಜನೆ ಮಾಡುತ್ತಿವೆ. ಆದರೆ, ಇದು ಜನ ಎಚ್ಚೆತ್ತುಕೊಳ್ಳಲು ಇದು ಸೂಕ್ತ ಸಮಯ. ಇಂತಹ ವ್ಯಕ್ತಿಯನ್ನು ನಂಬಿ ಮೋಸ ಹೋಗುವುದಕ್ಕಿಂತ ಸೂಕ್ತ ವ್ಯಕ್ತಿಗಳನ್ನು ಆರಿಸುವುದು ಉತ್ತಮ. ಅದನ್ನು ಮತದಾರರೆ ನಿಶ್ಚಯಿಸಲಿ” ಎಂದು ಕರೆನೀಡಿದ್ದಾರೆ.ಇದನ್ನೂ ಓದಿ : ಟಾಲಿವುಡ್​​ನಲ್ಲಿ ನಟಿ ವಿಜಯಶಾಂತಿ ಸೆಕೆಂಡ್​ ಇನ್ನಿಂಗ್ಸ್​: ಸ್ಟಾರ್ ನಟನ​ ಜತೆ ತೆರೆ ಹಂಚಿಕೊಳ್ಳಲಿರುವ ಲೇಡಿ ಸೂಪರ್​ ಸ್ಟಾರ್​..!

ಕಳೆದ ಮಾರ್ಚ್​ ತಿಂಗಳಲ್ಲಿ ತೆಲಂಗಾಣದ ಶಂಶಾಬಾದ್​ನಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲೂ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ವಿಜಯಶಾಂತಿ, "ಪ್ರಧಾನಿ ನರೇಂದ್ರ ಮೋದಿ ಓರ್ವ  ಭಯೋತ್ಪಾದಕನಂತೆ ಕಾಣಿಸುತ್ತಿದ್ದಾನೆ" ಎಂದು ಏಕವಚನದಲ್ಲೇ ದಾಳಿ ನಡೆಸುವ ಮೂಲಕ ಕೆಲಕಾಲ ರಾಷ್ಟ್ರಮಟ್ಟದ ಸುದ್ದಿಕೇಂದ್ರದಲ್ಲಿದ್ದರು.

 

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ