ನಟಿ ವಿಜಯಲಕ್ಷ್ಮೀ ಪರಾರಿ ಪ್ರಕರಣ: ಮಗಳು ಬಾರದ ಕೊರಗಲ್ಲೇ ಪ್ರಾಣಬಿಟ್ಟ ತಾಯಿ

ತಾಯಿ ಜೀವನ್ಮರಣ ಹೋರಟ ನಡೆಸುತ್ತಿದ್ದು ಬರುವಂತೆ ನಟಿ ತಂದೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ಆದರೂ ಕೂಡ ನಟಿ ವಿಜಯಲಕ್ಷ್ಮೀ ಆಗಮಿಸಲಿಲ್ಲ. ಇದೇ ಕೊರಗಿನಲ್ಲಿ ನಾಯಕ ನಟಿ ತಾಯಿ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರಕ್ಕೂ ಮಗಳು ಬಾರದ ಹಿನ್ನೆಲೆ ಊರಿನ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

news18-kannada
Updated:January 14, 2020, 4:41 PM IST
ನಟಿ ವಿಜಯಲಕ್ಷ್ಮೀ ಪರಾರಿ ಪ್ರಕರಣ: ಮಗಳು ಬಾರದ ಕೊರಗಲ್ಲೇ ಪ್ರಾಣಬಿಟ್ಟ ತಾಯಿ
ನಿರ್ದೇಶಕ ಅಂಜಿನಪ್ಪ ಮತ್ತು ನಟಿ ವಿಜಯಲಕ್ಷ್ಮೀ
  • Share this:
ಮಂಡ್ಯ (ಜ.14) ಮಗಳು ಸ್ಯಾಂಡಲ್ವುಡ್ ನಿರ್ದೇಶಕನ ಜೊತೆ ಓಡಿಹೋಗಿದ್ದ ಹಿನ್ನೆಲೆ ವಿಷ ಕುಡಿದಿದ್ದ ನಟಿ ವಿಜಯಲಕ್ಷ್ಮೀ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

ಮನೆಯವರ ವಿರೋಧ ಹಿನ್ನೆಲೆ ತಾನು ಇಷ್ಟಪಟ್ಟ ನಿರ್ದೇಶಕನ ಜೊತೆ ಓಡಿ ಹೋದ ಹಿನ್ನೆಲೆ ನಟಿ ವಿಜಯಲಕ್ಷ್ಮೀ ತಾಯಿ, ಅಜ್ಜಿ ಮರ್ಯಾದೆಗಂಜಿ ವಿಷ ಸೇವಿಸಿದ್ದರು. ಅಂದೇ ಹೀರೋಯಿನ್​ ಅಜ್ಜಿ ಅಸುನೀಗಿದ್ದಾರೆ. ತಾಯಿ ಗಂಭೀರ ಸ್ಥಿತಿಯಲ್ಲಿದ್ದರು.

ತಾಯಿ ವಿಷ ಸೇವಿಸಿದ ವಿಷಯ ತಿಳಿದಾಕ್ಷಣ ನಟಿ ವಿಜಯಲಕ್ಷ್ಮೀ ಇದು ಎಲ್ಲಾ ಕೇವಲ ನಾಟಕ. ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವೆಲ್ಲೂ ಓಡಿಹೋಗಿಲ್ಲ. ನಮ್ಮನ್ನು ಬಿಟ್ಟುಬಿಡು ಎಂದು ಮನವಿ ಮಾಡಿದ್ದರು.

ಅಷ್ಟೇ ಅಲ್ಲದೇ ತಾಯಿ ಜೀವನ್ಮರಣ ಹೋರಟ ನಡೆಸುತ್ತಿದ್ದು ಬರುವಂತೆ ನಟಿ ತಂದೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ಆದರೂ ಕೂಡ ನಟಿ ವಿಜಯಲಕ್ಷ್ಮೀ ಆಗಮಿಸಲಿಲ್ಲ. ಇದೇ ಕೊರಗಿನಲ್ಲಿ ನಾಯಕ ನಟಿ ತಾಯಿ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರಕ್ಕೂ ಮಗಳು ಬಾರದ ಹಿನ್ನೆಲೆ ಊರಿನ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ

ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಅಂಜಿನಪ್ಪ ಮತ್ತು ನಟಿ ವಿಜಯಲಕ್ಷ್ಮೀ ಇವರಿಬ್ಬರೂ ನಾಪತ್ತೆಯಾಗಿದ್ದರು. ನಟಿ ನಾಪತ್ತೆಯಾದ ಹಿನ್ನೆಲೆ  ಮುಂದಿನ ಚಿತ್ರಗಳಿಗೆ ನಟಿಗೆ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರು ಆಕೆಯ ಮನೆ ಬಾಗಿಲಿಗೆ ಬಂದು ವಿಚಾರಿಸಿದ್ದರು. ಈ ವೇಳೆ, ವಿಜಯಲಕ್ಷ್ಮಿ ನಿರ್ದೇಶಕನ ಜೊತೆ ಓಡಿ ಹೋಗಿರುವುದು ತಿಳಿದು ಬಂದಿತು.

ಇದನ್ನು ಓದಿ: ನಾವೆಲ್ಲೂ ಓಡಿ ಹೋಗಿಲ್ಲ, ಮದುವೆಯಾಗಿದ್ದೇವೆ: ನಿರ್ದೇಶಕ ಮತ್ತು ಹೀರೋಯಿನ್ ಹೇಳಿಕೆಮಗಳು ಓಡಿ ಹೋದ ಸುದ್ದಿ ತಿಳಿದ  ತಾಯಿ ಮತ್ತು ಅಜ್ಜಿ ಮಾನಕ್ಕೆ ಅಂಜಿ ವಿಷ ಸೇವಿಸಿದ್ದರು.  ದುರದೃಷ್ಟಕ್ಕೆ ವೃದ್ಧೆ ಸಾವನ್ನಪ್ಪಿದ್ದಾರೆ. ನಟಿಯ ತಾಯಿ ಗಂಭೀರ ಸ್ಥಿತಿಯಲ್ಲಿದ್ಧಾರೆ. ತನ್ನ ಮಗಳನ್ನು ಆಂಜಿನಪ್ಪ ಕರೆದೊಯ್ದಿದ್ದಾನೆ ಎಂದು ಆ ತಾಯಿ ಆರೋಪಿಸಿದ್ದರು.

ಆದರೆ, ಇದಾದ ಎರಡು ದಿನದ ಬಳಿಕ ರಾಯಚೂರಿನಲ್ಲಿ ಪತ್ತೆಯಾದ ಇವರಿಬ್ಬರು ತಾವು ಇಷ್ಟಪಟ್ಟು ಕಾನೂನು ಬದ್ಧವಾಗಿ ಮದುವೆಯಾಗಿದ್ದು, ತಮ್ಮನ್ನು ತಮ್ಮ ಪಾಡಿಗೆ ಇರಲು ಬಿಡುವಂತೆ ತಿಳಿಸಿದ್ದರು.
First published: January 14, 2020, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading