ನಟಿ ವಿಜಯಲಕ್ಷ್ಮಿ ಸಹೋದರಿ ಆಸ್ಪತ್ರೆಗೆ ದಾಖಲು; ಶಿವರಾಜ್​ ಕುಮಾರ್ ಬಳಿ ವಿಡಿಯೋ ಮೂಲಕ ಸಹಾಯ ಕೇಳಿದ ನಟಿ

ನಟಿ ವಿಜಯ ಲಕ್ಷ್ಮಿ ಇತ್ತೀಚಿನ ವರ್ಷಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ. ಇವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇದೀಗ ಅವರ ಚಿಕಿತ್ಸೆಗೆ ಸಹಾಯ ಕೋರಿದ್ದಾರೆ.

ನಟಿ ವಿಜಯಲಕ್ಷ್ಮಿ.

ನಟಿ ವಿಜಯಲಕ್ಷ್ಮಿ.

 • Share this:
  ಬೆಂಗಳೂರು: ತಮಿಳುನಾಡು ಮತ್ತು ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸದಾ ಒಂದಿಲ್ಲೊಂದು ವಿವಾದಕ್ಕೆ ಒಳಗಾಗುತ್ತಿದ್ದ ನಟಿ ವಿಜಯ ಲಕ್ಷ್ಮಿ ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ತನ್ನ ಸಹೋದರಿಯನ್ನು ಕಾಪಾಡುವ ನಿಟ್ಟಿನಲ್ಲಿ ಅವರು, ನಟ ಶಿವರಾಜ್​ ಕುಮಾರ್​ ಅವರ ಬಳಿ ಸಹಾಯಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡಿನಿಂದ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ನಟಿ ವಿಜಯಲಕ್ಷ್ಮಿ ವಿಡಿಯೋದಲ್ಲಿ ತನ್ನ ಸಹೋದರಿ ಪಡುತ್ತಿರುವ ಕಷ್ಟವನ್ನು ತಿಳಿಸಿದ್ದಾರೆ. ಅಲ್ಲದೆ, ತಾನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಹಣವಿಲ್ಲ. ಹೀಗಾಗಿ ಕನ್ನಡ ನಟರು, ಅದರಲ್ಲೂ ಶಿವಣ್ಣ ಸಹಾಯ ಮಾಡಬೇಕು ಎಂದಿದ್ದಾರೆ.

  ಕನ್ನಡದ ಮಟ್ಟಿಗೆ ವಿಜಯಲಕ್ಷ್ಮಿ ಒಂದು ಕಾಲದಲ್ಲಿ ಬೇಡಿಕೆಯ ನಟಿ. ಅವರು ನಟಿಸಿದ್ದ ನಾಗಮಂಡಲ, ಸೂರ್ಯವಂಶ ಕನ್ನಡದಲ್ಲಿ ಇಂದಿಗೂ ಸಹ ಬಾಕ್ಸ್​ ಆಫೀಸ್​ ಹಿಟ್​ ಚಿತ್ರಗಳಲ್ಲಿ ಒಂದು. ಆದರೆ, ಇವರು ಇತ್ತೀಚಿನ ವರ್ಷಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ. ಇವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇದೀಗ ಅವರ ಚಿಕಿತ್ಸೆಗೆ ಸಹಾಯ ಕೋರಿದ್ದಾರೆ.

  ಹೀಗಾಗಿ ವಿಡಿಯೋ ಮೂಲಕ ಸಹಾಯ ಯಾಚಿಸಿರುವ ನಟಿ ವಿಜಯಲಕ್ಷ್ಮಿ, "ಸಹೋದರಿ ಉಷಾ ಆರೋಗ್ಯದ ಬಗ್ಗೆ ಆತಂಕದಲ್ಲಿ ಇದ್ದೇನೆ. ಅವರ ಪರಿಸ್ಥಿತಿ ಕ್ರಿಟಿಕಲ್ ಆಗಿದೆ. ಗರ್ಭಕೋಶದಲ್ಲಿ ಮೂರು ದೊಡ್ಡ ಗಡಗಳು ಆಗಿದ್ದವು. ಅವು ದೊಡ್ಡದಾಗಿದ್ದರಿಂದ ಕಳೆದ ತಿಂಗಳು 14ರಂದು ವೈದ್ಯರು ಸರ್ಜರಿ ಮಾಡಿದರು. ಆ ಬಳಿಕ ಅವರು ತುಂಬ ವೀಕ್ ಆಗಿದ್ದರು. ನೀರು ಕೂಡ ಕುಡಿಯೋಕೆ ಆಗುತ್ತಿರಲಿಲ್ಲ. ಊಟ ಮಾಡಲು ಕಷ್ಟ ಆಗಿ ಸೋಂಕಿತರು ಇದ್ದಿದ್ದರಿಂದ ಉಷಾ ಅಲ್ಲಿರುವುದು ಬೇಡ ಎಂದು ಡಾಕ್ಟರ್ ಹೇಳಿದರು.

  ಮನೆಗೆ ಕರೆದುಕೊಂಡು ಬಂದ ಬಳಿಕ ಅವರಿಗೆ ಏನೇ ತಿಂದರೂ ಬೀಡಿಂಗ್ ಶುರು ಆಯಿತು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ, ವೈದ್ಯರು ಕೊವಿಡ್ ಇರುವುದರಿಂದ ಇಲ್ಲಿಗೆ ಬರಬೇಡಿ ಎನ್ನುತ್ತಿದ್ದಾರೆ. ಈಗ ಉಷಾ ತುಂಬಾ ವೀಕ್ ಆಗಿದ್ದಾರೆ. ಅವರಿಗೆ ಮಾತನಾಡೋಕೆ ಆಗುತ್ತಿಲ್ಲ.ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸೋಕೆ ನಮ್ಮ ಬಳಿ ದುಡ್ಡಿಲ್ಲ,

  ಇದನ್ನೂ ಓದಿ: Karnataka Covid Death: ರಾಜ್ಯದಲ್ಲಿ ಇಂದು 20,378 ಕೊರೋನಾ ಕೇಸ್ ಪತ್ತೆ, ಬರೋಬ್ಬರಿ 382 ಜನ ಸಾವು!

  ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ. ಈ ಸಂದರ್ಭದಲ್ಲಿ ಎಲ್ಲರೂ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ದುಡ್ಡು ಕೇಳೋಕೆ ನನಗೆ ಬೇಜಾರಾಗುತ್ತಿದೆ. ಕರ್ನಾಟಕದಲ್ಲಿ ರುವ ಜನರು, ಅಭಿಮಾನಿಗಳು ಮತ್ತು ಚಿತ್ರರಂಗದ ಹಿರಿಯರು ದಯವಿಟ್ಟು ಇದನ್ನು ಶಿವಣ್ಣ ಅವರ ಗಮನಕ್ಕೆ ತನ್ನಿ ಎಂದು ಕೇಳಿಕೊಳ್ಳುತ್ತೇನೆ ಇಲ್ಲಿಯೂ ರಜನಿಕಾಂತ್ ಮುಂತಾದ ದೊಡ್ಡ ನಟರು ಇದ್ದಾರೆ ಅವರಿಗೆ ಕರ್ನಾಟಕದಲ್ಲಿ ನಮಗೆ ಸಹಾಯ ಮಾಡುವ ಆಗಲ್ಲ. ಹೀಗಾಗಿ ಶಿವರಾಜ್ ಕುಮಾರ್ ನಮಗೆ ಸಹಾಯ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

  ಇದನ್ನೂ ಓದಿ: Pratap Simha: ಮುಂದುವರೆದ ರೋಹಿಣಿ ಸಿಂಧೂರಿ-ಪ್ರತಾಪ್ ಸಿಂಹ ಜಟಾಪಟಿ; ನಿಮ್ಮಿಂದ ನಾವು ಪಾಠ ಕಲಿಯಬೇಕೆ? ಎಂದ ಸಂಸದ!

  ಆದರೆ, ನಟಿ ವಿಜಯಲಲಷ್ಮಿ ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ, ಅವರ ಸಹೋದರಿ ಕೊರೋನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ನಟಿ ವಿಜಯಲಕ್ಷ್ಮಿ ಯೂ ಸಹ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸಮಯ ಹಲವು ನಟರ ಸಹಾಯ ಕೋರಿದ್ದರು. ತಮಿಳುನಾಡಿನಲ್ಲೂ ಹಿರಿಯ ನಟರ ಸಹಾಯ ಕೋರಿದ್ದರು. ಆದರೆ, ತದನಂತರ ಈ ಪ್ರಕರಣ ದೊಡ್ಡ ವಿವಾದವಾಗಿ ಬದಲಾಗಿತ್ತು ಎಂಬುದು ಉಲ್ಲೇಖಾರ್.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. 
  Published by:MAshok Kumar
  First published: