Actress Vijayalakshmi: ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಾಗಮಂಡಲ ಖ್ಯಾತಿಯ ನಟಿ!

ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಬಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು ನಟಿ ವಿಜಯಲಕ್ಷ್ಮಿ ಹೇಳಿದರು.

ನಟಿ ವಿಜಯಲಕ್ಷ್ಮಿ.

ನಟಿ ವಿಜಯಲಕ್ಷ್ಮಿ.

  • Share this:
ಬೆಂಗಳೂರು: ನಾಗಮಂಡಲ ಖ್ಯಾತಿಯ ನಟಿ‌ ವಿಜಯಲಕ್ಷ್ಮಿ (Actress Vijayalakshmi Mother Died In Bengaluru)) ತಾಯಿ ವಿಜಯ ಸುಂದರಂ (75) (Vijayalakshmi Mother Vijaya Sundaram) ಅವರು  ಇಂದು ಮಧ್ಯಾಹ್ನ ಬೆಂಗಳೂರಿನ ಗಾಂಧಿನಗರದಲಿರುವ ಸಂತೃಪ್ತಿ ಹೋಟೆಲ್​ನಲ್ಲಿ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸಂತೃಪ್ತಿ ಹೋಟೆಲ್​ನಲ್ಲಿ ನಟಿ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಹಾಗೂ ಅಕ್ಕ ಉಷಾ ಅವರು ತಂಗಿದ್ದರು. ಅಮ್ಮನ ದಿಢೀರ್ ನಿಧನದಿಂದ ನಟಿ ವಿಜಯಲಕ್ಷ್ಮೀ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಇಂದು ಚನ್ನೈಗೆ ಹೋಗಲು ಕುಟುಂಬ ಸಿದ್ಧವಾಗಿದ್ದು, ಆದರೆ ಇಂದು ಮಧ್ಯಾಹ್ನ ಅವರ ತಾಯಿ ಹೋಟೆಲ್​ನಲ್ಲಿ ನಿಧನರಾಗಿದ್ದಾರೆ.

ಸಾಕಷ್ಟು ಸಮಸ್ಯೆಯಿಂದ ನೊಂದಿದ್ದ ನಟಿ ವಿಜಯಲಕ್ಷ್ಮಿ ಅವರ ಅಕ್ಕ ಉಷಾ (Vijayalakshmi Sister Usha) ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಕ್ಕನಿಗೆ ಚಿಕಿತ್ಸೆ (Treatment) ಕೊಡಿಸಲೂ ಆಗದೇ ಅಸಹಾಯಕರಾಗಿದ್ದಾರೆ. ಇದೀಗ ತಾಯಿ ಅಕಾಲಿಕ ನಿಧನದಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಹಣಕಾಸಿನ ಮುಗ್ಗಟ್ಟು, ಕೈಯಲ್ಲಿ ಕೆಲಸ ಇಲ್ಲದೆ ಬೀದಿ ಮೇಲಿದ್ದೇನೆ. ನನಗೆ ಸಹಾಯ ಮಾಡಿ, ನನ್ನ ಅಕ್ಕನ ಚಿಕಿತ್ಸೆಗೆ ಹಣ ಇಲ್ಲ. ಇರಲು ಜಾಗವೂ ಇಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು.

ಜೀವನದಲ್ಲಿ ಸಾಕಷ್ಟು ನೊಂದಿದ್ದ ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮೀ ಅವರು ತಾಯಿ ಅಂತ್ಯಕ್ರಿಯೆಯನ್ನು ಎಲ್ಲಿ ಮಾಡೋದು ಎಂಬ ಚಿಂತೆಯಲ್ಲಿದ್ದರು. ಬಳಿಕ ವಿಜಯಲಕ್ಷ್ಮಿಯ ಸಹಾಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಬಾ. ಮಾ ಹರೀಶ್ ಬಂದಿದ್ದಾರೆ. ಸಂತೃಪ್ತಿ ಹೊಟೆಲ್ ಗೆ ಬಂದು ವಿಜಯಲಕ್ಷ್ಮಿಗೆ ಸಾಂತ್ವನ ಹೇಳಿದ್ದಾರೆ.

ಚೆನ್ನೈಯಲ್ಲಿ ಸಮಸ್ಯೆ ಆಗಿ ಬೆಂಗಳೂರಿಗೆ ಬಂದ್ವಿ. ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಅಕ್ಕ, ತಾಯಿ ನನ್ನ ಮಕ್ಕಳ ಸಮ. ಬೆಳಗ್ಗೆ 12 ಗಂಟೆಗೆ ಅಮ್ಮನನ್ನು ನೋಡಿ ಆಘಾತ ಆಯ್ತು. ಕೂಡಲೇ ಹೋಟೆಲ್ ಸಿಬ್ಬಂದಿಯನ್ನು ಕರೆದು ನೋಡಿದಾಗ ಅವರು ಇನ್ನಿಲ್ಲ ಅಂತ ಗೊತ್ತಾಯ್ತು. ಕೂಡಲೇ ಬಾ. ಮಾ ಹರೀಶ್ ಅವರಿಗೆ ತಿಳಿಸಿದೆ. ಅವರು ಬಂದು ಸಹಾಯ ಮಾಡ್ತಿದ್ದಾರೆ. ಸಾಕಷ್ಟು ಹೊಡೆತ ತಿಂದಿದ್ದೇನೆ. ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಹೋಗಿ ಅಲ್ಲಿಯೇ ಅಂತ್ಯ ಕ್ರಿಯೆ ನಡೆಸುತ್ತೇವೆ ಎಂದು ವಿಜಯಲಕ್ಷ್ಮೀ ಅವರು ಹೇಳಿದರು.

ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು. ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ. ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ. ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಬಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ. ನಾನು ಇಲ್ಲೇ ಬದುಕುತ್ತೇನೆ ಎಂದು ನಟಿ ವಿಜಯಲಕ್ಷ್ಮಿ ಹೇಳಿದರು.

ಇದನ್ನು ಓದಿ: Janata Parva 1.0: ನಮ್ಮ ಪಕ್ಷದ ಸೋತ ಅಭ್ಯರ್ಥಿಗಳಿಗೆ ಅನ್ಯ ಪಕ್ಷಗಳಿಂದ ಗಾಳ: ಎಚ್.ಡಿ. ಕುಮಾರಸ್ವಾಮಿ ಆರೋಪ

ಈ  ಹಿಂದೆ ಕೂಡ ನಟಿ ವಿಜಯಲಕ್ಷ್ಮೀ ಅವರು ತಾವು ಸಂಕಷ್ಟದಲ್ಲಿ ಇರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ನಮಗೆ ಇರಲು ಸಹ ಯಾವುದೇ ಮನೆ ಇಲ್ಲ. ಅಕ್ಕನಿಗೆ ಚಿಕಿತ್ಸೆಗೆ ಹಣ ಬೇಕು. ಸಿನಿಮಾದಲ್ಲಿ ನಟಿಸಲು ಅವಕಾಶಗಳು ಇಲ್ಲ. ನನ್ನ ನೆರವಿಗೆ ಯಾರು ಬರುತ್ತಿಲ್ಲ. ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಆರೋಪ ಮಾಡಿದ್ದರು.
Published by:HR Ramesh
First published: