Actress Vijayalakshmi: ನಟಿ ವಿಜಯಲಕ್ಷ್ಮೀ ಮನವಿಗೆ ಕರಗಿದ ಅಭಿಮಾನಿಗಳು; 3 ದಿನಗಳಲ್ಲಿ 7 ಲಕ್ಷ ಹಣ ಸಂದಾಯ

ನಟಿ ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲರಾಗಿದ್ದಾರೆ. ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಎಂದು ಹೇಳಿದ್ದಾರೆ.

ನಟಿ ವಿಜಯಲಕ್ಷ್ಮಿ (File Photo)

ನಟಿ ವಿಜಯಲಕ್ಷ್ಮಿ (File Photo)

 • Share this:
  Actress Vijayalakshmi Pressmeet: ಬೆಂಗಳೂರು: ಅಮ್ಮ ತೀರಿ ಹೋದ ತಕ್ಷಣ ಏನು ತೋಚಲಿಲ್ಲ. ಭಾಮಾ ಹರೀಶ್ ನನಗೆ ಸಹಾಯ ಮಾಡಿದರು. ನನಗೆ ಅಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಸಡನ್ನಾಗಿ ನನ್ನ ಅಕೌಂಟ್ ಬಗ್ಗೆ ಅನುಮಾನ ಬಂದುಬಿಡ್ತು. ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ (Shivaraj Kumar) ಯಶ್ (Rocking Star) Yashಹತ್ತಿರಾನೂ ಮಾತನಾಡಿದ್ದೀನಿ. ವಕೀಲ ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಯ್ತು. ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ. ಎಲ್ಲದಕ್ಕೂ ನಾವು ಭಿಕ್ಷೆ ಬೇಡುತ್ತೇವೆ ಎಂದು ನಟಿ ವಿಜಯಲಕ್ಷ್ಮೀ (Actress Vijayalakshmi) ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಹೇಳಿದರು. ಜೊತೆಗೆ ಹಣ ಸಂದಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

  ಲಾಯರ್ ಜಗದೀಶ್ ಬಗ್ಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲ!

  ನಟಿ ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲರಾಗಿದ್ದಾರೆ. ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ. ನೀವು ಹೀಗೆ ಮಾತನಾಡಿದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಹುಷಾರ್. ಕನ್ನಡ ಚಿತ್ರರಂಗ ಹೇಗೆ ಬೆಳೆದು ಬಂದಿದೆ ಅಂತ ನಮಗೆ ಗೊತ್ತಿದೆ ಎಂದು ಕಿಡಿ ಕಾರಿದರು.

  ನಟಿ ವಿಜಯಲಕ್ಷ್ಮೀ ಖಾತೆಗೆ ಅಭಿಮಾನಿಗಳಿಂದ ಲಕ್ಷ ಲಕ್ಷ ಹಣ ಸಂದಾಯ

   ಎರಡು ದಿನಗಳ ಹಿಂದೆಯಷ್ಟೇ ನಟಿ ವಿಜಯಲಕ್ಷ್ಮೀ ಅವರ ತಾಯಿ ತೀರಿಕೊಂಡರು. ಅಮ್ಮನ ಏಕಾಏಕಿ ಸಾವಿನಿಂದ ವಿಜಯಲಕ್ಷ್ಮೀ ಅವರು ಕಂಗಾಲಾಗಿದ್ದರು. ಈ ವೇಳೆ ಅವರು ಮಾಧ್ಯಮಗಳ ಮುಂದೆ ಬಿಕ್ಕಳಿಸುತ್ತಾ, ಸಹಾಯಕ್ಕೆ ಅಂಗಲಾಚಿದ್ದರು. ಇದೀಗ ನಟಿ ವಿಜಯಲಕ್ಷ್ಮಿಗೆ ಅಭಿಮಾನಿಗಳಿಂದ ಹಣ ಸಂದಾಯವಾಗಿದೆ. ಭಿಕ್ಷೆ ಅಂತ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಮಾಡಿದ್ದ ಮನವಿಗೆ ಸಾವಿರಾರು ಅಭಿಮಾನಿಗಳ ಮನಸು ಕರಗಿ ಹಣ ಸಂದಾಯ ಮಾಡಿದ್ದಾರೆ. ವಿಜಯಲಕ್ಷ್ಮಿ ಮನವಿಗೆ ಸ್ಪಂದಿಸಿದ ಜನ 1 ರೂಪಾಯಿಯಿಂದ ಸಾವಿರದವರೆಗೆ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬರೋಬ್ಬರು ಒಟ್ಟು 6,92,350 ರೂಪಾಯಿ ಸಂದಾಯವಾಗಿದೆ.

  ಇದನ್ನು ಓದಿ: Actress Vijayalakshmi: ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ನಾಗಮಂಡಲ ಖ್ಯಾತಿಯ ನಟಿ!

  ಭಿಕ್ಷೆ ಎಂದಾದರು ತಿಳಿದುಕೊಂಡು ಸಹಾಯ ಮಾಡಿ ಎಂದಿದ್ದ ವಿಜಯಲಕ್ಷ್ಮೀ

  ಚೆನ್ನೈಯಲ್ಲಿ ಸಮಸ್ಯೆ ಆಗಿ ಬೆಂಗಳೂರಿಗೆ ಬಂದ್ವಿ. ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಅಕ್ಕ, ತಾಯಿ ನನ್ನ ಮಕ್ಕಳ ಸಮ. ಅಮ್ಮನ ಏಕಾಏಕಿ ಸಾವು ನನ್ನನ್ನು ಕಂಗೆಡಿಸಿದೆ. ಏನು ಮಾಡುವುದು ಎಂದು ದಿಕ್ಕು ತೋಚದಿದ್ದಾಗ ಭಾಮ ಹರೀಶ್ ಅವರಿಗೆ ಕರೆ ಮಾಡಿದೆ. ಅವರು ಕೂಡಲೇ ಹೋಟೆಲ್​ಗೆ ಬಂದು ಸಹಾಯ ಮಾಡಿದರು. ಅವರ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ.  ಈಗಾಗಲೇ ಸಾಕಷ್ಟು ಹೊಡೆತ ತಿಂದಿದ್ದೇನೆ. ನೀವೆಲ್ಲ ಜೊತೆಗೆ ಇದ್ದೀರಾ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆ ಕೊಡಬೇಕು. ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ. ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ. ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದ ಮೇಲೆ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಬಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ. ನಾನು ಇಲ್ಲೇ ಬದುಕುತ್ತೇನೆ ಎಂದು ನಟಿ ವಿಜಯಲಕ್ಷ್ಮಿ ಹೇಳಿದ್ದರು.
  Published by:HR Ramesh
  First published: