ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದಿದ್ದ ಸ್ಪೀಕರ್​​​; ರಮೇಶ್​​​ ಕುಮಾರ್​​ ವಿವಾದಾತ್ಮಕ ಹೇಳಿಕೆಗೆ ನಟಿ ತಾರಾ ಖಂಡನೆ!

ತನ್ನ ಮೇಲಿನ ಆರೋಪಕ್ಕೆ ಗದ್ಗದಿತರಾಗಿ ಕಣ್ಣೀರಿಟ್ಟ ರಮೇಶ್​​​ ಕುಮಾರ್​​ ಅವರು, ತನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ನಟಿ ತಾರಾ ಕೂಡ ರಮೇಶ್​​​ ಕುಮಾರ್​​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Ganesh Nachikethu
Updated:February 13, 2019, 11:19 AM IST
ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದಿದ್ದ ಸ್ಪೀಕರ್​​​; ರಮೇಶ್​​​ ಕುಮಾರ್​​ ವಿವಾದಾತ್ಮಕ ಹೇಳಿಕೆಗೆ ನಟಿ ತಾರಾ ಖಂಡನೆ!
ತಾರಾ ಮತ್ತು ರಮೇಶ್​​ ಕುಮಾರ್​​
Ganesh Nachikethu
Updated: February 13, 2019, 11:19 AM IST
ಬೆಂಗಳೂರು(ಫೆ.13): ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಸ್ಪೀಕರ್​​ 50 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪದ ಸುತ್ತ ನಿನ್ನೆ ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಈ  ವೇಳೆ ತನ್ನ ಮೇಲಿನ ಆರೋಪಕ್ಕೆ ಗದ್ಗದಿತರಾಗಿ ಕಣ್ಣೀರಿಟ್ಟ ರಮೇಶ್​​​ ಕುಮಾರ್​​ ಅವರು, ತನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ನಟಿ ತಾರಾ ಕೂಡ ರಮೇಶ್​​​ ಕುಮಾರ್​​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ತಾರಾ ಅವರು, ರಮೇಶ್​​ ಅಣ್ಣನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಅವರ ತಾಯಿಯನ್ನು ನೆನೆದು ಸದನದಲ್ಲಿ ಕಣ್ಣೀರಿಟ್ಟ ರಮೇಶಣ್ಣ ಇಂದಿಗೂ ಮಹಿಳೆಯರನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನೀವು ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ. ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಅಣ್ಣ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅತ್ಯಾಚಾರಕ್ಕೆ ಹೋಲಿಸಿಕೊಂಡಿದ್ದರು. ನನ್ನ  ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎನ್ನುವ ಮೂಲಕ ವಿಧಾನಸಭೆಯಲ್ಲಿಯೇ ವಿವಾದಿತ ಹೇಳಿಕೆಯನ್ನು ನೀಡಿದ್ದರು. ನನ್ನ ವಿರುದ್ಧ ಆರೋಪ ಮಾಡಲಾಗಿತ್ತು ಆದರೆ ಅದನ್ನು ಅಲ್ಲಿಗೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಮುಗಿಯುತ್ತಿತ್ತೇನೋ. ಆದರೆ ನಾನು ಈ ವಿಚಾರ ಇಲ್ಲಿಗೆ ತಂದು ಪದೇಪದೇ ನೋವಾಗುತ್ತಿದೆ. ಚರ್ಚೆ ವೇಳೆ ಇಂದು ನನ್ನ ಸ್ಥಿತಿ ಅತ್ಯಾಚಾರ ಸಂಸ್ತ್ರಸ್ತೆಯಂತಾಗಿದೆ ಎಂದಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಮಮತಾ ಬ್ಯಾನರ್ಜಿ: ವಿಪಕ್ಷಗಳ ಬೃಹತ್ ಸಮಾವೇಶ; ಕೇಂದ್ರದ ವಿರುದ್ಧ ರಣಕಹಳೆ!

ಹೀಗೆಯೇ ಮಾತು ಮುಂದುವರೆಸಿದ ಸ್ಪೀಕರ್​​, ಅತ್ಯಾಚಾರದ ಬಳಿಕ ಸಂಸ್ತ್ರಸ್ತೆ ಒಮ್ಮೆ ದೂರು ನೀಡಿ ಕೋರ್ಟ್‌ ಮೊರೆ ಹೋಗುತ್ತಾಳೆ. ಅಲ್ಲಿ ಪ್ರಕರಣ ವಿಚಾರಣೆ ವೇಳೆ ಆರೋಪಿ ಪರ ವಕೀಲರು ಇನ್ನಷ್ಟು ಬಾರಿ ಅತ್ಯಾಚಾರದ ಘಟನೆಯನ್ನು ಸಂತ್ರಸ್ತೆಗೆ ನೆನಪಿಸಿ ಕಿರಿಕಿರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಹೇಗೆ ಅತ್ಯಾಚಾರವಾಯಿತು? ಎಲ್ಲಿ ಅತ್ಯಾಚಾರ ನಡೆಯಿತು? ಯಾವ ಸಮಯಕ್ಕೆ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಇದೇ ಸ್ಥಿತಿ ನನ್ನದು ಎಂದು ವಿಡಂಬನಾತ್ಮಕವಾಗಿ ಹೇಳಿದ್ದರು.

ಇದನ್ನೂ ಓದಿ: 50 ಕೋಟಿ ಲಂಚ ಆರೋಪ: ಸ್ಪೀಕರ್​​ ಕಣ್ಣೀರು ಮತ್ತು ಶಾಸಕರ ಪ್ರತಿಕ್ರಿಯೆ!
Loading...

ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮರೆತು ಸುಮ್ಮನೇಹೊರಟು ಹೋಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಪೊಲೀಸ್​ಗೆ ದೂರು ನೀಡಿದ್ದು ತಪ್ಪಾಯ್ತು. ಸಂತ್ರಸ್ತೆ ಆರೋಪಿ ಜೈಲಿಗೆ ಹೋಗ್ತಾನೆ ಎಂದು ದೂರು ನೀಡಿರುತ್ತಾಳೆ. ಇಲ್ಲಿ ಮಾತ್ರ ವಿಚಾರಣೆ ವೇಳೆ ಆರೋಪಿ ಪರ ವಕೀಲ ಕೇಳುವ ಪ್ರಶ್ನೆಗಳಿಗೆ ಮಹಿಳೆ ಭಾರೀ ನೋವು ಅನುಭವಿಸುತ್ತಾಳೆ. ಅಲ್ಲದೇ ಇನ್ನಷ್ಟು ಬಾರಿ ಅತ್ಯಾಚಾರಕ್ಕೊಳಗಾದ ಹಾಗೇ ಅನಿಸುತ್ತದೆ. ಕೊನೆಗೆ ನ್ಯಾಯ ಸಿಗೊತ್ತೋ ಬಿಡುತ್ತೋ ಗೊತ್ತಿಲ್ಲ. ನೋವು ಮಾತ್ರ ಆಗುತ್ತೆ. ನನಗೂ ಇದೇ ಸ್ಥತಿ ಎದುರಾಗಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ಇಬ್ಬರೂ ಸೇರಿ ನನ್ನ ಬೀದಿಯಲ್ಲಿ ಮಲಗಿಸಿದಂತಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

--------------
ಚಾರಿತ್ರ್ಯವಧೆ ಮಾಡುವುದು ಸಾವಿಗಿಂತಲೂ ಘೋರ: ವಾಜಪೇಯಿ ಮಾತು ಸ್ಮರಿಸಿದ ರಮೇಶ್ ಕುಮಾರ್
First published:February 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...